ಬೆಂಗಳೂರು: ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ, ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ. ಕನ್ನಡದ ಕೆಲಸಕ್ಕೆ ನಮ್ಮ ಸರ್ಕಾರ ಸದಾ ಮುಂದೆ ಇರುತ್ತದೆ. ದಿನಾಂಕ 27 ರಂದು ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ,…
Category: ಸಿನಿಮಾ
‘ಬಿಗ್ ಬಾಸ್’ ಸ್ಪರ್ಧಿ ಜಗದೀಶ್ ಮೇಲೆ ದಾಳಿ; ಭಯಾನಕ ವೀಡಿಯೊ ವೈರಲ್
‘ಬಿಗ್ ಬಾಸ್ ಕನ್ನಡ’ ಸ್ಪರ್ಧಿಯಾಗಿದ್ಫ್ದ ಜಗದೀಶ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಜಗದೀಶ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಯುವಕರ ಗುಂಪು ದಾಳಿ ನಡೆಸಿತ್ತು. ಆ ವೀಡಿಯೋ ಇದೀಗ ವೈರಲ್ ಆಗಿದೆ. View this post on Instagram A post shared by GANGA JADHAV (@ganga_jadhav__) ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಬಳಿ ಅಣ್ಣಮ್ಮ ದೇವಿ ವಿಗ್ರಹ ಸ್ಥಾಪನೆ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಗಲಾಟೆ ನಡೆದಿತ್ತು. ನಟ ದರ್ಶನ ವಿವಿರುದ್ದದ ಟೀಕೆಯ ವಿಚಾರದಲ್ಲೂ ಜಗದೀಶ್ ಅವರು ನಟನ ಅಭಿಮಾನಿಗಳಿಂದ ಮುನಿಸಿಕೊಂಡಿದ್ದರು. ಈ ನಡುವೆ, ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಯುವಕರ ಗುಂಪು ದಾಳಿ ಮಾಡಿದೆ. ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ಹಾಗೂ ಕಾರನ್ನು ಹಾನಿಗೊಳಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಉದ್ರಿಕ್ತರನ್ನು ಚದುರಿಸಿದ್ದಾರೆ.
‘ಯಾವ ಪ್ರಶಸ್ತಿಯೂ ಬೇಡ’; ರಾಜ್ಯ ಪ್ರಶಸ್ತಿ ನಿರಾಕರಿಸಿದ ಕಿಚ್ಚ
‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ‘ಪೈಲ್ವಾನ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿ ಘೋಷಿಸಲಾಗಿದೆ. ಆದರೆ ಈ ಪುರಸ್ಕಾರವನ್ನು ತಾವು ಸ್ವೀಕರಿಸುವುದಿಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣ ‘X’ನಲ್ಲಿ ಕಿಚ್ಚ ಸುದೀಪ್ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ‘ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆಯುವುದು ನಿಜಕ್ಕೂ ಒಂದು ಸೌಭಾಗ್ಯ, ಮತ್ತು ಈ ಗೌರವಕ್ಕಾಗಿ ನಾನು ತೀರ್ಪುಗಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದಾಗ್ಯೂ , ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯುವುದನ್ನು ನಿಲ್ಲಿಸುವ ನಿರ್ಧಾರ ಮಾಡಿಕೊಂಡಿದ್ದೇನೆ ಎಂದು ನಾನು ತಿಳಿಸಲೇಬೇಕು. ವಿವಿಧ ವೈಯಕ್ತಿಕ ಕಾರಣಗಳಿಗಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ತಮ್ಮ ಕಲೆಯಲ್ಲಿ ತಮ್ಮ ಹೃದಯವನ್ನು ಹರಿಸಿದ ಅನೇಕ ಅರ್ಹ ನಟರಿದ್ದಾರೆ. ನಾನು ಬಯಸುವುದಕ್ಕಿಂತ ಹೆಚ್ಚು. ಅವರಲ್ಲಿ ಒಬ್ಬರು ಅದನ್ನು ಪಡೆಯುವುದನ್ನು ನೋಡುವುದು ನನಗೆ ಇನ್ನಷ್ಟು…
ನಾಗ ಚೈತನ್ಯ-ಸಾಯಿಯ ‘ಹಿಲೆಸ್ಸೊ ಹಿಲೆಸ್ಸಾ’ ಹಾಡಿಗೆ ನೆಟ್ಟಿಗರು ಫುಲ್ ಖುಷ್
ಟಾಲಿವುಡ್ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಜೈಲು ಶಿಕ್ಷೆ?
