ಶ್ರೀ ಕಟೀಲು ಕ್ಷೇತ್ರ ವೈಭವವನ್ನು ಸಾಕ್ಷೀಕರಿಸಿದ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

ಮಂಗಳೂರು: ಪುರಾಣ ಪ್ರಸಿದ್ಧ ಶ್ರೀ ಕಟೀಲು ಕ್ಷೇತ್ರದಲ್ಲಿ ಇದೀಗ ವೈಭವದ ಜಾತ್ರಾ ಮಹೋತ್ಸವದ ಸಡಗರ ಆವರಿಸಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ. ಕಟೀಲು ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲೇ ಕರಾವಳಿಯ ಯುವಜನ ಸಮೂಹ ಶ್ರೀ ದುರ್ಗಾಪರಮೇಶ್ವರಿಯ ಮಹಿಮೆಯ ಬಗ್ಗೆ ಬೆಳಕು ಚೆಲ್ಲುವ ಹಾಡೊಂದನ್ನು ಲೋಕಾರ್ಪಣೆ ಮಾಡಿ ಗಮನಸೆಳೆದಿದ್ದಾರೆ. ಈ ಭಕ್ತಿ ಗಾನಕ್ಕೆ ಆಸ್ತಿಕರ ಪಾಳಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೆ ಪ್ರಯುಕ್ತ ದೇವಲೋಕ ಕ್ರಿಯೇಷನ್ಸ್ ವತಿಯಿಂದ ‘ಅಪ್ಪೆ ಭ್ರಾಮರಿಯೇ’ ಎಂಬ ಹೊಸ ಭಕ್ತಿಗೀತೆಯನ್ನು ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಗಿದೆ. ಜ್ಯೋತಿಗುಡ್ಡೆ ಕ್ಷೇತ್ರದ ಅರ್ಚಕಿ ಗುಲಾಬಿ ಅಮ್ಮನವರು ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿದರು. ಸಾಫಲ್ಯ ಸೇವಾ ಸಂಘ (ರಿ) ಮುಂಬೈ ಇದರ ಅಧ್ಯಕ್ಷ ಶ್ರೀನಿವಾಸ…

ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆ ದೇಗುಲ ಇಂದು ಅನನ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಶ್ರೀ ರಾಮನವಮಿ ದಿನವಾದ ಇಂದು ಭವ್ಯ ದೇಗುಲದಲ್ಲಿರುವ ಬಾಲರಾಮನ ವಿಗ್ರಹಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿದ ಸನ್ನಿವೇಶ ಆಸ್ತಿಕ ಸಮೂಹದ ಗಮನಸೆಳೆಯಿತು. श्री राम नवमी के पावन पर्व पर प्रभु का सूर्यतिलक Surya Tilak of Prabhu on the pious occasion of Shri Ram Navami pic.twitter.com/UCaweKHT7h — Shri Ram Janmbhoomi Teerth Kshetra (@ShriRamTeerth) April 6, 2025 ದೇಶಾದ್ಯಂತ ರಾಮನವಮಿ ಹಬ್ಬವನ್ನು ಆಚರಿಸುತ್ತಿದ್ದ ಹೊತ್ತಿಗೆ ಅಯೋಧ್ಯೆಯಲ್ಲಿರುವ ಬಾಲ ರಾಮನ ಹಣೆಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ಕೋಟ್ಯಂತರ ಜನರು ಈ ಅದ್ಭುತ ದೃಶ್ಯವನ್ನು ಸಾಕ್ಷೀಕರಿಸಿದರು. ಸೂರ್ಯ ರಶ್ಮಿ ವಿಗ್ರಹಕ್ಕೆ ಸ್ಪರ್ಶಿಸುತ್ತಿದ್ದಂತೆಯೇ ಬಾಲರಾಮನ ಹಣೆಯಲ್ಲಿ ತಿಲಕದ ದೃಶ್ಯ ಕಂಡುಬಂತು. ಅದಾಗಲೇ ಬಾಲರಾಮನಿಗೆ ವಿಶೇಷ ಆರತಿಯನ್ನು ನೆರವೇರಿಸಲಾಯಿತು. సూర్యవంశ…

ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲದ ವೆಂಕಟೇಶ್ವರ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

