ಭೋಪಾಲ್ ದುರಂತವನ್ನು ನೆನಪಿಸಿತೇ ವೈಜಾಕ್ ಘಟನೆ; ಪ್ರಧಾನಿ ಸೇರಿ ಗಣ್ಯರು ದಿಗ್ಭ್ರಮೆ

ವಿಶಾಖಪಟ್ಟಣ: ಆರ್.ಆರ್.ವೆಂಕಟಪುರಂನಲ್ಲಿ ಬೆಳ್ಳಂಬೆಳಿಗ್ಗೆ ಮಾರ್ಗದುದ್ದಕ್ಕೂ ಹೆಣಗಳ ಸಾಲು.. ಒಂದೆಡೆ ವಾಹನಗಳು, ಇನ್ನೊಂದೆಡೆ ಜನ.. ಮಾರ್ಕೆಟ್ ಬಳಿ ಜನ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಿದ್ದ ದೃಶ್ಯ.. ಈ ವಿಷಾನಿಲ ದುರಂತ ಸನ್ನಿವೇಶ ಹೇಗಿತ್ತೆಂದರೆ ದಶಕಗಳ ಹಿಂದಿನ ಭೋಪಾಲ್ ಅನಿಲ ದುರಂತವನ್ನು ನೆನಪಿಸುವಂತಿದೆ.

ದೇಶ ಒಂದೆಡೆ ಕೊರೋನಾ ಅವಾಂತರದಿಂದ ನಲುಗಿದ್ದಾರೆ ಅತ್ತ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಬಳಿ ಹಿಂದೆಂದೂ ಕಂಡರಿಯದ ಭೀಕರ ದುಘಟನೆ ನಡೆದಿದೆ. ಅನಿಲ ಸೋರಿಕೆಯಿಂದಾಗಿ ಆ ಗ್ರಾಮದ ಎಲ್ಲೆಲ್ಲೂ  ಮಕ್ಕಳು, ವೃದ್ಧರಾದಿಯಾಗಿ ಸಾವಿರಾರು ಮಂದಿ ಕುಸಿದು ಬೀಳುತ್ತಿರುವುದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.. ಹೀಗೆ ಮನಕಲಕುವ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿತ್ತು. ಪೊಲೀಸರು, ಅಗ್ನಿಶಾಮಕದಳ, ವೈದ್ಯಕೀಯ ಸಿಬ್ಬಂದಿ ತಂಡ, ಸ್ವಂಸೇವಕರಾದಿಯಾಗಿ ರಕ್ಷಣಾ ಪರಿಹಾರ ಕಾರ್ಯ ಕೈಗೊಂಡರೂ ಸುದೀರ್ಘ ಹೊತ್ತು ಅಲ್ಲಿ ಭೀಕರತೆಯ ಸನ್ನಿವೇಶಗಳೇ ಕಂಡುಬರುತ್ತಿದ್ದವು.

ವಿಶಾಖಪಟ್ಟಣಂನ ಗೋಪಾಲಪಟ್ಟಣದ  ನಾಯ್ಡು ತೋಟಾ ಸಮೀಪದ ಆರ್.ಆರ್.ವೆಂಕಟಪುರಂ ಬಳಿಯ ಎಲ್.ಜಿ.ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ನಸುಕಿನ ಜಾವ 2.30ರ ಸುಮಾರಿಗೆ ಅನಿಲ ಸೋರಿಕೆಯಾಗಿರಬಹುದೆಂದು ಹೇಳಲಾಗುತ್ತಿದೆ. ಆದರೆ ಅಷ್ಟರಲ್ಲೇ ಆ ಊರ ಜನತೆ ನಿದ್ದೆಗೆ ಜಾರಿರುವುದರಿಂದಾಗಿ ಈ ವಿಷಾನಿಲ ದುರಂತದ ಬಗ್ಗೆ ಯಾರಿಗೂ ಗೊತ್ತಾಗಲಿಲ್ಲ. ರಾತ್ರಿ ಸರಿದು ಬೆಳಕಾಗುವಷ್ಟರಲ್ಲಿ ಸುತ್ತಮುತ್ತ ಹಳ್ಳಿಗಳಲ್ಲಿ ಮಾರಣಹೋಮವೇ ನಡೆದಿದೆ.  ಸುತ್ತಮುತ್ತಲ 5 ಹಳ್ಳಿಗಳಿಗೆ ಈ ವಿಷಾನಿಲ ವ್ಯಾಪಿಸಿದ್ದು, ಘಟನಾ ಸ್ಥಳದ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕುರ್ಫ್ಯೂ ಜಾರಿಗೊಳಿಸಲಾಗಿದ್ದು ರಕ್ಷಣಾ ಕಾರ್ಯ ಸಾಗಿದೆ.

ಇದನ್ನೂ ಓದಿ.. ಉಡುಪಿ- ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಗೆ ಕೊರೋನಾ; ಬಾದಾಮಿಯಲ್ಲಿ ಚಿಕಿತ್ಸೆ

ಈ ಘೋರ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವಾಲಯ ಹಾಗೂ ವಿಪತ್ತು ನಿರ್ವಹಣಾ ತಂಡ ಸೂಕ್ತ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತಂತೆ ಅವರು ಟ್ವೀಟ್ ಕೂಡಾ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡಾ ಟ್ವೀಟ್ ಮಾಡಿದ್ದು, ಕೇಂದ್ರ ವಿಪಾಟು ನಿರ್ವಹಣಾ ತಂಡ ರಕ್ಷಣಾ ಪರಿಹಾರ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ.

ಇದೆ ವೇಳೆ, ಜನರ ಜೀವ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುರಿತು ನಿಗಾ ವಹಿಸಿದ್ದು, ಸಂತ್ರಸ್ಥರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ.. ಲಾಕ್’ಡೌನ್ ವೇಳೆ ಗಲಭೆ ನಿಯಂತ್ರಿಸಿದ ರಾಷ್ಟ್ರಗೀತೆ; ದಿಢೀರನೆ ಹೀರೋ ಆದ ಪೊಲೀಸ್ ಇನ್ಸ್‌ಪೆಕ್ಟರ್ 

 

 

Related posts