ಪ್ರತಿಯೊಬ್ಬರಿಗೂ ಒಂದೊಂದು ಘಟನೆ ಪಾಠ ಅಂತಾರೆ ತಿಳಿದವರು. ಇದೀಗ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ಬಗ್ಗೆ ಮೋದಿಯವರು ಪುಟ್ಟ ಮಕ್ಕಳಿಂದ ಪಾಠ ಕಲಿತರೆಂದರೆ ನಂಬುತ್ತೀರಾ? ಅವರೇ ಇದನ್ನು ಹೇಳಿರುವುದರಿಂದ ನಂಬಲೇಬೇಕು..
ದೆಹಲಿ: ಕೊರೋನಾ ಕುರಿತಂತೆ ಪುಟ್ಟ ಮಕ್ಕಳಿಂದ ಪ್ರಧಾನಿ ನರೇಂದ್ರ ಮೋದಿ ಪಾಠ ಕಲಿತರು ಎಂದರೆ ನಂಬುತ್ತೀರಾ? ಪುಟ್ಟ ಮಕ್ಕಳು ಕಲಿಸಿಕೊಟ್ಟ ಪಾಠದಿಂದ ಇಡೀ ದೇಶಕ್ಕೆ ಅವರು ಸಲಹೆ ನೀಡಿದ್ದಾರಂತೆ.
ಇದು ಅಚ್ಚರಿಯ ಸಂಗತಿ ಎನಿಸಿದರೂ ಸತ್ಯ. ಪುಟ್ಟ ಮಕ್ಕಳು ಆಟ ಆಡುತ್ತಾ ಸಾಮಾಜಿಕ ಅಂತರದ ಸಂದೇಶ ರವಾನಿಸಿದ್ದಾರಂತೆ. ಅದನ್ನು ನೋಡುತ್ತಾ ನೋಡುತ್ತಾ ತಾವು ಕೂಡಾ ಅದರ ಮಹತ್ವ ತಿಳಿದೆ ಎನ್ನುತ್ತಾರೆ ಮೋದಿ. ತನಗೆ ಇಷ್ಟವಾದ ಆ ಮಕ್ಕಳ ಆಟದ ವೀಡಿಯೊವನ್ನು ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಅಷ್ಟಕ್ಕೂ ಆ ವೀಡಿಯೋದಲ್ಲಿ ಏನಿದೆ ಗೊತ್ತಾ?
ಐವರು ಮಕ್ಕಳು ಇಟ್ಟಿಗೆ ಯಲ್ಲಿ ಆಟ ಆಡುವ ವೀಡಿಯೋ ಅದು. ಸಾಲು ಸಾಲಾಗಿ ಒಂದಷ್ಟು ಇಟ್ಟಿಗೆಗಳನ್ನು ನಿರ್ದಿಷ್ಟ ಅಂತರದಲ್ಲಿ ನಿಲ್ಲಿಸಿ ನಂತರ ಒಂದು ಇಟ್ಟಿಗೆಯನ್ನು ಬೀಳಿಸುತ್ತಾರೆ. ಅದು ಎಲ್ಲಾ ಇಟ್ಟಿಗೆಗಳು ಬೀಳಲು ಕಾರಣವಾಗುತ್ತೆ. ಹೀಗೆ ಆಟವಾಡುತ್ತಿದ್ದಾಗ ಒಂದೊಮ್ಮೆ ಒಬ್ಬ ಬಾಲಕ ಮಧ್ಯೆ ಒಂದು ಇಟ್ಟಿಗೆಯನ್ನು ತೆಗೆಯುತ್ತಾನೆ. ಅಲ್ಲಿರೆಗಿನ ಎಲ್ಲಾ ಇಟ್ಟಿಗೆಗಳು ಬಿದ್ದವೇ ಹೊರತು ಅನಂತರದ ಇಟ್ಟಿಗೆ ಅಲುಗಾಡಲೇ ಇಲ್ಲ.
ಅದೇ ರೀತಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊರೋನಾ ಹೊಡೆತದಿಂದ ನಾವು ಕೂಡಾ ಪಾರಾಗಬಹುದು ಎಂಬ ಪಾಠವನ್ನು ಈ ಇಟ್ಟಿಗೆ ಆಟದ ವೀಡಿಯೋ ಮೋದಿಯವರಿಗೆ ಕಳಿಸಿತಂತೆ. ಇದೀಗ ಆ ವೀಡಿಯೋ ವನ್ನು ಟ್ವಿಟರ್’ನಲ್ಲಿ ಅವರು ದೇಶದ ಜನತೆ ಜೊತೆ ಹಂಚಿಕೊಂಡು ಗಮನಸೆಳೆಯುವಂತೆ ಮಾಡಿದ್ದಾರೆ.
ಇದನ್ನೂ ಓದಿ.. ಯುವತಿಯರೇ ಹುಷಾರ್.. ಫೇಸ್’ಬುಕ್ ಫ್ರೆಂಡ್ಸ್ ಬಗ್ಗೆ ಎಚ್ಚರವಿರಿ