ಕೈಯಲ್ಲಿ ಲಾಠಿಯಲ್ಲ, ಖಡ್ಗ.. ಮಹಾರಾಣಿ ‘ರೂಪ’ದಲ್ಲಿ ಐಪಿಎಸ್ ಅಧಿಕಾರಿ..!

ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಅವತಾರವನ್ನು ನವರಾತ್ರಿ ಸಿಂಗಾರ ಎಂದಾದರೂ ಅನ್ನಿ, ಅಥವಾ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರ ಅವತಾರ ರೂಪಿಣಿ ಎಂದೂ ಅನ್ನಿ. ಆದರೆ ಈಕೆಯ ಈ ಸೊಗಸು-ಸೊಬಗಿನ ಅವತಾರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.

ನವರಾತ್ರಿ ಸಡಗರ ಎಲ್ಲೆಲ್ಲೂ ಆವರಿಸಿದೆ. ದಸರಾ ಸಂಭ್ರಮ ಇನ್ನೂ ಮನೆಮಾಡಿದೆ.. ಈ ಹಬ್ಬ ಸಂಭ್ರಮದ ಸಂದರ್ಭದಲ್ಲಿ ಹೊಸ ಸಿನಿಮಾಗಳ ಬಿಡುಗಡೆಗೆ ಸಜ್ಜಾಗುವ ರೀತಿಯಲ್ಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಸೊಬಗು-ಸೊಗಸಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರುತಾಗಿರುವ ಡಿ.ರೂಪಾ, ಪೊಲೀಸ್ ಇಲಾಖೆಯ ಕಾಯಕಕ್ಕಷ್ಟೇ ಸೀಮಿತಗೊಳಿಸಿಲ್ಲ. ಬಣ್ಣದ ಲೋಕಕ್ಕೂ ಸೈ ಎಣಿಸಕೊಳ್ಳುವ ರೀತಿಯ ಪ್ರತಿಭೆ ಅವರದ್ದು. ಕಾಲೇಜು ಜೀವನದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅವರದ್ದು. ಕಲಾವಿದೆಯಾಗಿಯೂ ಗಮನಸೆಳೆಯುತ್ತಿರುವ ಡಿ.ರೂಪಾ, ಆಗಾಗ್ಗೆ ಉಪನ್ಯಾಸ ನೀಡುತ್ತಾ ಯುವಜನರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಇದೀಗ ಈ ಐಪಿಎಸ್ ಅಧಿಕಾರಿ ಮಹಾರಾಣಿಯ ಕಾಣಿಸಿಕೊಂಡು ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.

ಲಾಠಿ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದು ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಡಿ.ರೂಪಾ ಅವರು ಕೆಂಪು ಸೀರೆ, ಹಸಿರು ಬಣ್ಣದ ಬ್ಲೌಸ್ ಧರಿಸಿ, ಮೈತುಂಬಾ ಆಭರಣ ತೊಟ್ಟು ಕೈಯಲ್ಲಿ ಖಡ್ಗ ಹಿಡಿದು, ಸಿಂಹಾಸನರೂಢರಾಗಿ ಫೋಸ್ ನೀಡಿ, ರಾಣಿಯಂತೆ ಕಂಗೊಳಿಸಿದ್ದಾರೆ. ಈ ಫೋಟೋಗಳನ್ನು ಡಿ.ರೂಪಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ.

ರೂಪಾ ಅವರ ವೀಡಿಯೋವನ್ನು ಹಂಚಿಕೊಂಡಿರುವ ಭಾರ್ಗವಿ ಕೆ. ಆರ್. ಎಂಬವರು ತಮ್ಮ ಪೋಸ್ಟ್ ಜೊತೆ ನೀಡಿರುವ ಟ್ಯಾಗ್ ಲೈನ್ ಕೂಡಾ ಗಣನಸೆಳೆದಿದೆ. ‘ರೂಪಾ ಅವರು ಶಕ್ತಿ, ಅನುಗ್ರಹ ಮತ್ತು ಸಬಲೀಕರಣದ ಸಾಕಾರ. ಐಪಿಎಸ್ ಅಧಿಕಾರಿಯಾಗಿ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುತ್ತಾರೆ.  ಮಹಿಳೆಯರು ಅಡೆತಡೆಗಳನ್ನು ಮುರಿಯುತ್ತಿರುವ ಜಗತ್ತಿನಲ್ಲಿ, ರೂಪಾ ಅವರು ಉಗ್ರ ಮತ್ತು ಅಸಾಧಾರಣ ಎಂದರೆ ಏನು ಎಂಬುದಕ್ಕೆ ಉಜ್ವಲ ಉದಾಹರಣೆಯಾಗಿದೆ’ ಎಂದು ಭಾರ್ಗವಿ ಬರೆದುಕೊಂಡಿದ್ದಾರೆ.

‘ಈ ವೀಡಿಯೊ ಕೇವಲ ಫ್ಯಾಷನ್ ಬಗ್ಗೆ ಅಲ್ಲ; ಇದು ಸಬಲೀಕರಣ, ಸ್ಥಿತಿಸ್ಥಾಪಕತ್ವ ಮತ್ತು ಮಹಿಳೆಯರ ಅಚಲ ಮನೋಭಾವದ ಬಗ್ಗೆ. ನಿಮ್ಮ ನಿಜವಾದ ಆತ್ಮವಾಗಿರುವಾಗ ನೀವು ಜಗತ್ತನ್ನು ಗೆಲ್ಲಬಹುದು ಎಂಬುದನ್ನು ಇದು ನೆನಪಿಸುತ್ತದೆ ಎಂದು ವ್ಯಾಖ್ಯಾನಿಸಿರುವ ಭಾರ್ಗವಿ, ಅವಳು ಶಕ್ತಿ ಮತ್ತು ಸಮಚಿತ್ತದ ನಡುವಿನ ಗೆರೆಯನ್ನು ಆಕರ್ಷಕವಾಗಿ ನಡೆಸುತ್ತಿರುವುದನ್ನು ವೀಕ್ಷಿಸಿ, ನಿಮ್ಮ ಬಗ್ಗೆ ಸತ್ಯವಾಗಿದ್ದಾಗ ನೀವು ಯಾವುದೇ ಕ್ಷೇತ್ರವನ್ನು ವಶಪಡಿಸಿಕೊಳ್ಳಬಹುದು ಎಂದು ಸಾಬೀತುಪಡಿಸಿ’ ಎಂದು ಬರೆದುಕೊಂಡಿರುವ ಸಾಲುಗಳೂ ಕುತೂಹಲಕಾರಿ.

ಡಿ.ರೂಪಾ ಅವರ ಈ ಫೋಟೋಗಳಿಗೆ ನೆಟ್ಟಿಗರಿಂದಲೂ ಸಕತ್ ಲೈಕ್ಸ್ ಸಿಕ್ಕಿದೆ. ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ಹಾಗೂ ಜೈ ದುರ್ಗಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

Related posts