ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ತೀವ್ರ ಕುತೂಹಲ ಕೆರಳಿಸಿದೆ. ಒಂದೆಡೆ ಸಭಾಪತಿಗಳ ಆಯ್ಕೆ, ಹಾಗೂ ಹಲವು ವಿದೇಯಕಗಳ ಮಂಡನೆ ವಿಚಾರದಲ್ಲಿ ಆಡಳಿತ ಪ್ರತಿಪಕ್ಷಗಳ ನಡೆ ಹೇಗಿರುತ್ತೆ ಎಂಬ ಕುತೂಹಲ ಉಂಟಾಗಿದೆ.
ಖಾತೆ ಹಂಚಿಕೆ ಗೊಂದಲ, ನಾಯಕತ್ವ ಬದಲಾವಣೆಯ ವದಂತಿ ಇತ್ಯಾದಿ ಆಂತರಿಕ ಬೆಳವಣಿಗೆಗಳ ನಡುವೆಯೇ ಈ ಅಧಿವೇಶನ ನಡೆಯುತ್ತಿದ್ದು ಪ್ರಮುಖವಾಗಿ, ಯಡಿಯೂರಪ್ಪ ವಿರುದ್ದದ ಡಿನೋಟಿಫಿಕೇಷನ್ ಪ್ರಕರಣ ಕೂಡಾ ಪ್ರತಿಧ್ವನಿಸುವ ಸಾಧ್ಯತೆಗಳಿವೆ.
ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಶಾಸಕ ಮುಂಗೋಳಿ, ವಿಧಾನಷರಿಷತ್’ನ ಉಪಸಭಾಪತಿ ಧರ್ಮೇಗೌಡ ಹಾಗೂ ಮಾಜಿ ಶಾಸಕರು ಮತ್ತು ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಕೈಗೊಳ್ಳಲಾಗುತ್ತದೆ. ನಂತರ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಗುತ್ತದೆ.
ಈ ಬಾರಿ ಅಧಿವೇಶನವದಲ್ಲಿ 11 ವಿಧೇಯಕಗಳು ಮಂಡನೆಯಾಗಲಿದೆ. ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಈ ವಿಧೇಯಕವು ಸಹ ಮಂಡನೆಯಾಗುವ ಸಾಧ್ಯತೆಗಳಿವೆ.