ಅಲ್ಲು ಅರ್ಜುನ್‌ ‘ರಾಕಾ’ಗೆ ಗಿನ್ನೆಸ್ ದಾಖಲೆ: 37 ಕಲಾವಿದರ ಮೋಷನ್‌ ಕ್ಯಾಪ್ಚರ್!

ಹೈದರಾಬಾದ್: ನಟ ಅಲ್ಲು ಅರ್ಜುನ್‌ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ರಾಕಾ’ ಬಿಡುಗಡೆಯ ಮುನ್ನವೇ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಸನ್‌ ಪಿಕ್ಚರ್ಸ್‌ ನಿರ್ಮಾಣದ ಈ ಬಿಗ್‌ ಬಜೆಟ್‌ ಸಿನಿಮಾದಲ್ಲಿ ಒಂದೇ ಸೆಷನ್‌ನಲ್ಲಿ 37 ಕಲಾವಿದರ ಮೋಷನ್‌ ಕ್ಯಾಪ್ಚರ್‌ ಅನ್ನು ರಿಯಲ್‌ಟೈಮ್‌ನಲ್ಲಿ ಏಕಕಾಲಕ್ಕೆ ಸೆರೆಹಿಡಿಯಲಾಗಿದೆ. 2026ರ ಫೆಬ್ರವರಿಯಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ 4 ವರ್ಷದ ಮಗುವಿನಿಂದ 70 ವರ್ಷದ ಹಿರಿಯರವರೆಗೆ ಕಲಾವಿದರು ಭಾಗವಹಿಸಿದ್ದರು. ಈ ದಾಖಲೆಗಾಗಿ ಚಿತ್ರತಂಡವು ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದು, ಬರೋಬ್ಬರಿ 92 ಆಪ್ಟಿಕಲ್‌ ಮೋಷನ್‌ ಕ್ಯಾಪ್ಚರ್‌ ಕ್ಯಾಮೆರಾಗಳು, ಫೇಶಿಯಲ್‌ ಕ್ಯಾಪ್ಚರ್‌ ಮತ್ತು ಅನ್‌ರಿಯಲ್‌ ಎಂಜಿನ್‌ ಆಧಾರಿತ ರಿಯಲ್‌ಟೈಮ್‌ ದೃಶ್ಯೀಕರಣ ವ್ಯವಸ್ಥೆಯನ್ನು ಬಳಸಿದೆ. ಸೆಪ್ಟೆಂಬರ್‌ 15ರಂದು ಗಿನ್ನೆಸ್‌ ವಿಶ್ವ ದಾಖಲೆ ಸಂಸ್ಥೆ ಈ ಸಾಧನೆಯನ್ನು ಅಧಿಕೃತವಾಗಿ ದೃಢಪಡಿಸಿದೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿನ್ನೆಸ್‌ ತೀರ್ಪುಗಾರ ಸ್ವಪ್ನಿಲ್‌ ದಂಗ್ರಿಕರ್‌, ಅಲ್ಲು ಅರ್ಜುನ್‌…

ನಟಿ ಅಂಬಿಕಾ ವಿರುದ್ಧ ₹46 ಕೋಟಿ ಚೆಕ್ ವಂಚನೆ ಆರೋಪ; ಸಹೋದರಿ ರಾಧಾ ದೂರು

ಚೆನ್ನೈ: ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿರುವ ಹಿರಿಯ ನಟಿ ಅಂಬಿಕಾ ವಿರುದ್ಧ ₹46 ಕೋಟಿ ಮೌಲ್ಯದ ಚೆಕ್ ವಂಚನೆ ಆರೋಪ ಕೇಳಿಬಂದಿದೆ. ಅವರ ಸಹೋದರಿ ಹಾಗೂ ಹಿರಿಯ ನಟಿ ರಾಧಾ ಅವರು ಈ ಸಂಬಂಧ ಗ್ರೇಟರ್‌ ಚೆನ್ನೈ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಸೆಪ್ಟೆಂಬರ್‌ 21ರಂದು ಸಲ್ಲಿಸಿರುವ ದೂರಿನಲ್ಲಿ, ಚೆನ್ನೈನ ತಮ್ಮ ನಿವಾಸದಲ್ಲಿದ್ದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ತಮ್ಮ ಗಮನಕ್ಕೆ ಬಾರದೆ ತೆಗೆದುಕೊಂಡು, ಅಂಬಿಕಾ ಅವರ ಹೆಸರಿನಲ್ಲಿ ಸುಮಾರು ₹46 ಕೋಟಿ ಪಡೆಯಲು ಪ್ರಯತ್ನಿಸಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ. ರಾಧಾ ಅವರ ದೂರಿನ ಪ್ರಕಾರ, ವ್ಯವಹಾರಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಿರ್ವಹಿಸಲು ಐಡಿಬಿಐ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ಹೊಂದಿದ್ದಾರೆ. ವೇತನ, ತೆರಿಗೆ, ವಿದ್ಯುತ್‌ ಹಾಗೂ ಇತರ ಉಪಯುಕ್ತ ಸೇವೆಗಳ ಬಿಲ್‌ಗಳು ಮತ್ತು ತೋಟದ ನಿರ್ವಹಣೆಯಂತಹ ವೆಚ್ಚಗಳಿಗೆ ಪಾವತಿ ಮಾಡಲು ಕೆಲವು ಸಹಿ ಮಾಡಿದ…

‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ್ ‘ಕಾಮನ್ ಮ್ಯಾನ್’; ಟ್ರೇಲರ್ ಬಿಡುಗಡೆ

ಬೆಂಗಳೂರು: ಡಾ. ಎನ್. ನರಸಿಂಹ ಮೂರ್ತಿ ಕಥೆ ಬರೆದು, ‘ಸುರಭಿ ಫಿಲ್ಮ್ಸ್’ ಬ್ಯಾನರ್‌ನಲ್ಲಿ ನಿರ್ಮಿಸಿರುವ ‘ಕಾಮನ್ ಮ್ಯಾನ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕೌಟುಂಬಿಕ ಕಥಾಹಂದರದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಅವರ ನಿರ್ದೇಶನದ 106ನೇ ಸಿನಿಮಾ ಎಂಬ ವಿಶೇಷತೆ ಹೊಂದಿದೆ. ‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ್ ‘ಕಾಮನ್ ಮ್ಯಾನ್’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೌಟುಂಬಿಕ ಹಿನ್ನೆಲೆಯ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯ ಬದುಕು, ಆತನ ಸುತ್ತಲಿನ ಘಟನೆಗಳು ಹಾಗೂ ಸಂಬಂಧಗಳ ವಿವಿಧ ಆಯಾಮಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಟ್ರೇಲರ್‌ನ್ನು ಸಂಗೀತ ನಿರ್ದೇಶಕ ಹಾಗೂ ಗೀತರಚನೆಕಾರ ವಿ. ಮನೋಹರ್ ಬಿಡುಗಡೆ ಮಾಡಿದರು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದು, ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡರು. ‘ಕಾಮನ್ ಮ್ಯಾನ್’ ಚಿತ್ರದ…

ಫ್ಯಾಷನ್ ಡಿಸೈನರ್ ಪಲ್ಲವಿ ಲಕ್ಷ್ಮೀಕಾಂತ್ ದಿಢೀರ್ ನಿಧನ; ಮಲ್ಲಮ್ಮಗೆ ಆಘಾತ

ಬೆಂಗಳೂರು: ಸ್ಯಾಂಡಲ್‌ವುಡ್‌ ತಾರೆಯರ ನೆಚ್ಚಿನ ಫ್ಯಾಷನ್ ಡಿಸೈನರ್ ಹಾಗೂ ರಿಷಿ ಡಿಸೈನ್‌ ಮಾಲಕಿ ಪಲ್ಲವಿ ಲಕ್ಷ್ಮೀಕಾಂತ್ ದಿಢೀರ್ ನಿಧನರಾಗಿದ್ದಾರೆ. ಭಾನುವಾರ ಅವರು ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪಲ್ಲವಿ ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗ, ಕಿರುತೆರೆ ಹಾಗೂ ಫ್ಯಾಷನ್ ಕ್ಷೇತ್ರದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಬಿಗ್‌ಬಾಸ್ ಕನ್ನಡ ಸೀಸನ್‌ 12ರ ಸ್ಪರ್ಧಿ ಮಲ್ಲಮ್ಮ ಅವರ ಪಾಲಿಗೆ ಪಲ್ಲವಿ ವಿಶೇಷ ವ್ಯಕ್ತಿಯಾಗಿದ್ದರು. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ, ಬಿಗ್‌ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಪ್ರವೇಶಿಸಿ ತಮ್ಮ ಸರಳ ಹಾಗೂ ಮುಗ್ಧ ಸ್ವಭಾವದಿಂದ ಗಮನ ಸೆಳೆದಿದ್ದರು. ಮಲ್ಲಮ್ಮ ಅವರ ಬೆಂಗಳೂರಿನ ಆರಂಭಿಕ ದಿನಗಳಲ್ಲಿ ಪಲ್ಲವಿ ಆಶ್ರಯ ನೀಡಿದ್ದರು. ತಮ್ಮ ಬೊಟಿಕ್‌ನಲ್ಲಿ ಕೆಲಸವನ್ನೂ ನೀಡಿದ್ದಲ್ಲದೆ, ಮಲ್ಲಮ್ಮ ಅವರನ್ನು ಕುಟುಂಬದ ಸದಸ್ಯೆಯಂತೆಯೇ ನೋಡಿಕೊಂಡಿದ್ದರು ಎನ್ನಲಾಗಿದೆ. ಮಲ್ಲಮ್ಮ ಬಿಗ್‌ಬಾಸ್‌ಗೆ ತೆರಳುವ ಪ್ರಯಾಣದಲ್ಲೂ ಪಲ್ಲವಿ ಮತ್ತು ಕಿರುತೆರೆ ನಟ…

