ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿ.ಆರ್.ವಾಲಾ 10 ಮಂದಿ ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಅನರ್ಹತೆಯ ಹಣೆಪಟ್ಟಿ ಕಟ್ಟಿದ್ದ ಶಾಸಕರು ಉಪಚುನಾವಣೆಯಲ್ಲಿ ಗೆದ್ದು ಬಂದು ಇದೀಗ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಉಪಸ್ಥಿತಿಯಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು.
- ಪ್ರಮಾಣವಚನ ಸ್ವೀಕರಿಸಿ ಸಚಿವರಾದವರ ಪಟ್ಟಿ ಇಲ್ಲಿದೆ:
1. ಎಸ್.ಟಿ.ಸೋಮಶೇಖರ್ (ಯಶವಂತಪುರ)
2. ರಮೇಶ್ ಜಾರಕಿಹೊಳಿ (ಗೋಕಾಕ),
3. ಆನಂದ್ ಸಿಂಗ್(ವಿಜಯನಗರ),
4. ಡಾ. ಸುಧಾಕರ್ (ಚಿಕ್ಕಬಳ್ಳಾಪುರ),
5. ಬೈರತಿ ಬಸವರಾಜ್(ಕೆ.ಆರ್.ಪುರಂ),
6. ಶಿವರಾಮ ಹೆಬ್ಬಾರ್(ಯಲ್ಲಾಪುರ),
7. ಬಿ.ಸಿ.ಪಾಟೀಲ್ (ಹಿರೇಕೆರೂರು),
8. ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್),
9. ನಾರಾಯಣಗೌಡ(ಕೆ.ಆರ್.ಪೇಟೆ),
10. ಶ್ರೀಮಂತ್ ಪಾಟೀಲ್ (ಕಾಗವಾಡ)
ಈ ಬಾರಿ ಸಂಪುಟ ವಿಸ್ತರಣೆವೇಳೆ 13 ಮಂದಿಗೆ ಅವಕಾಶ ಸಿಗುತ್ತೆ ಎಂದೇ ನಿರೀಕ್ಷಿಸಲಾಗಿತ್ತು. ಸೋತ ನಾಯಕರು ಹಾಗೂ ಮೂಲ ಬಿಜೆಪಿಗರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅನರ್ಹತೆ ಪಟ್ಟ ಕಳಚಿ ಗೆದ್ದು ಬಂಡ 10 ಮಂದಿ ಶಾಸಕರಿಗಷ್ಟೇ ಮಂತ್ರಿ ಸ್ಥಾನ ಒಲಿಯಿತು.