ನವದೆಹಲಿ: ಜನವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಕಳೆದ ವರ್ಷದ ಇದೇ ಅವಧಿಯೊಂದಿಗೆ ಹೋಲಿಸಿದರೆ ಶೇ.6.2ರಷ್ಟು ಹೆಚ್ಚಳಗೊಂಡು ₹1,93,384 ಕೋಟಿ ದಾಖಲಿಸಿದೆ ಎಂದು ಅಧಿಕೃತ ಅಂಕಿಅಂಶಗಳು ಭಾನುವಾರ ಪ್ರಕಟಿಸಿವೆ. ಕಳೆದ ವರ್ಷ ಜನವರಿಯಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ ₹1,82,094 ಕೋಟಿ ಆಗಿತ್ತು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜನವರಿ ಅವಧಿಯಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ ₹18,43,423 ಕೋಟಿಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ.8.3ರಷ್ಟು ಬಲವಾದ ವೃದ್ಧಿಯನ್ನು ತೋರಿಸಿದೆ. ಜನವರಿಯಲ್ಲಿ ನಿವ್ವಳ ಜಿಎಸ್‌ಟಿ ಆದಾಯ ₹1,70,719 ಕೋಟಿ ಆಗಿದ್ದು, ಇದು ಕಳೆದ ವರ್ಷದ ಇದೇ ತಿಂಗಳಿಗಿಂತ ಶೇ.7.6ರಷ್ಟು ಹೆಚ್ಚಾಗಿದೆ. ಏಪ್ರಿಲ್‌ನಿಂದ ಜನವರಿವರೆಗೆ ನಿವ್ವಳ ಜಿಎಸ್‌ಟಿ ಆದಾಯ ₹15,95,752 ಕೋಟಿಗೆ ಏರಿಕೆಯಾಗಿದ್ದು, ಶೇ.6.8ರಷ್ಟು ವೃದ್ಧಿ ಕಂಡಿದೆ. ದೇಶೀಯ ಜಿಎಸ್‌ಟಿ ಸಂಗ್ರಹವು ಶೇ.4.8ರಷ್ಟು ಹೆಚ್ಚಳಗೊಂಡು ₹1,41,132 ಕೋಟಿಗೆ ತಲುಪಿದೆ. ಆಮದು ಆಧಾರಿತ ಜಿಎಸ್‌ಟಿ ಸಂಗ್ರಹವು ಶೇ.10.1ರಷ್ಟು ಏರಿಕೆಯೊಂದಿಗೆ ₹52,253…
Category: ರಾಜ್ಯ
ಕಾರಾಗೃಹ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಉದ್ಘಾಟನೆ
ಬೆಂಗಳೂರು: ಬೆಂಗಳೂರಿನ ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಕಾರಾಗೃಹ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಉದ್ಘಾಟನೆಗೊಂಡಿದೆ. ಈ ವೇಳೆ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಕೈದಿಗಳ ಸುಧಾರಣೆಗೆ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಕುರಿತ ಕೈಪಿಡಿಯನ್ನು ಬಿಡುಗಡೆ ಮಾದಲಾಯಿತು. ರಾಜ್ಯದ ಎಲ್ಲ ಪ್ರಮುಖ ಕಾರಾಗೃಹಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕಣ್ಗಾವಲು ಮೂಲಕ ನಿಗಾವಹಿಸಲು ಅನುಕೂಲವಾಗಲಿದೆ. ಒಟ್ಟು 1076 ಕ್ಯಾಮೆರಾಗಳನ್ನು ಸೆಂಟ್ರಲ್ ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಮಾಡಲಾಗಿದೆ. ಕಾರಾಗೃಹಗಳಿಗೆ ನಿಷೇಧಿತ ವಸ್ತುಗಳ ಸರಬರಾಜು, ಕಾನೂನು ಬಾಹಿರ ಚಟುವಟಿಕೆ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಕಮಾಂಡ್ ಸೆಂಟರ್ ಮೂಲಕ ದಿನದ 24 ಗಂಟೆಯು ನಿಗಾವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಜೈಲುಗಳಲ್ಲಿನ ಕ್ಯಾಮೆರಾಗಳನ್ನು ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಮಾಡಲಾಗುವುದು. ಕಮಾಂಡ್ ಸೆಂಟರ್ ಸುಧಾರಣೆ ಕ್ರಮವಾಗಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮತ್ತಷ್ಟು ಬದಲಾವಣೆಗಳನ್ನು ತರಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್…
ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳು… ಕಿಚ್ಚನ ಭಾವುಕ ಮಾತುಗಳು..
