ಮಲೆ ಮಹದೇಶ್ವರ ಪಾದಯಾತ್ರಿಕರ ಸೇವೆಗಾಗಿ ಸದ್ಭಾವ ಸೇವಾ ಸಮಿತಿ ರಚನೆ

ಚಾಮರಾಜನಗರ: ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಹದೇಶ್ವರ ಬೆಟ್ಟದ ಪಾದಯಾತ್ರಿಕರ ಸೇವೆಗಾಗಿ ಸದ್ಭಾವ ಸೇವಾ ಸಮಿತಿ (ರಿ) ಯನ್ನು ಗೋಪಿಶೆಟ್ಟಿಯೂರು ಬಸವಣ್ಣ ಸ್ವಾಮೀಜಿಯವರು ಉದ್ಘಾಟಿಸಿದರು.

ಮಹದೇಶ್ವರರ ಚಿತ್ರಕ್ಕೆ ಬಸವಣ್ಣ ಸ್ವಾಮೀಜಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಶಾಲಾ ಮಕ್ಕಳು ಪುಷ್ಪಾರ್ಚನೆ ನೇವೇರಿಸಿದರು.

ಗೋಪಿಶೆಟ್ಟಿಯೂರು ಮಠದ ಬಸವಣ್ಣ ಸ್ವಾಮೀಜಿ ಮಾತನಾಡಿ, ಕಳೆದ 20 ವರ್ಷಗಳಿಂದ ಸತತವಾಗಿ ಹನೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಮಲೆ ಮಹದೇಶ್ವರನ ಸನ್ನಿಧಿಗೆ ಪಾದಯಾತ್ರೆ ಮಾಡುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದರು ಈ ಮಾರ್ಗ ಮಧ್ಯದಲ್ಲಿ ಪಾದಯಾತ್ರಿಕರಿಗೆ ಊಟ, ಮಜ್ಜಿಗೆ ,ಪಾನಕ, ನೀರಿನ ವ್ಯವಸ್ಥೆಗಳನ್ನು ಮಾಡಲಾಗುತ್ತಿತ್ತು. ಇದೀಗ ಮಹದೇಶ್ವರನ ಭಕ್ತರು ಸೇರಿ ಮಲೆ ಮಹದೇಶ್ವರನ ಭಕ್ತರಿಗೆ ಪಾದಯಾತ್ರೆ ಸಂದರ್ಭದಲ್ಲಿ ಅಳಿಲು ಸೇವೆ ಮಾಡಲು ಸದ್ಭಾವ ಸೇವಾ ಸಮಿತಿಯನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸದ್ಭಾವ ಸೇವಾ ಸಮಿತಿಯ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಕಳೆದು 20 ವರ್ಷಗಳಿಂದ ಸತತವಾಗಿ ನಮ್ಮ ಆತ್ಮೀಯ ಸ್ನೇಹಿತರು ತಮ್ಮ ತಂಡದೊಂದಿಗೆ ಪಾದಯಾತ್ರೆಗಳಿಗೆ ಸೇವೆಯನ್ನು ನಡೆಸುತ್ತಿದ್ದರು. ಇದೀಗ ಸದ್ಭಾವ ಸೇವಾ ಸಮಿತಿ (ರಿ)ಯನ್ನು ರಚಿಸಿಲಾಗಿದೆ. ಇದರ ಉಪಯೋಗವನ್ನು ಭಕ್ತರು ಪಡೆದುಕೊಳ್ಳಬೇಕೆಂದು ಹೇಳಿದರು..

ಸದ್ಭಾವ ಸೇವಾ ಸಮಿತಿ ಅಧ್ಯಕ್ಷರಾದ ಗಂಗಾಧರ್, ಉಪಾಧ್ಯಕ್ಷ ಡಿ. ಶಂಕರ್ ಖಜಾಂಜಿಯಾದ ನಾರಾಯಣಿ ಹಾಗೂ ಸೇವಾ ಸಮಿತಿಯ ಪದಾಧಿಕಾರಿಗಳು, ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Related posts