ದೆಹಲಿ: ಭಾರತದ ಹೆಮ್ಮೆಯ ‘ಚಂದ್ರಯಾನ-3’ ಯಶಸ್ವಿಯಾಗಿದೆ. ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಧನೆಯ ಕಿರೀಟಕ್ಕೆ ಕಿರೀಟ ಸಿಕ್ಕಿದೆ. ವಿಕ್ರಮ್ ಲ್ಯಾಂಡರ್ ಬುಧವಾರ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ.
ಜುಲೈ 14ರಂದು ‘ಚಂದ್ರಯಾನ 3’ ಉಡ್ಡಯನವಾಗಿದೆ. ಸುದೀರ್ಘ ಪ್ರಯಾಣದ ಬಳಿಕ ಬುಧವಾರ ಸಂಜೆ 6.04 ಸುಮಾರಿಗೆ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡ್ ಆಗಿದೆ. ಈ ಮೂಲಕ ಚಂದ್ರನ ಅಂಗಳದಲ್ಲಿ ನೌಕೆಯನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶವಾಗಿ ಭಾರತ ಗುರುತಾಗಿದೆ.