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್, ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಪಟ್ಟು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು, ನಿರ್ದೇಶಕರು, ಬರಹಗಾರರು, ನಿರ್ಮಾಪಕರು ಹಾಗೂ ಕನ್ನಡ ಚಲನಚಿತ್ರೋದ್ಯಮದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ತಮ್ಮ ದೀರ್ಘ ಸಿನಿ ಪ್ರಯಾಣಕ್ಕೆ ಎಲ್ಲರ ಸಹಕಾರ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಮೂರು ದಶಕಗಳ ನಂತರವೂ ಈ ಚಿತ್ರಜಗತ್ತಿನಲ್ಲಿ ನಿಂತಿರುವುದು ಅನಂತ ಕೃತಜ್ಞತೆಯ ವಿಷಯ. ಕನಸುಗಳು, ಅನುಮಾನಗಳು ಮತ್ತು ನಿರೀಕ್ಷೆಗಳೊಂದಿಗೆ ಬಂದ ಒಬ್ಬ ಹುಡುಗನಿಗೆ ಇದು ನಾನು ಊಹಿಸಿದ್ದಕ್ಕಿಂತಲೂ ದೊಡ್ಡ ಅನುಭವವಾಗಿದೆ. ಇದಕ್ಕೆ ಕಾರಣರಾದವರು ಎಲ್ಲರೂ ನೀವು” ಎಂದು ಸುದೀಪ್ ಹೇಳಿದ್ದಾರೆ. ಅಭಿಮಾನಿಗಳನ್ನು ತಮ್ಮ ಶಕ್ತಿ ಮತ್ತು ಪ್ರೇರಣೆಯಾಗಿ ಉಲ್ಲೇಖಿಸಿರುವ ಅವರು, ನಿರ್ದೇಶಕರು ಮತ್ತು ಬರಹಗಾರರು ತಮ್ಮ ಮೇಲೆ ನಂಬಿಕೆ ಇಟ್ಟು ಹೊಸ ಸವಾಲುಗಳಿಗೆ ಪ್ರೇರೇಪಿಸಿದುದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿರ್ಮಾಪಕರ ಧೈರ್ಯ…
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಗೆ ವಿಶೇಷ ದಳ ರಚನೆ
ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ಆದೇಶಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನಿರ್ದೇಶನದ ಮೇರೆಗೆ, ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸಲಿದೆ. ತನಿಖಾ ತಂಡದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ಹಲಸೂರು ಗೇಟ್ ಉಪ ಪೊಲೀಸ್ ಆಯುಕ್ತ ಸುಧೀರ್, ಸಿಸಿಆರ್‌ಬಿ ಉಪ ಪೊಲೀಸ್ ಆಯುಕ್ತ ರಾಮಚಂದ್ರ ಹಾಗೂ ಅಶೋಕನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಸೇರಿದ್ದಾರೆ. ಐಟಿ ದಾಳಿ ಹಿನ್ನೆಲೆಯಲ್ಲಿ ಉಂಟಾದ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಆ ಅಂಶವನ್ನೂ ಒಳಗೊಂಡಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಮೊಬೈಲ್ ಫೋನ್ ಪರಿಶೀಲನೆ, ಹಣಕಾಸು ವ್ಯವಹಾರಗಳ ಪರಿಶೋಧನೆ…
