ಈ ಬಾರಿ ‘ಸ್ವದೇಶಿ ದೀಪಾವಳಿ’ ಆಚರಿಸಿ; ಚಾಣಕ್ಯ ಅಮಿತ್ ಶಾ ಕರೆ

ನವದೆಹಲಿ: “ಈ ದೀಪಾವಳಿಯಲ್ಲಿ ವಿದೇಶಿ ಸರಕುಗಳ ಬದಲು ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಬಳಸಿ” ಎಂದು ದೇಶದ ಜನತೆಗೆ ಕರೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “140 ಕೋಟಿ ಭಾರತೀಯರ ಸ್ವದೇಶಿ ಮನೋಭಾವ ದೇಶವನ್ನು ವಿಶ್ವದ ಸರ್ವೋನ್ನತ ರಾಷ್ಟ್ರವನ್ನಾಗಿ ಮಾಡಲಿದೆ” ಎಂದರು.

ಗೋವದಲ್ಲಿ ಮಜೇ ಘರ್ ಯೋಜನೆ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನಂತರ ಪಣಜಿಯ ಸಮೀಪದ ಸಾರ್ವಜನಿಕ ಸಭೆಯಲ್ಲಿ ಶನಿವಾರ ಪಾಲ್ಗೊಂಡ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಸುಧಾರಣಾ ಕ್ರಮಗಳನ್ನು ಜಾಗರೂಕತೆಯಿಂದ ಜಾರಿಗೆ ತರುತ್ತಿದೆ. ಈ ಯೋಜನೆಯಿಂದ ಜನರಲ್ಲಿ ಹೆಮ್ಮೆಯ ಭಾವ ಮೂಡಲಿದೆ — ‘ಇದು ನನ್ನ ಮನೆ’ ಎಂದು ಹೇಳುವ ಗೌರವ ದೊರೆಯಲಿದೆ’ ಎಂದರು.

ಆದಾಯ ತೆರಿಗೆ ವಿನಾಯಿತಿ ಕ್ರಮವನ್ನು ಉಲ್ಲೇಖಿಸಿದ ಶಾ, ’12 ಲಕ್ಷ ರೂಪಾಯಿವರೆಗಿನ ಆದಾಯ ಹೊಂದಿರುವವರಿಗೆ ಪ್ರಧಾನಿಯವರು ತೆರಿಗೆ ವಿನಾಯಿತಿ ನೀಡಿದ್ದಾರೆ. ಇದು ಸ್ವಯಂಪೂರ್ಣ ಗೋವಾ ಅಭಿಯಾನದ ಪ್ರಮುಖ ಹೆಜ್ಜೆ. ಗೋವಾವನ್ನು ದೇಶದ ಮೊದಲ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವ ಗುರಿಯತ್ತ ನಾವು ಶ್ರಮಿಸಬೇಕು” ಎಂದು ಹೇಳಿದರು.

Related posts