ತಿರುಮಲ: ದಕ್ಷಿಣ ಭಾರತದ ಪುಣ್ಯಕ್ಷೇತ್ರ ತಿರುಪತಿ ದೇವಾಲಯದಲ್ಲಿ ಹಿಂದೂಗಳನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳುವ ಸಂಬಂಧ ಆಂಧ್ರಪ್ರದೇಶ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಕುರಿತಂತೆ ಶುಕ್ರವಾರ ಮಾಹಿತಿ ಹಂಚಿಕೊಂಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಿರುಮಲದ ವೆಂಕಟೇಶ್ವರ ದೇವಾಲಯದಲ್ಲಿ ಹಿಂದೂಗಳನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಪ್ರಸಕ್ತ ಇತರ ಸಮುದಾಯದ ವ್ಯಕ್ತಿಗಳೂ ಸೇವೆ ಸಲ್ಲಿಸುತ್ತಿದ್ದು ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ. ದೇಶಾದ್ಯಂತ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲೂ ವೆಂಕಟೇಶ್ವರ ಸ್ವಾಮಿ ದೇವಾಲಯ ನಿರ್ಮಿಸಲಾಗುವುದು ಎಂದವರು ತಿಳಿಸಿದರು.

ಮಂಜೇಶ್ವರ ಅನಂತೇಶ್ವರ ದೇವಸ್ಥಾನ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ತಿ

ಚಿತ್ರ : ಮಂಜು ನೀರೇಶ್ವಾಲ್ಯ ಮಂಜೇಶ್ವರ: ಕರಾವಳಿಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿರುವ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಸ್ಥಾನ ವಿಶೇಷ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ಈ ದೇವಾಲಯದ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ ತಿ ಹಾಗೂ ಬೆಳ್ಳಿ ಲಾಲ್ಕಿ ಯ 150 ನೇ ವರ್ಷದ ಸಂಭ್ರಮೋತ್ಸವ ಐತಿಹಾಸಿಕವಾಗಿ ಅಪೂರ್ವ ವಿಜೃಂಭಣೆಯಿಂದ ನೆರವೇರಿದೆ. ಸೋಮವಾರ ಬೆಳಿಗ್ಗೆ ಬೆಳ್ಳಿ ಪಲ್ಲಕಿ ಹಗಲೋತ್ಸವ , ಮಧ್ಯಾಹ್ನ ಸಮಾಜ ಭಾಂದವರಿಂದ ಶ್ರೀ ನರಸಿಂಹ ಸ್ತುತಿ ಪಠಣ ದೊಂದಿಗೆ ಪ್ರದಕ್ಷಿಣಾ ಸೇವೆ ನಡೆಯಿತು. ಸಮೃದ್ಧವಾದ ನಿರೀಕ್ಷಣಾ ವಸ್ತುಗಳು ಶ್ರೀ ದೇವರಿಗೆ ವಾದ್ಯ ಘೋಷ್ಠಿಯೊಂದಿಗೆ ಸಮರ್ಪಣೆ ಮಡಿದ ಸನ್ನಿವೇಶವೂ ಭಕ್ತ ಸಮೂಹದ ಗಮನಕೇಂದ್ರೀಕರಿಸಿತು. ರಾತ್ರಿ 150 ನೇ ವರ್ಷದ ಬೆಳ್ಳಿ ಲಾಲಕಿಗೆ ಅಪೂರ್ವ ಅಲಂಕಾರದೊಂದಿಗೆ ಉತ್ಸವ ಹಾಗೂ ಪೂಜಾ ಸೇವೆ, ಉತ್ಸವದಲ್ಲಿ ಅದ್ಧುರಿ ವಾದ್ಯಘೋಷ್ಠಿ, ಕಣ್ಮನ ಸಂತೈಸುವ ವಿಶೇಷ ದೀಪಾರಾಧನೆ ನೆರವೇರಿತು.

