ಮಿಚಾಂಗ್ ಚಂಡಮಾರುತ; ಆಂಧ್ರಪ್ರದೇಶದಲ್ಲೂ ಅಯೋಮಯ

ಹೈದರಾಬಾದ್ : ಮಿಚಾಂಗ್ ಚಂಡಮಾರುತದ ರೌದ್ರಾವತಾರದಿಂದಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಯಲ್ಲಿ ಅವಾಂತರ ಸೃಷ್ಟಿಸಿದೆ. ಸೋಮವಾರದಿಂದ ಬಿರುಗಾಳಿ ಮಳೆ ಜೋರಾಗಿದ್ದು ಈ ಎರಡೂ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಆಂಧ್ರಪ್ರದೇಶದ ಹಲವು ಜಿಲ್ಲೆಗಳು ಮಿಚಾಂಗ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ತತ್ತರಗೊಂಡಿದೆ. ಸರಣಿ ಅವಘಡಗಳು ಪರಿಸ್ಥಿಯ ಭೀಕರತೆಯನ್ನು ಅನಾವರಣ ಮಾಡಿದೆ.

ಆಂಧ್ರದಲ್ಲಿ ಕಳೆದ 80 ವರ್ಷಗಳಲ್ಲಿ ಅಪೂರ್ವ ಎಂಬಂತೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು ನಿರಂತರ ವರ್ಷಧಾರೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ತಿರುಮಲದಲ್ಲಿ ಮಳೆ ಕಾರಣ ಭಕ್ತರು ಪರದಾಡುವಂತಾಗಿದೆ. ಭೀಕರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ರಜೆ ಘೋಷಿಸಲಾಗಿದೆ.

Related posts