‘ಮಹಾಭಾರತ’ದ ಭೀಮ ಬಂಧನ! ನಟ ಸೌರವ್ ಗುರ್ಜರ್ ವಿರುದ್ಧ ವಂಚನೆ ಆರೋಪ

ಹೈದರಾಬಾದ್: ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ಭೀಮನ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಹಾಗೂ ವೃತ್ತಿಪರ ಕುಸ್ತಿಪಟು ಸೌರವ್ ಗುರ್ಜರ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರು ನೀಡಿದ ವಂಚನೆ ದೂರಿನ ಆಧಾರದ ಮೇಲೆ ನಟನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, 2021ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಸೌರವ್ ಗುರ್ಜರ್ ಅವರ ಪರಿಚಯವಾಗಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ಬಳಿಕ ವಾಟ್ಸಾಪ್ ಮೂಲಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಅದೇ ವರ್ಷದ ಡಿಸೆಂಬರ್ 25ರಂದು ಮೊದಲ ಬಾರಿಗೆ ನೇರವಾಗಿ ಭೇಟಿಯಾಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೌರವ್ ಗುರ್ಜರ್ ತಮ್ಮನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಮದುವೆಯಾದ ಬಳಿಕ ಪತ್ನಿಗೆ ಸಿಗುವ ಗೌರವ ಮತ್ತು ಹಕ್ಕುಗಳನ್ನು ನೀಡುವುದಾಗಿ ಹೇಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಭರವಸೆಯನ್ನು ನಂಬಿ ಅಮೆರಿಕದಲ್ಲಿದ್ದ ಉದ್ಯೋಗವನ್ನು ತೊರೆದು ಭಾರತಕ್ಕೆ ಮರಳಿದ್ದಾಗಿ…

ರಶ್ಮಿಕಾ ‘ಮೈಸ’ ಟೀಸರ್ ರಿಲೀಸ್; ಕುತೂಹಲ ಮೂಡಿಸಿದ ಥ್ರಿಲ್ಲಿಂಗ್ ದೃಶ್ಯಗಳು

ಹೈದರಾಬಾದ್: ಬಹುನಿರೀಕ್ಷಿತ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸ’ (Mysaa) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದ ವಿಭಿನ್ನ ಕಥಾಹಂದರ ಹಾಗೂ ರಶ್ಮಿಕಾ ಅವರ ಪಾತ್ರ ಕುತೂಹಲ ಮೂಡಿಸಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿರುವ ಚಿತ್ರದ ಟೀಸರ್, ಶೀರ್ಷಿಕೆ ಪಾತ್ರ ‘ಮೈಸ’ ಆಗಿ ಕಾಣಿಸಿಕೊಂಡಿರುವ ರಶ್ಮಿಕಾ ಅವರ ಧ್ವನಿಯೊಂದಿಗೆ ಆರಂಭವಾಗುತ್ತದೆ. ಚಿತ್ರದಲ್ಲಿ ರಶ್ಮಿಕಾ ಅವರು ಗೊಂಡ್ ಬುಡಕಟ್ಟಿನ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಅವರ ಪಾತ್ರದ ನೋವು, ಹೋರಾಟ ಮತ್ತು ಆಂತರಿಕ ಸಂಘರ್ಷದ ಸುಳಿವು ಸಿಗುತ್ತದೆ. ಟೀಸರ್‌ನಲ್ಲಿನ ಅತ್ಯಂತ ಗಮನ ಸೆಳೆಯುವ ದೃಶ್ಯವೆಂದರೆ ರಶ್ಮಿಕಾ ನೀರಿನ ತಳದಲ್ಲಿ ಕುಡುಗೋಲು ಹಿಡಿದು ಕುಳಿತಿರುವ ದೃಶ್ಯ. ಈ ದೃಶ್ಯ ಪ್ರೇಕ್ಷಕರಲ್ಲಿ ಸಿನಿಮಾದ ಕಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಿಸುತ್ತಿರುವ ‘ಮೈಸ’ ಚಿತ್ರವನ್ನು ರವೀಂದ್ರ ಪುಲ್ಲೆ ನಿರ್ದೇಶಿಸಿದ್ದಾರೆ. ಆಕ್ಷನ್–ಡ್ರಾಮಾ ಕಥಾಹಂದರ ಹೊಂದಿರುವ ಈ…