ಚೆಂಡಿನ ನಾಡಿನ ಹಿರಿಮೆಯನ್ನು ಸಾರಿದ ‘ಪುರಲ್ದ ಸಿರಿಯೇ..’ ನಾಡಿನ ಅಧಿದೇವತೆ ಬಗ್ಗೆ ಗುಣಗಾನ

ಕರ್ನಾಟಕದ ಪುರಾಣ ಪ್ರಸಿದ್ಧ ಶ್ರೀ ಪೊಳಲಿ ಕ್ಷೇತ್ರ ಒಂದಿಲ್ಲೊಂದು ಮಹಿಮೆಯಿಂದ ಗಮನಸೆಳೆಯುತ್ತಿರುತ್ತದೆ. ಶತಮಾನಗಳಷ್ಟು ಹಳೆಯ ಈ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ 105 ವರ್ಷಗಳ ಬಳಿಕ ನಡೆದ ‘ಶತ ಚಂಡಿಕಾಯಾಗ’ ಆಸ್ತಿಕ ವಲಯದ ಕುತೂಹಲದ ಕೇಂದ್ರಬಿಂದುವಾಗಿತ್ತು. ಇದೀಗ ಪುರಾಣ ಪ್ರಸಿದ್ಧ ‘ಚೆಂಡಿನ ಉತ್ಸವ’ಕ್ಕೆ ಪೊಳಲಿ ಕ್ಷೇತ್ರ ಸಜ್ಜಾಗಿರುವಂತೆಯೇ ಶ್ರೀ ಕ್ಷೇತ್ರದ ಗುಣಗಾನ ಮಾಡಿರುವ ಹಾಡೊಂದು ಬಿಡುಗಡೆಯಾಗಿದೆ. ಪೊಳಲಿ ಸನ್ನಿಧಾನದಲ್ಲಿ ಮಾರ್ಚ್ 12ರಂದು ಬಿಡುಗಡೆಯಾಗಿರುವ ‘ಪುರಲ್ದ ಸಿರಿಯೇ..’ ಹೆಸರಿನ ಭಕ್ತಿ ಗಾಯನದ ವೀಡಿಯೊ ನಾಡಿನ ಆಸ್ತಿಕ ಸಮೂಹದ ಚಿತ್ತವನ್ನು ಸೂಜಿಗಲ್ಲಿನಂತೆ ಸೆಳೆದಿಟ್ಟುಕೊಳ್ಳುವಂತಿದೆ. ದೇವೀ ನೆಲೆಯಾಗಿರುವ ಪೊಳಲಿಯನ್ನು ತುಳು ಭಾಷೆಯಲ್ಲಿ ‘ಪುರಾಲ್’ ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಭಕ್ತ ಸೀಮೆಗೆ ಪೊಳಲಿ ರಾಜರಾಜೇಶ್ವರಿಯೇ ನಾಡಿನ ಅಧಿದೇವತೆ. ಈ ಸೀಮೆಯುದ್ದಕ್ಕೂ ಪೊಳಲಿ ದೇವಿಯನ್ನು ‘ಪುರಲ್ದ ಉಳ್ಳಾಲ್ತಿ’ ಎಂದೇ ಆಸ್ತಿಕರು ಕರೆಯುತ್ತಾರೆ. ದುಃಖ ದುಮ್ಮಾನಗಳಿಗೆ ಸಾಂತ್ವಾನ…

‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಗತ ವೈಭವ ಮರುಕಳಿಸಿದೆ. ಐತಿಹಾಸಿಕ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸುಮಾರು ಒಂದು ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ ‘ಪೊಳಲಿ ಚೆಂಡು’ ಎಂದೇ ಇದು ಪ್ರತೀತಿ. ಈ ವರ್ಷ 28 ದಿನಗಳ ಜಾತ್ರೆ ನಡೆಯಲಿದ್ದು ಎಪಿಲ್ 9 ರಂದು ‘ಕಡೆ ಚೆಂಡು’ ನಿಗದಿಯಾಗಿದೆ. ಪೊಳಲಿ ಚೆಂಡು ಉತ್ಸವದ ಸಂಕ್ಷಿಪ್ತ ಕ್ಯಾಲೆಂಡರ್‌ ಹೀಗಿದೆ: ಈ ಬಾರಿ ಏಪ್ರಿಲ್ 4ರಂದು 20ನೇ ದಂಡಮಾಲೋತ್ಸವ, ಏಪ್ರಿಲ್ 5ರಂದು ಮೊದಲ ಚೆಂಡು, ಏಪ್ರಿಲ್ 9ರಂದು ಕಡೇ ಚೆಂಡು, ಏಪ್ರಿಲ್ 10ರಂದು ಬ್ರಹ್ಮ ರಥೋತ್ಸವ, ಏಪ್ರಿಲ್ 11ರಂದು ಆರಾಟ ಮಹೋತ್ಸವ ಜರುಗಲಿದೆ. ದಕ್ಷಿಣಕನ್ನಡದ ಪೊಳಲಿಯಲ್ಲಿರುವ ನಾಡಿನ ಅಧಿ ದೇವತೆ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಪ್ರತೀ ವರ್ಷ ಮಾರ್ಚ್ 14ರ ತಡರಾತ್ರಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಧ್ವಜಾರೋಹಣ ನಂತರವಷ್ಟೇ …