”ಕಾನ್ಫಿಡೆಂಟ್’ ಮಾಲೀಕ ಸಿ.ಜೆ.ರಾಯ್ ಸಾವಿನ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಯಲಿ’
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷರಾದ ಡಾ.ಸಿ.ಜೆ.ರಾಯ್ ಅವರ ಸಾವಿನ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಬೇಕೆಂದು ಕ್ರಿಶ್ಚಿಯನ್ ಸೇವಾ ಸಂಘ ಒತ್ತಾಯಿಸಿದೆ. ಕ್ರಿಶ್ಚಿಯನ್ ಸೇವಾ ಸಂಘ (ಸಿಎಸ್‌ಎಸ್) ದಕ್ಷಿಣ ಭಾರತದಾದ್ಯಂತ ಕ್ರಿಶ್ಚಿಯನ್ನರ ಕಲ್ಯಾಣ ಮತ್ತು ಉನ್ನತಿಯನ್ನು ಪರಿಶೀಲಿಸುವ ಜಾತ್ಯತೀತ ವೇದಿಕೆಯಾಗಿದ್ದು, ಇದೀಗ ತಮ್ಮ ಸಮುದಾಯದ ಖ್ಯಾತ ಉದ್ಯಮಿ ಡಾ.ಸಿ.ಜೆ.ರಾಯ್ ಸಾವಿನ ಪ್ರಕರಣದಲ್ಲಿ ಕಾನೂನು ಹೋರಾಟದ ಅನಿವಾರ್ಯತೆಯನ್ನು ಪ್ರತಿಪಾದಿಸಿದೆ. ಈ ಪ್ರಕರಣ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಬೇಕೆಂದು ಕೋರಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ಸಿಎಸ್‌ಎಸ್ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಶನಿವಾರ ಮನವಿ ಸಲ್ಲಿಸಿದ್ದಾರೆ. ಕಾನ್ಫಿಡೆಂಟ್ ಗ್ರೂಪ್‌ನ ಡಾ.ಸಿ.ಜೆ. ರಾಯ್, ಕ್ರಿಶ್ಚಿಯನ್ ಉದ್ಯಮಿ, ದಾರ್ಶನಿಕ ರಿಯಲ್ ಎಸ್ಟೇಟ್ ಡೆವಲಪರ್, ಲೋಕೋಪಕಾರಿ ಮತ್ತು…
ಪ್ರತಿಭಾನ್ವಿತರಿಗೆ ತಕ್ಕ ವೇತನ ನೀಡಬೇಕು, ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು: ಶರಣಪ್ರಕಾಶ್
ಬೆಂಗಳೂರು: ಪ್ರತಿಭಾವಂತ ಕಾರ್ಮಿಕರಿಗೆ ಗೌರವಾನ್ವಿತ ವೇತನ ನೀಡಬೇಕಾದ ಅಗತ್ಯವಿದೆ. ಇಂಥವರನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಶುಕ್ರವಾರ ಆಯೋಜಿಸಿದ ಎಂಎಸ್‌ಎಂಇ ಮತ್ತು ಉದ್ಯೋಗಾವಕಾಶಗಳ ಸಮಾವೇಶವನ್ನು ಉದ್ಘಾಟಿಸಿ ಸಚಿವ ಡಾ. ಪಾಟೀಲ್ ಭಾಷಣ ಮಾಡಿದರು. ಎಂಎಸ್‌ಎಂಇ ವಲಯದಲ್ಲಿ ಕಡಿಮೆ ವೇತನ ಇರುವ ಬಗ್ಗೆ ಮಾಹಿತಿ ಬಂದಿದೆ. ಬೆಂಗಳೂರಿನಂತಹ ನಗರದಲ್ಲಿ ಉದ್ಯೋಗಿಗಳು ಯೋಗ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ಗೌರವಾನ್ವಿತ ವೇತನವನ್ನು ಎಂಎಸ್‌ಎಂಇಗಳು ನೀಡಬೇಕು ಎಂದು ಕರೆ ನೀಡಿದರು. “ಕರ್ನಾಟಕದ ಎರಡನೇ ಮತ್ತು ಮೂರನೇ ಹಂತದ ಪ್ರದೇಶಗಳಲ್ಲಿ ಕೌಶಲ್ಯಪೂರ್ಣ ಮತ್ತು ಅರ್ಹ ಉದ್ಯೋಗಿಗಳು ಬೆಂಗಳೂರಿನಲ್ಲಿ ಉದ್ಯೋಗಗಳನ್ನು ತ್ಯಜಿಸಿ ತವರು ಸ್ಥಳಗಳಿಗೆ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಲಬುರಗಿಯ ವ್ಯಕ್ತಿಯು ಕೇವಲ ₹20,000 ಮಾಸಿಕ ಸಂಬಳದೊಂದಿಗೆ ಬೆಂಗಳೂರಿನಲ್ಲಿ ಹೇಗೆ ಬದುಕಬಹುದು?”…
ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ; ಶರಣಪ್ರಕಾಶ್
ಬೆಂಗಳೂರು: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಬಲೀಕರಣಗೊಳಿಸುವ ಉದ್ದೇಶದಿಂದ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ವಿಕಲಚೇತನರಿಗಾಗಿಯೇ ವಿಶೇಷ ಉದ್ಯೋಗ ಮೇಳವನ್ನು ಮುಂದಿನ ಮೂರು ತಿಂಗಳೊಳಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಹಭಾಗಿತ್ವದಲ್ಲಿ ವಿಕಲಚೇತನರಿಗಾಗಿ ವಿಶೇಷವಾಗಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಇದು ರಾಜ್ಯ ಸರ್ಕಾರದ ವಿನೂತನ ಮತ್ತು ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ವಿಕಲಚೇತನರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಹಾಗೂ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪ್ರಸಕ್ತ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ, ಮಾರುಕಟ್ಟೆ ಬೇಡಿಕೆಗೆ…
ಕಾರ್ಮಿಕ ಮುಖಂಡ ಎಚ್.ವಿ. ಅನಂತ ಸುಬ್ಬರಾವ್ ನಿಧನಕ್ಕೆ ಸಿಎಂ ಸಂತಾಪ
ಬೆಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಹಾಗೂ ಜನಪ್ರಿಯ ಕಾರ್ಮಿಕ ಮುಖಂಡರಾದ ಎಚ್.ವಿ. ಅನಂತ ಸುಬ್ಬರಾವ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಸುದೀರ್ಘ ನಾಲ್ಕು ದಶಕಗಳ ಕಾಲ ಕಾರ್ಮಿಕ ಮುಖಂಡರಾಗಿ ಅನೇಕ ಚಳವಳಿಗಳನ್ನು ಮುನ್ನಡೆಸಿದ್ದ ಹೋರಾಟಗಾರ ಅನಂತ ಸುಬ್ಬರಾವ್ ನನಗೂ ಆತ್ಮೀಯರಾಗಿದ್ದರು. ಅವರ ದಣಿವರಿಯದ ಹೋರಾಟದ ಛಲ ಮತ್ತು ಸೈದ್ಧಾಂತಿಕ ಬದ್ಧತೆ ಹೋರಾಟಗಾರರಿಗೆ ಒಂದು ಮಾದರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ನಿರ್ಗಮನದಿಂದ ಸಮಾಜಕ್ಕೆ, ಮುಖ್ಯವಾಗಿ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿರುವ ಸಿಎಂ, ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಮೂರು ವರ್ಷಗಳಲ್ಲಿ 5542 ಕೋಟಿ ರೂಪಾಯಿ ವಿಮೆ ಪರಹಾರ ವಿತರಣೆ: ಎನ್.ಚಲುವರಾಯಸ್ವಾಮಿ