ನಟಿ ಮಂಜು ವಾರಿಯರ್ ಮಾನಹಾನಿ ಆರೋಪ; ಸನಲ್ ಕುಮಾರ್ ಶಶಿಧರನ್ ಸೇರಿ ಮೂವರಿಗೆ ನೋಟಿಸ್

ಕೊಚ್ಚಿ: ಮಲಯಾಳಂ ನಟಿ ಮಂಜು ವಾರಿಯರ್ ಅವರ ವಿರುದ್ಧ ಮಾನಹಾನಿಕರ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಸೇರಿದಂತೆ ಮೂವರಿಗೆ ಕೊಚ್ಚಿಯ ಮುನ್ಸಿಫ್ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ನಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೊಚ್ಚಿಯ ಮೂರನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶೆ ರೀಜಾ ಆರ್. ನಾಯರ್, ಸನಲ್ ಕುಮಾರ್ ಶಶಿಧರನ್, ಆನ್‌ಲೈನ್ ನ್ಯೂಸ್ ಪೋರ್ಟಲ್ ನಡೆಸುತ್ತಿರುವ ಶಾಜನ್ ಸ್ಕರಿಯಾ ಹಾಗೂ ಮೆಟಾ ಪ್ಲಾಟ್‌ಫಾರ್ಮ್ಸ್‌ಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿರುವ ಸಂದರ್ಭದಲ್ಲಿ ಮಂಜು ವಾರಿಯರ್ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವಿಷಯ ಪ್ರಕಟಿಸದಂತೆ ಸನಲ್ ಕುಮಾರ್ ಶಶಿಧರನ್ ಅವರಿಗೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ನಟಿಯ ಪರ ವಕೀಲೆ ಶಾಂತಿ ಎಂ. ಅವರ ಪ್ರಕಾರ, ಸನಲ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಂಜು ವಾರಿಯರ್ ವಿರುದ್ಧ ನಿರಂತರವಾಗಿ…

ಕತ್ರಿನಾ ಕೈಫ್‌ ಬಾಡಿ ಶೇಮಿಂಗ್‌ಗೆ ರಮ್ಯಾ ಗರಂ

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್‌ ಅವರ ದೇಹದ ತೂಕದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲ್‌ ವಿರುದ್ಧ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಧ್ವನಿ ಎತ್ತಿದ್ದಾರೆ. ತಾಯಿಯಾದ ಬಳಿಕ ಕತ್ರಿನಾ ಅವರ ದೇಹದಲ್ಲಿ ಸಹಜ ಬದಲಾವಣೆಗಳು ಕಂಡುಬಂದಿವೆ. ಇತ್ತೀಚೆಗೆ ಪತಿ ವಿಕ್ಕಿ ಕೌಶಲ್‌ ಜೊತೆ ಅಂಬಾನಿ ನಿವಾಸದಲ್ಲಿ ನಡೆದ ಗಣೇಶೋತ್ಸವದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ವೇಳೆ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅವರ ದೇಹದ ಬದಲಾವಣೆಯನ್ನು ಮುಂದಿಟ್ಟುಕೊಂಡು ಕೆಲವರು ಬಾಡಿ ಶೇಮಿಂಗ್‌ ಮಾಡಿದ್ದರು.ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ರಮ್ಯಾ, ಮಹಿಳೆಯ ದೇಹದ ಆಕಾರವನ್ನು ಆಧರಿಸಿ ಅವಮಾನಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಬಾಡಿ ಶೇಮಿಂಗ್‌ ತಪ್ಪು’ ತಮ್ಮ ಎಕ್ಸ್‌ ಖಾತೆಯಲ್ಲಿ ರಮ್ಯಾ, ಮಹಿಳೆಯನ್ನು ದೇಹದ ಕಾರಣಕ್ಕೆ ಅವಮಾನಿಸಬಾರದು ಎನ್ನಲು ಆಕೆಯ ಬ್ಯಾಂಕ್ ಬ್ಯಾಲೆನ್ಸ್‌ ನೋಡುವ ಅಗತ್ಯವಿಲ್ಲ ಅಥವಾ ಅದಕ್ಕೊಂದು ನಿರ್ದಿಷ್ಟ ಕಾರಣ ಬೇಕಿಲ್ಲ ಎಂದು ಹೇಳಿದ್ದಾರೆ. ಮಹಿಳೆಯ…

