ಭಾರೀ ಮಳೆ ; ಬೆಂಗಳೂರು ಸುತ್ತಮುತ್ತ ಬೆಳೆನಾಶ; ದ್ರಾಕ್ಷಿ ಬೆಳೆಗಾರರು ಕಂಗಾಲು

ಬೆಂಗಳೂರು: ರಾಜಧಾನಿ ಬೆಂಗಳೂರು ಸುತ್ತಮುತ್ತ ಸುರಿದ ಭಾರೀ ಮಳೆ ರೈತರ ಬದುಕನ್ನು ತತ್ತರಗೊಳಿಸಿದೆ. ಕೋಲಾರ, ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದ್ರಾಕ್ಷಿ, ಹೂವು , ಹಣ್ಣು , ಟೊಮ್ಯಾಟೋ, ತರಕಾರಿ ಬೆಳಗಳು ನಾಶವಾಗಿವೆ. ದೇವನಹಳ್ಳಿ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆ ನಾಶವಾಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.

ಗುರುವಾರ ಬೆಳಿಗ್ಗೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಈ ಗಾಳಿ ಮಳೆಯ ಹೊಡೆತಕ್ಕೆ ಸಿಲುಕಿ ದ್ರಾಕ್ಷಿ ಬೆಲೆ ನೆಲಕಚ್ಚಿದೆ. ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದ ದೇವರಾಜಪ್ಪ ಎಂಬ ರೈತನಿಗೆ ಸೇರಿದ ಸುಮಾರು 50 ರಿಂದ 60 ಟನ್ ದ್ರಾಕ್ಷಿ ಬೆಳೆ ಅಕಾಲಿಕ ಧಾರಾಕಾರ ಮಳೆಗೆ ಮಕಾಡೆ ಮಲಗಿ ಚಾಪೆಯಂತಾಗಿದೆ. ಕಳೆದ ಐದಾರು ವರ್ಷಗಳಿಂದ ಸಾಕಿ ಬೆಳೆಸಿದ್ದ ಸುಮಾರು ಎರಡು ಎಕರೆ ದ್ರಾಕ್ಷಿ ತೋಟ ಈಗ ಕಟಾವಿಗೆ ಸಿದ್ದವಾಗಿತ್ತು. ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಈ ಅನಾಹುತ ಸಂಭವಿಸಿದೆ.

ಕರೋನಾ ಲಾಕ್ ಡೌನ್ ನಿಂದ ಬೇಡಿಕೆಯಿಲ್ಲದ ತತ್ತರಿಸಿ ಹೋಗಿದ್ದ ರೈತರ ಗಾಯದ ಮೇಲೆ ಬರೆ ಎಳೆದಂತೆ ಕೋಲಾರ, ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದ್ರಾಕ್ಷಿ, ಹೂವು , ಹಣ್ಣು , ಟೊಮ್ಯಾಟೋ, ತರಕಾರಿ ಬೆಳಗಳು ನಾಶವಾಗಿವೆ. ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಈ ನಡುವೆ ಬೆಳೆ ನಾಶದಿಂದ ಕಂಗಾಲಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ಸಂಘಟನೆಗಳ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Related posts