ಬೆಂಗಳೂರು: ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಅಧಿಕಾರಿಗಳ ಸಭೆ ಮಾಡುವುದರೊಂದಿಗೆ ರೈತರೊಂದಿಗೆ ಹಾಗು ಜನಪ್ರತಿನಿಧಿಗಳೊಂದಿಗೆ ವಿಮೆ ಪರಿಹಾರ ಸುಧಾರಣೆ ತರಲು ಚರ್ಚಿಸಿ ಆಯಾ ಹಂಗಾಮಿನ ವಿಮೆ ಪರಿಹಾರವನ್ನು ಅದೇ ವಾರ್ಷಿಕ ವರ್ಷದ ಅವಧಿಯಲ್ಲಿ ಒದಗಿಸುವಂತೆ ಕ್ರಮ ಜರುಗಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ವಿಧಾನಸಭೆಯಲ್ಲಿ ಉತ್ತರ ನೀಡಿದರು. ಕಲ್ಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಅಧಿಕ ಮಳೆಯಿಂದ ಶೇ 5೦ ಕ್ಕೂ ಹೆಚ್ಚು ಬೆಳೆ ಹಾನಿ ಆದ ಸಂದರ್ಭದಲ್ಲಿ ತಕ್ಷಣವೇ ರೈತರಿಗೆ ಮಿಡ್ ಸೀಸನ್ ಅಡ್ವೈಸರಿ ನಿಯಾಮಾವಳಿ ಪ್ರಕಾರ ವಿಮೆ ಪರಿಹಾರವನ್ನು ನೀಡಿ ರೈತರ ನೇರವಿಗೆ ನಮ್ಮ ಸರ್ಕಾರ ಧಾವಿಸಿದೇ ಎಂದು ಸಚಿವರು ಉತ್ತರಿಸಿದರು. ವಿಶೇಷವಾಗಿ ಕಪ್ & ಕ್ಯಾಪ್…
600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್ ಏರೋಸ್ಪೇಸ್, ಎಕ್ಸೈಡ್ ಎನರ್ಜಿ; ಒಪ್ಪಂದಕ್ಕೆ ಸಹಿ
ಬೆಂಗಳೂರು, ಜ. 28: ಭಾರತದ ಪ್ರಮುಖ ಏರೋಸ್ಪೇಸ್ ಕಂಪನಿಗಳಲ್ಲಿ ಒಂದಾದ ರ‍್ಯಾಂಗ್‌ಸನ್ಸ್ ಏರೋಸ್ಪೇಸ್ ಮತ್ತು ಪ್ರಮುಖ ಬ್ಯಾಟರಿ ತಯಾರಕರಾದ ಎಕ್ಸೈಡ್ ಎನರ್ಜಿ ಕಂಪನಿಯು ಜಿಟಿಟಿಸಿಯಲ್ಲಿ ತರಬೇತಿ ಪಡೆದಿರುವ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿದೆ. ಈ ಕುರಿತು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ರಾಜಾಜಿನಗರ ಜಿಟಿಟಿಸಿ ಕ್ಯಾಂಪಸ್‌ನಲ್ಲಿ ಬುಧವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಟ್ಯೂಬ್‌ಗಳು ಮತ್ತು ನಾಳಗಳು, ಉಪಗ್ರಹ ಸಂವಹನ ವ್ಯವಸ್ಥೆಗಳು, ಉಷ್ಣ ನಿರ್ವಹಣಾ ಪರಿಹಾರಗಳು, AI-ಚಾಲಿತ ಸಾಫ್ಟ್‌ವೇರ್ ಮತ್ತು ರಕ್ಷಣಾ ಮತ್ತು ಏರೋಸ್ಪೇಸ್‌ಗಾಗಿ ಎಂಬೆಡೆಡ್ ಸಿಸ್ಟಮ್‌ಗಳನ್ನು ತಯಾರಿಸುವ ರ‍್ಯಾಂಗ್‌ಸನ್ಸ್ ಏರೋಸ್ಪೇಸ್, ಈಗ ಜಿಟಿಟಿಸಿ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಸಂದೇಶ್ ಪಿ ಸತೀಶ್ ತಿಳಿಸಿದ್ದಾರೆ. “ವೆಲ್ಡಿಂಗ್, ಸಿಎನ್‌ಸಿ, ಸೆಟ್ಟಿಂಗ್ ಮತ್ತು ಪ್ರೋಗ್ರಾಮಿಂಗ್, ಲೇಸರ್ ಕಟಿಂಗ್, ಫಿಟ್ಟಿಂಗ್, ಶೀಟ್…
