ಅಲಯನ್ಸ್ ವಿವಿ: ‘ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ’.. ಹೀಗೊಂದು ಮಾತು-ಮಂಥನ

ಬೆಂಗಳೂರು: ಸದಾ ಒಂದಿಲ್ಲೊಂದು ಪ್ರಯೋಗಶೀಲ ಅಧ್ಯಯನದಿಂದ ಸುದ್ದಿಯ ಕೇಂದ್ರಬಿಂದುವಾಗುತ್ತಿರುವ ಬೆಂಗಳೂರಿನ ‘ಅಲಯನ್ಸ್ ವಿಶ್ವವಿದ್ಯಾಲಯ’ದಲ್ಲಿ ನಡೆದ  ‘ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ”ವಿಚಾರ ಸಂಕಿರಣ ಅರ್ಥಪೂರ್ಣ ಕಾರ್ಯಕ್ರಮವಾಗಿ ಗಮನಸೆಳೆಯಿತು.  ಅಲಯನ್ಸ್ ಮಹಿಳಾ ಸಬಲೀಕರಣ ಕೇಂದ್ರದ ವತಿಯಿಂದ  ಶನಿವಾರ ನಡೆದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾಲತಿ ಕೃಷ್ಣಮೂರ್ತಿ ಹೊಳ್ಳ, ನಟಿ ಮೇಘನಾ ಗಾಂವ್ಕರ್  ಉದ್ಘಾಟಿಸಿದರು.


ಚಿಂತನಶೀಲ ಯುವಜನ ಸಮೂಹವನ್ನುದ್ದೇಶಿಸಿ ಮಾತನಾಡಿದ ಮಾಲತಿ ಕೃಷ್ಣಮೂರ್ತಿ ಹೊಳ್ಳ, ಮುಂದಿನ ಗುರಿಯೊಂದಿಗೆ ಇಂದಿನ ಕನಸುಗಳನ್ನು ನನಸು ಮಾಡಬೇಕಾದ ಜವಬ್ದಾರಿ ಮಹಿಳೆಯರ ಮೇಲಿದೆ. ಈ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಮಹಿಳೆಯರು ಕೊಡುಗೆ ನೀಡಬೇಕು. ನೂನ್ಯತೆಗಳನ್ನು ಎದುರಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ತಮಗೆ ದೇಹದಲ್ಲಿ ವಿಕಲತೆಯಿರಬಹುದು ಆದರೆ ಆತ್ಮವಿಶ್ವಾಸ, ಗುರಿ ಸಾಧಿಸುವ ಛಲ, ಕನಸುಗಳಲ್ಲಿ ಯಾವುಏ ನ್ಯೂನತೆಯಿಲ್ಲ. ಇದರಿಂದಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ವಿಲೇಚೇರ್ ನನಗೆ ಸಿಂಹಾಸನದಂತಾಗಿದೆ. ಹಾಗಾಗಿ ಮಹಿಳೆಯರು ಉನ್ನತ ಸಾಧನೆಗಳತ್ತ ಗಮನ ಹರಿಸಬೇಕು ಎಂದರು.

ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ದಶಕಗಳ ಹಿಂದೆ ಮಹಿಳೆಯರು ಅಡುಗೆ ಮನೆಯಿಂದ ಹೊರಬರುತ್ತಿರಲಿಲ್ಲ. ಆದರೆ ಇಂದು ಮಹಿಳೆ ದೇಶವನ್ನು ಮುನ್ನಡೆಸುವಷ್ಟು ಸಮರ್ಥರಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯು ಮಹಿಳೆಯರು ಸಾಧನೆ ಮಾಡುವ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ಮನೆಯನ್ನು ನಿಭಾಯಿಸುವುದರ ಜೊತೆಗೆ ಸಮಾಜವನ್ನು ನಿಭಾಯಿಸುವ ಆತ್ಮವಿಶ್ವಾಸವಿದೆ. ಆತ್ಮಶಕ್ತಿಯ ಜೊತೆಗ ಸಮಾಜದ ಪ್ರೋತ್ಸಾಹದಿಂದ ಮಹಿಳೆಯು ಉನ್ನತ ಸಾಧನೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.  ಮಹಿಳೆಯರ ತ್ಯಾಗ, ಸಮರ್ಪಣಾ ಮನೋಭಾವನೆ ಮತ್ತು ಉತ್ಸಾಹದಿಂದಾಗಿ ಮಹಿಳೆಗೆ ಹೆಚ್ಚಿನ ಶಕ್ತಿ ದೊರೆಯಲಿದೆ. ಗಂಡು ಹೆಣ್ಣು ಎಂದು ಬೇಧಭಾದ ಮಾಡದೇ ಸಮಾಜಕ್ಕೆ ಕೊಡುಗೆ ನೀಡುವ ಮತ್ತು ದೇಶಕ್ಕೆ ಕೊಡುಗೆ ನೀಡುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದವರು ಪ್ರತಿಪಾದಿಸಿದರು.


ನಟಿ ಮೇಘನಾ ಗಾಂವ್ಕರ್ ಮಾತನಾಡಿ ಮಹಿಳೆಯರು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ಸಾಧನೆ ಅವರ ವಿಶ್ವಾಸವನ್ನು ಹೆಚ್ಚಿಸಿದೆ. ಮಹಿಳೆಯರು ಉತ್ತಮ ಶಿಕ್ಷಣವನ್ನು ಪಡೆಯುವುದ ಜೊತೆಗೆ ತಮ್ಮ ಅಭಿರುಚಿಯನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಸಮಾಜದ ಕೊಡುಗೆ ನೀಡಬೇಕು ಎಂದರು. ಉತ್ತಮ ಆಯ್ಕೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹಾಗಾಗಿ ಮಹಿಳೆಯರು ಶಿಕ್ಷಣ ಮತ್ತು ವೃತ್ತಿಯನ್ನು ಆಯ್ಕೆ ಮಾಡುವಾಗ ತಮ್ಮಿಷ್ಟವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದವರು ಸಲಹೆ ನೀಡಿದರು.

ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಪಿಎಚ್ಡಿ ಅಧ್ಯಯನದಲ್ಲಿಯೂ ಮಹಿಳೆಯರು ಹೆಚ್ಚಿದ್ದಾರೆ ಎಂದರು. ಪುರುಷರ ಯಶಸ್ಸಿನಲ್ಲಿ ಮಹಿಳೆಯ ಪಾತ್ರವಿರುತ್ತದೆ. ತಾಯಿಯಾಗಿ, ಪತ್ನಿಯಾಗಿ, ತಂಗಿಯಾಗಿ, ಮಗಳಾಗಿ ಹೆಣ್ಣು ಪುರುಷರ ಯಶಸ್ಸಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.

ವಿಶ್ವವಿದ್ಯಾಲಯದ ಉಪಕುಲಪತಿ ಪ್ರಿಸ್ಲಿಶಾನ್, ರಿಜಿಸ್ಟರ್ ಮಠಂ ವಿಶ್ವನಾಥಯ್ಯ, ಸಹ ಉಪಕುಲಪತಿ ರೇ ಟೈಟಸ್, ಇಟಾಚಿ ಎನರ್ಜಿ ಸಂಸ್ಥೆಯ ನಂದಿನಿ ಸರಕಾರ್, ವೈದ್ಯೆ ಶೋಭಾ ವರ್ತಮಾನ್, ಕೊಡಗು ಅಗ್ರಿಟೆಕ್ ಲಿಮಿಟೆಡ್ನ ನಿರ್ದೇಶಕಿ ಚೈತ್ರ ನಾರಾಯಣ್, ಅಲಯನ್ಸ್ ಹಳೆಯ ವಿದ್ಯಾರ್ಥಿಗಳ ಸಂಘದ ನಿವೇದಿತಾ.ವಿ.ಸಿಂಗ್ ಮೊದಲಾದವರು

Related posts