ಮುಂಬೈ: ಖ್ಯಾತ ಬಾಲಿವುಡ್ ಸ್ಟಾರ್ ರಿಷಿ ಕಪೂರ್ ಇನ್ನಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಿಷಿ ಕಪೂರ್ ಅವರು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಕಳೆದ ಹಲವು ದಶಕಗಳಿಂದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ರಿಷಿ ಕಪೂರ್ ಹಿಟ್ ಸಿನಿಮಾಗಳ ಸರದಾರ ಎಂದೇ ಸಿನಿಪಂಡಿತರು ಬಣ್ಣಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರ ಜೊತೆಗಾರ ನಟ ಎಂದೇ ಅವರನ್ನು ಕರೆಯಲಾಗುತ್ತಿತ್ತು. 1973ರಲ್ಲಿ ‘ಬಾಬಿ’ ಚಿತ್ರದ ಮೂಲಕ ಸಿನ್ಮಾ ಬದುಕು ಆರಂಭಿಸಿದ ರಿಷಿ ಕಪೂರ್’ಗೆ ಹತ್ತಾರು ಪ್ರಶಸ್ತಿಗಳು ಸಿಕ್ಕಿವೆ. ಇವರ ಅಭಿನಯದ ಬಹುತೇಕ ಸಿನಿಮಾಗಳು ಮಧುರ ಹಾಡುಗಳ ಖ್ಯಾತಿಯಿಂದಲೇ ಜನಪ್ರಿಯವಾಗಿವೆ.
ಈ ಕುರಿತು ಸ್ವತಃ ಅವರ ಸಹೋದರ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ. ರಿಷಿ ಕಪೂರ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ರಿಷಿ ಕಪೂರ್ ಅವರು ಆಸ್ಪತ್ರೆಯಲ್ಲಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರಿಗ ಉಸಿರಾಟ ಸಮಸ್ಯೆಯಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ರಣಧೀರ್ ಕಪೂರ್ ಅವರ ಸಹೋದರ ರಣಧೀರ್ ಕಪೂರ್ ಬುಧವಾರವಷ್ಟೇ ಟ್ವೀಟ್ ಮಾಡಿದ್ದರು.
ಮುಂಬೈನ ಹೆಚ್ಎನ್ ರಿಯಲಯನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಿ ಕಪೂರ್ ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.