ಬೆಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕಿದೆ.
ಪೊಲೀಸರು ತನಿಖೆ ಆರಂಭಿಸುವ ಮುನ್ನವೆ ಫಾಜಿಲ್ ಕುಟುಂಬದವರಿಗೆ ಕ್ಲೀನ್ ಚಿಟ್ ಕೊಡಲು ಯು.ಟಿ.ಖಾದರ್ ಅವರು ಏನು ಗೃಹ ಸಚಿವರೇ..??
ಈ ಹಿಂದೆ ಫಾಜಿಲ್ ಮೃತನಾದ ಸಂದರ್ಭದಲ್ಲಿ ಇದೇ ಯು.ಟಿ.ಖಾದರ್ ಅವರು ಸಿದ್ದರಾಮಯ್ಯ ಅವರಿಂದ ಫಾಜಿಲ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಕೊಡಿಸಿದ್ದರು.
ಬಹುಶಃ ಆ ಹಣದಿಂದಲೇ ಫಾಜಿಲ್ ಕುಟುಂಬ ಸುಹಾಸ್ ಶೆಟ್ಟಿ… pic.twitter.com/30McfqCE6t
— BJP Karnataka (@BJP4Karnataka) May 4, 2025
ಪೊಲೀಸರು ತನಿಖೆ ಆರಂಭಿಸುವ ಮುನ್ನವೆ ಫಾಜಿಲ್ ಕುಟುಂಬದವರಿಗೆ ಕ್ಲೀನ್ ಚಿಟ್ ಕೊಡಲು ಯು.ಟಿ.ಖಾದರ್ ಅವರು ಏನು ಗೃಹ ಸಚಿವರೇ..? ಎಂದು ಬಿಜೆಪಿ ಪ್ರಶ್ನಿಸಿದೆ.
ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಈ ಹಿಂದೆ ಫಾಜಿಲ್ ಮೃತನಾದ ಸಂದರ್ಭದಲ್ಲಿ ಇದೇ ಯು.ಟಿ.ಖಾದರ್ ಅವರು ಸಿದ್ದರಾಮಯ್ಯ ಅವರಿಂದ ಫಾಜಿಲ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಕೊಡಿಸಿದ್ದರು’ ಎಂದು ನೆನಪಿಸಿದೆ. ಬಹುಶಃ ಆ ಹಣದಿಂದಲೇ ಫಾಜಿಲ್ ಕುಟುಂಬ ಸುಹಾಸ್ ಶೆಟ್ಟಿ ಹತ್ಯೆಗೆ ₹5 ಲಕ್ಷ ಸುಪಾರಿ ಕೊಟ್ಟಿದೆ ಎಂಬ ಅನುಮಾನದಿಂದ ಖಾದರ್ ಅವರು ಕ್ಲೀನ್ ಚಿಟ್ ಕೊಡುವ ಕೆಲಸ ಆರಂಭಿಸಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಹೇಳಿದೆ.
ಮತಾಂಧ ಜಿಹಾದಿಗಳನ್ನು ರಕ್ಷಿಸಲು ಮುಂದಾಗಿರುವ ಖಾದರ್ ಅವರೆ, ಸಭಾಧ್ಯಕ್ಷ ಸ್ಥಾನಕ್ಕೆ ತತಕ್ಷಣ ರಾಜೀನಾಮೆ ನೀಡಿ, ಆ ಪೀಠದ ಘನತೆಯನ್ನು ಉಳಿಸಿ ಎಂದೂ ಬಿಜೆಪಿ ಬರೆದುಕೊಂಡಿದೆ.