ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ಕುರಿತ ಜೈಲಿನ ಅಧಿಕಾರಿಗಳ ಅರ್ಜಿ ವಜಾ

ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ಕುರಿತು ತಿಹಾರ್ ಜೈಲಿನ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ದೆಹಲಿ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಅಪರಾಧಿಗಳನ್ನು ಗಲ್ಲಿಗೇರಿಸಲು ಹೊಸ ದಿನಾಂಕ ನಿಗದಿಗೊಳಿಸುವಂತೆ ಕೋರಿ ತಿಹಾರ್ ಜೈಲಿನ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು.

ದೆಹಲಿ ಹೈಕೋರ್ಟ್​ ಫೆಬ್ರವರಿ 5ರಂದು ನೀಡಿದ ತೀರ್ಪಿನಂತೆ ಒಂದು ವಾರದೊಳಗೆ ಕಾನೂನು ಪ್ರಕ್ರಿಯೆಗೊಳಿಸಬೇಕು ಎಂದು ಹೆಚ್ಚುವರಿ ಸೆಷನ್ಸ್ ಜಡ್ಜ್​ ಸ್ಪಷ್ಟವಾಗಿ ಹೇಳಿದರು.

ಕಾನೂನು ಬದುಕುವುದಕ್ಕೆ ಅವಕಾಶ ನೀಡಿದೆ . ಹೈಕೋರ್ಟ್​ ಅವರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು, ಅಪರಾಧಿಗಳು ಅಷ್ಟರೊಳಗೆ ಕಾನೂನು ಪ್ರಕಾರ ಏನೇನು ಮಾಡಬೇಕೋ ಅದನ್ನು ಮಾಡಿಮುಗಿಸಬೇಕು. ಹೀಗಿರುವಾಗ ಈ ರೀತಿ ಮತ್ತೊಮ್ಮೆ ದಿನಾಂಕ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

Related posts