ಕೊರೋನಾದಿಂದ ಸಾವನ್ನಪಿದವರ ಶವಗಳ ಮಧ್ಯೆಯೇ ಸೋಂಕಿತರನ್ನು ಮಲಗಿಸಿ ಚಿಕಿತ್ಸೆ.. ಭಾರತದಲ್ಲೂ ಹೀಗೆನಾ..? ಬೆಚ್ಚಿ ಬೀಳಿಸಿದ ವೀಡಿಯೋ

ಕೊರೋನಾ ಸೋಂಕಿತರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು ಅಗತ್ಯ ಕ್ರಮ. ನಿಯಮ ಹೀಗಿರುವಾಗ ಹೆಣಗಳ ಪಕ್ಕದಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಆ ಸನ್ನಿವೇಶ ಹೇಗಿರಬಹುದು?

ವಿದೇಶಗಳಲ್ಲಿ ಮಾರಣ ಹೋಮವೇ ನಡೆದಾಗ ಹೆಣಗಳ ಪಕ್ಕದಲ್ಲೇ ರೋಗಿಗಳಿಗೆ ಚಿಕಿತ್ಸೆ ಕೊಟ್ಟಿರುವ ಸಂಗತಿ ಬಗ್ಗೆ ಸುದ್ದಿ ಓದಿರುತ್ತೇವೆ. ಇದೀಗ ನಮ್ಮ ದೇಶದಲ್ಲೇ ಇಂತಹಾ ಕರಾಳತೆ ನಡೆದಿದೆ.

ಮುಂಬೈನ ಸಿಯೋನ್ ಆಸ್ಪತ್ರೆಯ ವೀಡಿಯೋವೊಂದು ಈ ಕರಾಳ ಸನ್ನಿವೇಶವನ್ನು ಅನಾವರಣ ಮಾಡಿದೆ. ಆಸ್ಪತ್ರೆ ವಾರ್ಡ್’ನಲ್ಲಿನ ಬೆಡ್’ಗಳಲ್ಲಿ ಹಲವಾರು ಶವಗಳನ್ನು ಪ್ಲಾಸ್ಟಿಕ್’ನಲ್ಲಿ ಸುತ್ತಿ ಇಡಲಾಗಿದೆ. ಅವುಗಳ ಮಧ್ಯೆ ಖಾಲಿ ಇರುವ ಬೆಡ್’ಗಳಲ್ಲಿ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತದೆ.

ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕ ನಿತೀಶ್ ರಾಣೆ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಧುರೀಣ ಮಾಡಿರುವ ಈ ಟ್ವೀಟ್ ಸಂಚಲನಕ್ಕೆ ಕಾರಣವಾಗಿದೆ.

ಶವಗಳ ಪಕ್ಕದಲ್ಲೇ ಹಲವಾರು ಬೆಡ್ ಮೇಲೆ ಮಲಗಿದ್ದಾರೆ. ಜನ ಕೂಡಾ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಆಸ್ಪತ್ರೆ ಅವ್ಯವಸ್ಥೆ ಹೀಗೇಕೆ ಎಂಬುದು ನಿಗೂಢವಾಗಿದೆ.

ಇದನ್ನೂ ಓದಿ.. ಲಾಕ್’ಡೌನ್ ವೇಳೆ ಗಲಭೆ ನಿಯಂತ್ರಿಸಿದ ರಾಷ್ಟ್ರಗೀತೆ; ದಿಢೀರನೆ ಹೀರೋ ಆದ ಪೊಲೀಸ್ ಇನ್ಸ್‌ಪೆಕ್ಟರ್

 

Related posts