ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿವೆ. ಅದರಲ್ಲೂ ಸೈಬರ್ ಕಳ್ಳರು ಬ್ಯಾಂಕ್ ಅಕೌಂಟ್’ಗಳಿಗೆ ಕಣ್ಣ ಹಾಕುತ್ತಿದ್ದು ಇಂತಹ ಸರಣಿ ದೂರುಗಳ ಬಗ್ಗೆ ಬೆಂಗಳೂರಿನ ನೂತನ ಪೊಲೀಸ್ ಆಯುಕ್ತ ಕಮಲ್ ಪಂತ್ ಗಂಭೀರವಾಗಿ ಪರಿಗಣಿಸಿದ್ದಾರೆ. ಇಂತಹಾ ಅಪರಾಧ ಪ್ರಕರಣಗಳ ತಡೆ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಕಾರ್ಯತಂತ್ರ ರೂಪಿಸಿರುವ ಅವರು, ಸೈಬರ್ ಕಳ್ಳರ ಬೆನ್ನತ್ತುವಂತೆ ಸೂಚಿಸಿದ್ದಾರೆ.
ಈ ನಡುವೆ ಬಂಗಳೂರಿನ ಹೆಣ್ಣೂರು, ಬಾಗಲೂರು, ಮತ್ತು ಕೊತ್ತನೂರು ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ವಾಸವಿದ್ದ ವಿದೇಶಿಯರ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರ ತಂಡ, ಹಲವರನ್ನು ಖೆಡ್ಡಾಕ್ಕೆ ಕೆಡವಿದೆ.
ಸುಮಾರು 120 ಅಧಿಕಾರಿಗಳೊಂದಿಗೆ ಶನಿವಾರ ವಿಶೇಷ ಕಾರ್ಯಾಚರಣೆ ಕೈಗೊಂಡು ಸುಮಾರು 85 ವಿದೇಶಿಯರನ್ನು ವಿಚಾರಣೆ ನಡೆಸಿದ್ದಾರೆ. ಸುಮಾರು 20 ಮಂದಿ ಆಫ್ರಿಕಾ ಪ್ರಜೆಗಳು ಮಾನ್ಯತೆಯಿಲ್ಲದ ಪಾಸ್’ಪೋರ್ಟ್, ವೀಸಾ ಹೊಂದಿರುವುದು ಬೆಳಕಿಗೆ ಬಂದಿದೆ. ಇವರಲ್ಲಿ ಭಾರತ, ಅಮೇರಿಕ, ಮತ್ತು ಯುಕೆ ದೇಶಗಳ ನಕಲಿ ಇವರ ಬಳಿ ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಈ ವಿದೇಶಿ ಪ್ರಜೆಗಳು ಸೈಬರ್ ಅಪರಾಧಗಳನ್ನು ಮಾಡುತ್ತಿರುವ ಬಗ್ಗೆ ಶಂಕೆ ಮೂಡಿದ್ದು, ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ನಗರದ ಹೆಣ್ಣೂರು, ಬಾಗಲೂರು, ಮತ್ತು ಕೊತ್ತನೂರು ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ವಾಸವಿದ್ದ, ವಿದೇಶಿಯರ ಮನೆಗಳ ಮೇಲೆ ನಗರದ @CCBBangalore ತಂಡವು 120 ಅಧಿಕಾರಿಗಳೊಂದಿಗೆ ಇಂದು ಮುಂಜಾನೆ ವಿಶೇಷ ಕಾರ್ಯಾಚರಣೆ ಮೂಲಕ ದಾಳಿ ನಡೆಸಿ, 85 ವಿದೇಶಿಯರನ್ನು ತಪಾಸಣೆ ಮಾಡಲಾಗಿ, 20 ಮಂದಿ ಆಫ್ರಿಕಾದ ಪ್ರಜೆಗಳು ಮಾನ್ಯತೆಯಿಲ್ಲದ 1/2 pic.twitter.com/5EVKOvDYBl
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) August 4, 2020
..2/2 ಪಾಸ್ ಪೋರ್ಟ್ & ವೀಸಾ ಹೊಂದಿರುವುದು ಕಂಡು ಬಂದಿರುತ್ತದೆ. ಜೊತೆಗೆ ಇವರಿಂದ ಭಾರತ, ಅಮೇರಿಕ, ಮತ್ತು ಯುಕೆ ದೇಶಗಳ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲ್ಯಾಪ್ ಟಾಪ್ ನ್ನು ವಶಪಡಿಸಿಕೊಳ್ಳಲಾಗಿ, ಇವರುಗಳು ಸೈಬರ್ ಅಪರಾಧಗಳನ್ನು ಮಾಡುತ್ತಿರುವ ಬಗ್ಗೆ ಶಂಕೆ ಮೂಡಿದ್ದು, ತನಿಖೆ ಮುಂದುವರಿದಿದೆ.
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) August 4, 2020