ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಅವತಾರವನ್ನು ನವರಾತ್ರಿ ಸಿಂಗಾರ ಎಂದಾದರೂ ಅನ್ನಿ, ಅಥವಾ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರ ಅವತಾರ ರೂಪಿಣಿ ಎಂದೂ ಅನ್ನಿ. ಆದರೆ ಈಕೆಯ ಈ ಸೊಗಸು-ಸೊಬಗಿನ ಅವತಾರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ನವರಾತ್ರಿ ಸಡಗರ ಎಲ್ಲೆಲ್ಲೂ ಆವರಿಸಿದೆ. ದಸರಾ ಸಂಭ್ರಮ ಇನ್ನೂ ಮನೆಮಾಡಿದೆ.. ಈ ಹಬ್ಬ ಸಂಭ್ರಮದ ಸಂದರ್ಭದಲ್ಲಿ ಹೊಸ ಸಿನಿಮಾಗಳ ಬಿಡುಗಡೆಗೆ ಸಜ್ಜಾಗುವ ರೀತಿಯಲ್ಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಸೊಬಗು-ಸೊಗಸಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರುತಾಗಿರುವ ಡಿ.ರೂಪಾ, ಪೊಲೀಸ್ ಇಲಾಖೆಯ ಕಾಯಕಕ್ಕಷ್ಟೇ ಸೀಮಿತಗೊಳಿಸಿಲ್ಲ. ಬಣ್ಣದ ಲೋಕಕ್ಕೂ ಸೈ ಎಣಿಸಕೊಳ್ಳುವ ರೀತಿಯ ಪ್ರತಿಭೆ ಅವರದ್ದು. ಕಾಲೇಜು ಜೀವನದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅವರದ್ದು. ಕಲಾವಿದೆಯಾಗಿಯೂ ಗಮನಸೆಳೆಯುತ್ತಿರುವ ಡಿ.ರೂಪಾ, ಆಗಾಗ್ಗೆ ಉಪನ್ಯಾಸ ನೀಡುತ್ತಾ ಯುವಜನರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.…
Category: ಸಿನಿಮಾ
ಹುಲಿ ಉಗುರು ಧರಿಸಿದ ಸಂತೋಷ್ ಬಂಧನ ನಂತರ ಇದೀಗ ಸೆಲೆಬ್ರೆಟಿಗಳಿಗೂ ನಡುಕ
ಬೆಂಗಳೂರು: ಹಳ್ಳಿಕಾರ್ ತಳಿ ಸಂರಕ್ಷಣೆ ಮೂಲಕ ಹೆಸರುವಾಸಿಯಾಗಿರುವ ವರ್ತೂರು ಸಂತೋಷ್ ಅವರು ಹುಲಿ ಉಗುರು ಇರುವ ಲಾಕೆಟ್ ಧರಿಸಿದ್ದ ಆರೋಪದಲ್ಲಿ ಬಂಧನವಾಗುತ್ತಿದ್ದಂತೆಯೇ ಅನೇಕ ಸೆಲೆಬ್ರೆಟಿಗಳಿಗೂ ಸಂಕಷ್ಟ ಎದುರಾಗಿದೆ. ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಬಳಿಕ ಈಗ ನಟ ದರ್ಶನ್ ಹಾಗೂ ವಿನಯ್ ಗುರೂಜಿ ವಿರುದ್ದವೂ ಆರೋಪ ಕೇಳಿಬಂದಿದೆ. ಈ ಸಂಬಂಧ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆನ್ನಲಾದ ದೂರು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ನಟ ದರ್ಶನ್ ಧರಿಸಿದ್ದ ಬಂಗಾರದ ಚೈನ್’ನಲ್ಲಿ ಹುಲಿಯ ಉಗುರು ಇದೆ. ವಿನಯ್ ಗುರೂಜಿ ಅವರು ಹುಲಿಯ ಚರ್ಮದ ಮೇಲೆ ಕೂತಿರುತ್ತಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ವಿರುದ್ದದ್ದ ಕ್ರಮದ ರೀತಿಯಲ್ಲೇ ನಟ ದರ್ಶನ್, ವಿನಯ್ ಗುರೂಜಿ ಬಗ್ಗೆಯೂ ವಿಚಾರಣೆ ನಡೆಸಬೇಕೆಂದು ಶಿವಕುಮಾರ್ ಮನವಿ…
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನ.24ರಂದು ಬಿಡುಗಡೆ
ನಟಿ ರಮ್ಯಾ ತಮ್ಮ ‘ಆ್ಯಪಲ್ ಬಾಕ್ಸ್ ಸ್ಟುಡಿಯೋ’ ಸಂಸ್ಥೆ ಮೂಲಕ ನಿರ್ಮಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಗೆ ಜೊತೆಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ರಿಲೀಸ್ ಬಗ್ಗೆ ಆ್ಯಪಲ್ ಬಾಕ್ಸ್ ಸೋಶಿಯಲ್ . ಮೀಡಿಯಾ ತಾಣದಲ್ಲಿ ಮಾಹಿತಿನವೆಂಬರ್ 24ರಂದು ಚಿತ್ರ ಬಿಡುಗಡೆ ಅಗಲಿದೆ ಎಂದು ತಂಡ ಮಾಹಿತಿ ನೀಡಿದೆ.
‘ಉಪಾಧ್ಯಕ್ಷ’ ಬಗ್ಗೆ ಟೀಸರ್ ಸೃಷ್ಟಿಸಿದ ಕುತೂಹಲ
‘ಘೋಸ್ಟ್’ ನಿರ್ದೇಶಕ ಶ್ರೀನಿಯ ಸಾಲು ಸಾಲು ಪ್ರಶ್ನೆ; ಉತ್ತರ ‘ಘೋಸ್ಟ್ 2’ನಲ್ಲಿ
‘ಘೋಸ್ಟ್’ ನಿರ್ದೇಶಕ ಶ್ರೀನಿ ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ‘ಘೋಸ್ಟ್’ ಬಗ್ಗೆ ಮೆಚ್ಚುಗೆ ವ್ಯಕ್ತಗಿದ್ದರಿಂದ ಇದೀಗ ಮತ್ತೊಂದು ಹಿಟ್ ಸಿನಿಮಾ ನೀಡಲು ಮುಂದಾಗಿರುವ ಶ್ರೀನಿ ‘ಘೋಸ್ಟ್ 2’ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶ್ರೀನಿ ‘ಘೋಸ್ಟ್ 2.0’ ಬರಲಿದೆ ಎಂದಿದ್ದಾರೆ. ‘ದಳವಾಯಿ ಬದುಕಿದ್ದಾನ ? Underpass ಒಲ್ಗಡೆ cars, bikes ಹೆಂಗ್ ಬಂತು? Shivanna statue ಒಳಗಡೆ ಹೆಂಗ್ ಹೋದ್ರು? Boats operate ಮಾಡ್ತಿದ್ದೋರು ಯಾರು? ದಳವಾಯಿ ಮಗ ಯಾರು ?’ ಎಂಬ ಸಾಲು ಸಾಲು ಪ್ರಶ್ನೆಗಳನ್ನು ಬರೆದಿರುವ ಶ್ರೀನಿ ‘All questions will be answered in GHOST 2.0’ ಎಂದು ಪೋಸ್ಟ್ ಹಾಕಿದ್ದಾರೆ. ದಳವಾಯಿ ಬದುಕಿದ್ದಾನ ? Underpass ಒಲ್ಗಡೆ cars, bikes ಹೆಂಗ್ ಬಂತು ?Shivanna statue ಒಳಗಡೆ ಹೆಂಗ್ ಹೋದ್ರು ? Boats operate ಮಾಡ್ತಿದ್ದೋರು ಯಾರು ?ದಳವಾಯಿ…