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬೆನ್ನಲ್ಲೇ ಅನಂತ್ ನಾಗ್ ಮಹತ್ವದ ನಿರ್ಧಾರ!

ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ನಟ, ಪದ್ಮಭೂಷಣ ಅನಂತ್ ನಾಗ್ ಚಿತ್ರರಂಗದಿಂದ ದೂರ ಉಳಿಯುವ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 78 ವರ್ಷದ ನಟ, ತಮ್ಮ ನಿವೃತ್ತಿಯ ನಿರ್ಧಾರಕ್ಕೂ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ದವು. ಆದರೆ ತಾವು ಸಂಪೂರ್ಣ ಆರೋಗ್ಯವಾಗಿದ್ದು, ಚಿತ್ರರಂಗದಿಂದ ದೂರ ಉಳಿಯಲು ಬೇರೆ ಕಾರಣವಿದೆ ಎಂದು ಅನಂತ್ ನಾಗ್ ತಿಳಿಸಿದ್ದಾರೆ. ‘ನಾನು ಆರೋಗ್ಯವಾಗಿದ್ದೇನೆ’ ಚಿತ್ರರಂಗದಿಂದ ದೂರ ಉಳಿದಿರುವ ಬಗ್ಗೆ ಮಾತನಾಡಿರುವ ಅನಂತ್ ನಾಗ್, ‘ನನ್ನ ನಿರ್ಧಾರಕ್ಕೂ ನನ್ನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಆರೋಗ್ಯವಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ. ಇಂದಿನ ಸಿನಿಮಾಗಳ ಸ್ವರೂಪದ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾಗಳು ಕಥೆ ಮತ್ತು ಅದರ ಆಳಕ್ಕಿಂತ ಬಾಕ್ಸ್ ಆಫೀಸ್…

ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ

ಮುಂಬೈ: ರಾಮಾಯಣದ ಕಥೆಯನ್ನು ಆಧರಿಸಿದ ಮತ್ತೊಂದು ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಭಿಷೇಕ್ ಸಿಂಗ್ ನಿರ್ದೇಶನದ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಸೆಪ್ಟೆಂಬರ್ 25ರಂದು ಹಿಂದಿ ಹಾಗೂ ಛತ್ತೀಸ್‌ಗಢಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿದ್ದು, ಸೀತಾ ಅಪಹರಣದಿಂದ ಲಂಕಾ ದಹನದವರೆಗಿನ ಪ್ರಮುಖ ಘಟನೆಗಳ ಝಲಕ್ ನೀಡಿದೆ. ಟ್ರೇಲರ್‌ನಲ್ಲಿ ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯುವ ದೃಶ್ಯ ಪ್ರಮುಖವಾಗಿ ಮೂಡಿಬಂದಿದೆ. ಚಿನ್ನದ ಜಿಂಕೆಯ ಪ್ರಸಂಗದ ಬಳಿಕ ಸೀತೆಯ ಅಪಹರಣವಾಗುತ್ತದೆ. ವಿಷಯ ತಿಳಿದ ರಾಮ, ಸೀತೆಯ ಹುಡುಕಾಟಕ್ಕೆ ಹೊರಡುತ್ತಾರೆ. ಈ ಸಂದರ್ಭದಲ್ಲಿ ಹನುಮಂತ ಸೀತೆಯನ್ನು ಭೇಟಿಯಾಗುವ ದೃಶ್ಯಗಳೂ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿವೆ. ರಾಮಸೇತು ನಿರ್ಮಾಣ, ಹನುಮಂತನ ಲಂಕಾ ದಹನ ಹಾಗೂ ಸಂಜೀವಿನಿ ಪರ್ವತ ತರುವ ಸಾಹಸ ಸೇರಿದಂತೆ ರಾಮಾಯಣದ ಹಲವು ಪ್ರಮುಖ ಪ್ರಸಂಗಗಳನ್ನು ಒಂದೇ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’…