ಹೈದರಾಬಾದ್: ಟಾಲಿವುಡ್ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ದಂಡ/ ಜೈಲು ಶಿಕ್ಷೆ ಪ್ರಕಟವಾಗಿದೆ. ಮುಂಬೈನ ಸ್ಥಳೀಯ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ ಎನ್ನಲಾಗಿದೆ. 2018ರಲ್ಲಿ ಮುಂಬೈನಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಮಹೇಶ್ಚಂದ್ರ ಮಿಶ್ರಾ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಏಳು ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿತ್ತು. ಇದೀಗ ರಾಮ್ ಗೋಪಾಲ್ ವರ್ಮಾವಿರುದ್ಧ ಕೋರ್ಟ್ ತೀರ್ಪು ಪ್ರಕಟಿಸಿದೆ. ಜ.21ರಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ದೂರುದಾರರಿಗೆ ಮೂರು ತಿಂಗಳಲ್ಲಿ 3.72 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಮೊತ್ತ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ಘಟನೆ ಏನು?
ಸೈಫ್ ಅಲಿ ಖಾನ್ ಮೇಲಿನ ದಾಳಿ ನಡೆಸಿರೋದು ಒಬ್ಬ ಕಳ್ಳ; ತಾನು ನಟನ ಮನೆಗೆ ನುಗ್ಗಿದ್ದು ಎಂದು ತಿಳಿದಿರಲಿಲ್ಲ
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ನಡೆಸಿದ ಘಟನೆಯನ್ನು ಬೇಧಿಸಿರುವ ಮುಂಬೈ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಡಿಸಿಪಿ ದೀಕ್ಷಿತ್ಕುಮಾರ್ ಅಶೋಕ್ ಗೆದಮ್ ಆರೋಪಿಯನ್ನು ಥಾಣೆಯ ಘೋಡ್ಬಂದರ್ ರಸ್ತೆಯಲ್ಲಿರುವ ಹಿರಾನಂದಾನಿ ಎಸ್ಟೇಟ್ನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಬಾಂಗ್ಲಾದೇಶದ ಪ್ರಜೆಯಾಗಿದ್ದಾನೆ. ಕಳ್ಳತನ ಸಂಬಂಧ ಆತ ಮನೆಯೊಳಗೆ ನುಗ್ಗಿದ್ದು, ಆತನಿಗೆ ತಾನು ನತಮ ಮನೆಯೊಳಗೆ ಪ್ರವೇಶಿಸಿದ್ದೇನೆ ಎಂಬುದು ಗೊತ್ತಿರಲಿಲ್ಲ ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಆರೋಪಿ ಬಾಂಗ್ಲಾದೇಶದವನಾಗಿದ್ದು, ಭಾರತ ಪ್ರವೇಶಿಸಿದ ನಂತರ ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದವರು ವಿವರಿಸಿದ್ದಾರೆ.
ತುಳು ಸಿನಿಮಾದಲ್ಲಿ ಬಾಲಿವುಡ್ ತಾರೆ; ರೂಪೇಶ್ ಶೆಟ್ಟಿ ಜೊತೆ ಕೈಜೋಡಿಸಿದ ಸುನೀಲ್ ಶೆಟ್ಟಿ
ತುಳುನಾಡು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಂಗಳೂರು ಮೂಲದ ಅವರು ತುಳು ಭಾಷೆಯ ಸಿನಿಮಾದಲ್ಲಿ ನಟಿಸಲಿದ್ದಾರೆ. ರೂಪೇಶ್ ಶೆಟ್ಟಿ ಜೊತೆ ಸಿನಿಮಾವೊಂದರಲ್ಲಿ ಕೈ ಜೋಡಿಸಿದ್ದಾರೆ. ರೂಪೇಶ್ ಶೆಟ್ಟಿ ಅವರು ಇತ್ತೀಚೆಗೆ ‘ಜೈ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಅವರೇ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಲಿದ್ದಾರೆ. ಈ ಬಗ್ಗೆ ರೂಪೇಶ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಗಮನಸೆಳೆದಿದೆ. View this post on Instagram A post shared by All About Mangaluru (@all_about_mangaluru)
ಕನ್ನಡ, ತೆಲುಗಿನಲ್ಲಿ ಪ್ರಜ್ವಲ್ ದೇವರಾಜ್ ‘ರಾಕ್ಷಸ’
ನಟ ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಚಿತ್ರವು ಶಿವರಾತ್ರಿಯ ಸಂದರ್ಭದಲ್ಲಿ ಕನ್ನಡದ ಜೊತೆಗೆ ತೆಲುಗು ಆವೃತ್ತಿಯೂ ಬಿಡುಗಡೆಯಾಗಲಿದೆ. ಫೆಬ್ರುವರಿ 26 ರಂದು ಕನ್ನಡದ ಜೊತೆಗೆ ತೆಲುಗು ಆವೃತ್ತಿಯನ್ನೂ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ವಿತರಕ ಎಂವಿಆರ್ ಕೃಷ್ಣ ಅವರು ಆಂಧ್ರ ಪ್ರದೇಶದಲ್ಲಿ ಈ ಸಿನಿಮಾ ವಿತರಣೆಗೆ ಮುಂದಾಗಿದ್ದಾರೆ. ಹಾರರ್ ಚಿತ್ರ ‘ರಾಕ್ಷಸ’ದಲ್ಲಿ ಪ್ರಜ್ವಲ್ ದೇವರಾಜ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಗೌಡ, ದೀಪು, ಮತ್ತು ಮಾನಸ ನಿರ್ಮಿಸಿರುವ ಈ ಚಿತ್ರದಲ್ಲಿ ಶ್ರೀಧರ್, ಅರುಣ್ ರಾಥೋಡ, ಗೌತಮ್, ಸೋಮಶೇಖರ್ ಸಹಿತ ಹಲವರ ಅಭಿನಯ ಗಮನಸೆಳೆದಿದೆ.