ಮಂಗಳೂರು ರಥಬೀದಿ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ‘ಬ್ರಹ್ಮರಥೋತ್ಸವ’ ವೈಭವ

ಮಂಗಳೂರು: ಆಸ್ತಿಕರ ನಾಡು, ರಾಜ್ಯ ಕರಾವಳಿ ಇದೀಗ ಸಾಲು ಸಾಲು ವೈದ್ಧಿಕ ಕೈಂಕರ್ಯಗಳಿಗೆ ಸಾಕ್ಷಿಯಾಗುತ್ತಿವೆ. ಅದರ ನಡುವೆಯೇ ಮಂಗಳೂರಿನಲ್ಲಿ ನೆರವೇರಿದ ‘ಮಹಾಮಾಯ ರಥೋತ್ಸವ’ವು ಮಹಾ ವೈಭವವಾಗಿ ಗಮನಸೆಳೆಯಿತು. ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ಬ್ರಹ್ಮರಥೋತ್ಸವ ಮಂಗಳವಾರ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಮಹಾಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ , ಪುಳಕಾಭಿಷೇಕ , ಕನಕಾಭಿಷೇಕ ಗಳು ನಡೆದವು. ಯಜ್ಞ ಮಂಟಪದಲ್ಲಿ ನಡೆದ ಮಹಾ ಪೂರ್ಣಾಹುತಿ ಸಂದರ್ಭದಲ್ಲಿ ಧರ್ಮಿಕ ಪ್ರಮುಖರು ಯತಿಗಳು ಭಾಗಿಯಾದರು. ಸಂಜೆ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ರಥಾರೋಹಣವು ಅನನ್ಯ ಮಹೋತ್ಸವವಾಗಿ ಆಸ್ತಿಕರ ಗಮನಕೇಂದ್ರೀಕರಿಸಿತು. ಭಕ್ತರು ರಥ ಎಳೆದು ಪುನೀತರಾದರು. ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಸಿ.ಎ.ಶ್ರೀನಿವಾಸ್ ಕಾಮತ್, ಮಾರೂರ್ ಸುಧೀರ್ ಪೈ, ಪ್ರಕಾಶ್ ಕಾಮತ್, ಅನಂತ್ ಭಟ್, ಗಣೇಶ್ ಭಟ್, ದಕ್ಷಿಣ ಕನ್ನಡ…

ಪೊಳಲಿಯಲ್ಲಿ ಮರುಕಳಿಸಿದ ಮಹಾವೈಭವ; ಶತಚಂಡಿಕಾ ಯಾಗಕ್ಕೆ ಭಕ್ತರ ಮಹಾಪೂರ

ಮಂಗಳೂರು: ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಇದೀಗ ಮತ್ತೊಂದು ಕೈಂಕರ್ಯದಿಂದ ಆಸ್ತಿಕರ ಗಮನಸೆಳೆದಿದೆ. ‘ಚೆಂಡು ಉತ್ಸವದ ನಾಡು’ ಎಂದೇ ಗುರುತಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಶತಮಾನದ ನಂತರ ಶತಚಂಡಿಕಾಯಾಗ ನಡೆಯುತ್ತಿದೆ. ಇದು ನಿಜಕ್ಕೂ ಅಪೂರ್ವ ಹಾಗೂ ಅನನ್ಯ ಕೈಂಕರ್ಯ. ಸುಮಾರು 105 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಇಂತಹಾ ಚಂಡಿಕಾ ಯಾಗ ನಡೆದಿತ್ತು. ಲೋಕ ಕಲ್ಯಾಣಾರ್ಥವಾಗಿ ನೆರವೇರುತ್ತಿರುವ ಈ ಶತಚಂಡಿಕಾ ಯಾಗದಲ್ಲಿ ದೇಶದ ವಿವಿಧೆಡೆಯ ಯತಿಗಳು ಭಾಗಿಯಾಗುತ್ತಿದ್ದಾರೆ. ಚೆಂಡು ಉತ್ಸವ ಸಂದರ್ಭದ ಜನೋತ್ಸವಕ್ಕೆ ಈ ಶತಚಂಡಿಕಾ ಯಾಗದ ಸಡಗರ ಸಾಕ್ಷಿಯಾಗುತ್ತಿರುವುದು ವಿಶೇಷ. ಮಾರ್ಚ್ 1 ರಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವೈಧಿಕ ,ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ವಿವಿಧ ಕೈಂಕರ್ಯಗಳು ನೆರವೇರುತ್ತಿದ್ದು, ಮಾರ್ಚ್ 5 ರಂದು ಬುಧವಾರ ಶತಚಂಡಿಕಾಯಾಗ ಪರಿಪೂರ್ಣವಾಗಿ ನೆರವೇರಲಿದೆ. ಲೋಕಕಲ್ಯಾಣಾರ್ಥದ ಜೊತೆಯಲ್ಲೇ ಸಾನಿಧ್ಯ ಅಭಿವೃದ್ದಿಗಾಗಿ ಸುಮಾರು 105 ವರ್ಷಗಳ ಬಳಿಕ…

