ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆ ದೇಗುಲ ಇಂದು ಅನನ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಶ್ರೀ ರಾಮನವಮಿ ದಿನವಾದ ಇಂದು ಭವ್ಯ ದೇಗುಲದಲ್ಲಿರುವ ಬಾಲರಾಮನ ವಿಗ್ರಹಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿದ ಸನ್ನಿವೇಶ ಆಸ್ತಿಕ ಸಮೂಹದ ಗಮನಸೆಳೆಯಿತು.

ದೇಶಾದ್ಯಂತ ರಾಮನವಮಿ ಹಬ್ಬವನ್ನು ಆಚರಿಸುತ್ತಿದ್ದ ಹೊತ್ತಿಗೆ ಅಯೋಧ್ಯೆಯಲ್ಲಿರುವ ಬಾಲ ರಾಮನ ಹಣೆಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ಕೋಟ್ಯಂತರ ಜನರು ಈ ಅದ್ಭುತ ದೃಶ್ಯವನ್ನು ಸಾಕ್ಷೀಕರಿಸಿದರು.

ಸೂರ್ಯ ರಶ್ಮಿ ವಿಗ್ರಹಕ್ಕೆ ಸ್ಪರ್ಶಿಸುತ್ತಿದ್ದಂತೆಯೇ ಬಾಲರಾಮನ ಹಣೆಯಲ್ಲಿ ತಿಲಕದ ದೃಶ್ಯ ಕಂಡುಬಂತು. ಅದಾಗಲೇ ಬಾಲರಾಮನಿಗೆ ವಿಶೇಷ ಆರತಿಯನ್ನು ನೆರವೇರಿಸಲಾಯಿತು.

Related posts