ನಟಿ ರಶ್ಮಿಕಾಗೆ ಗಾಯ; ‘ಸಿಖಂದರ್’ನಿಂದಲೂ ದೂರ
ನಟಿ ರಶ್ಮಿಕಾ ಮಂದಣ್ಣ ಅವರು ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ ನಟನೆಯ ಸಿಖಂದರ್ ಸಿನಿಮಾದ ಶೂಟಿಂಗ್ಗೆ ತಯಾರಿ ನಡೆಸುವ ನಡುವೆ ಜಿಮ್ನಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಎಡವಟ್ಟಾಗಿ ನಟಿಗೆ ಗಾಯಗಳಾಗಿವೆ ಎನ್ನಲಾಗಿದೆ. ಆದರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಟಿ ರಶ್ಮಿಕಾ ಅವರಿಗೆ ಕೆಲ ದಿನಗಳವರೆಗೆ ವಿಶ್ರಾಂತಿ ಅಗತ್ಯವಿದ್ದು, ‘ಸಿಖಂದರ್’ ಚಿತ್ರದ ಶೂಟಿಂಗ್’ನಿಂದಲೂ ಅವರು ದೂರ ಉಳಿಯಬೇಕಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಜ್ಯೋತಿರಾವ್ ಫುಲೆ 197 ನೇ ಜನ್ಮದಿನದಂದು ಪ್ರತೀಕ್ ಗಾಂಧಿ ಅಭಿನಯದ ‘ಫುಲೆ’ ಸಿನಿಮಾ ಬಿಡುಗಡೆ
ಮುಂಬೈ: ಬಹುನಿರೀಕ್ಷಿತ ಪ್ರತೀಕ್ ಗಾಂಧಿ ಅಭಿನಯದ “ಫುಲೆ” ಖ್ಯಾತ ಸಮಾಜ ಸುಧಾರಕ ಮಹಾತ್ಮ ಜ್ಯೋತಿರಾವ್ ಫುಲೆ ಅವರ 197 ನೇ ಜನ್ಮ ವಾರ್ಷಿಕೋತ್ಸವದಂದು ಬಿಡುಗಡೆಯಾಗಲಿದೆ. ಭಾರತೀಯ ಇತಿಹಾಸದಲ್ಲಿ ಅಪ್ರತಿಮ ವ್ಯಕ್ತಿಯ ಜೀವನ ಮತ್ತು ಕೊಡುಗೆಗಳನ್ನು ಎತ್ತಿ ತೋರಿಸುವ ಈ ಚಲನಚಿತ್ರವು ಅವರ ಕ್ರಾಂತಿಕಾರಿ ಆಲೋಚನೆಗಳನ್ನು ಮುಂಚೂಣಿಗೆ ತರುವ ಭರವಸೆಯನ್ನು ನೀಡುತ್ತದೆ, ಸಾಮಾಜಿಕ ಅನ್ಯಾಯ ಮತ್ತು ಅಸಮಾನತೆಯ ವಿರುದ್ಧದ ಅವರ ಹೋರಾಟದ ಪ್ರಬಲ ಚಿತ್ರಣವನ್ನು ಪ್ರೇಕ್ಷಕರಿಗೆ ನೀಡುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಚಿತ್ರ ತಂಡ ‘ಭಾರತದ ಮೊದಲ ಮಹಿಳಾ ಶಿಕ್ಷಣತಜ್ಞೆ, ಡ್ಯಾನ್ಸಿಂಗ್ ಶಿವ ಫಿಲ್ಮ್ಸ್, ಕಿಂಗ್ಸ್ಮೆನ್ ಪ್ರೊಡಕ್ಷನ್ಸ್, ಸಾವಿತ್ರಿಬಾಯಿ ಫುಲೆ ಅವರ ಜನ್ಮ ವಾರ್ಷಿಕೋತ್ಸವದಂದು ಮತ್ತು ನಾವು ವಿಶ್ವದಾದ್ಯಂತ ಬಿಡುಗಡೆಯನ್ನು ಘೋಷಿಸಲು ಒಟ್ಟಾಗಿ ಬರುತ್ತಿದ್ದೇವೆ. ಏಪ್ರಿಲ್ 11, 2025 ರಂದು ಫುಲೆ ಚಲನಚಿತ್ರವು ಜ್ಯೋತಿರಾವ್ ಅವರ 197 ನೇ ಜನ್ಮದಿನವನ್ನು ಸೂಚಿಸುತ್ತದೆ ಎಂದು…