‘ವಸುಧೈವ ಕುಟುಂಬಕಂ’ ಘೋಷಣೆಗೆ ಸಾಕ್ಷಿಯಾದ ಮಹಾಕುಂಭಮೇಳ : 66 ಕೋಟಿಗೂ ಹೆಚ್ಚು ಆಸ್ತಿಕರಿಂದ ಪುಣ್ಯಸ್ನಾನ

ಲಕ್ನೋ: ಇಡೀ ಜಗತ್ತಿನ ಗಮನಸೆಳೆದಿದ್ದ ಪ್ರಯಾಗರಾಜ್ ಮಹಾ ಕುಂಭ 2025 ಪರಿಪೂರ್ಣವಾಗಿದೆ. ಈ ಕೈಂಕರ್ಯದ ಯಶಸ್ವಿಗೆ ಕಾರಣರಾದವರನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ಮರಿಸಿದ್ದಾರೆ. ಮಹಾಕುಂಭ ಯಶಸ್ವಿ ಪೂರ್ಣಗೊಳಿಸುವಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವೇ ಕಾರಣ ಎಂದಿರುವ ಅವರು ಈ ಭವ್ಯ ಧಾರ್ಮಿಕ ಸಭೆಯನ್ನು “ಏಕತೆ, ಸಮಾನತೆ ಮತ್ತು ಸಾಮರಸ್ಯದ ಮಹಾಯಜ್ಞ” ಎಂದು ಕರೆದಿದ್ದಾರೆ. ಪ್ರಧಾನಿ ಮೋದಿಯವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿರುವ ಸಿಎಂ ಯೋಗಿ, ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ನಿಮ್ಮ ಯಶಸ್ವಿ ಮಾರ್ಗದರ್ಶನದ ಪರಿಣಾಮವಾಗಿ ‘ಏಕತೆ, ಸಮಾನತೆ, ಸಾಮರಸ್ಯದ ಮಹಾಯಜ್ಞ’ – ಮಹಾ ಕುಂಭ 2025, ಪ್ರಯಾಗರಾಜ್ ಮುಕ್ತಾಯಗೊಂಡಿದೆ, ಭವ್ಯತೆ ಮತ್ತು ದೈವತ್ವದ ಜೊತೆಗೆ ಭದ್ರತೆ, ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಕಳೆದ 45 ಪವಿತ್ರ ದಿನಗಳಲ್ಲಿ, ಪೂಜ್ಯ ಸಂತರು ಮತ್ತು ಋಷಿಗಳು ಸೇರಿದಂತೆ 66 ಕೋಟಿಗೂ…

ಭಕ್ತಿ ವೈಭವ, ಸಾಂಸ್ಕೃತಿಕ ಸಂಭ್ರಮಕ್ಕೂ ಸಾಕ್ಷಿಯಾದ ಇಶಾ ‘ಶಿವರಾತ್ರಿ’

ಕೊಯಮತ್ತೂರು: ಇಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದಲ್ಲಿ ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ಬುಧವಾರ ರಾತ್ರಿ ಶಿವರಾತ್ರಿ ಮಹಾ ವೈಭವ ನಾಡಿನ ಗಮನಸೆಳೆಯಿತು. ಶಿವಸ್ಮರಣೆಯ ಮಹಾ ಹಬ್ಬದಲ್ಲಿ ದೇಶದ ವಿವಿಧೆಡೆಯ ಆಸ್ತಿಕರು ಆಗಮಿಸಿದ್ದರು. ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ನಡೆದ ಭಕ್ತಿ ವೈಭವ ಸಾಂಸ್ಕೃತಿಕ ಸಂಭ್ರಮಕ್ಕೂ ಸಾಕ್ಷಿಯಾಯಿತು. ಈ ಮಹಾಶಿವರಾತ್ರಿ ಆಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.