ಅಂಕಿತ್‌ ಶರ್ಮಾ ಹತ್ಯೆ ಪ್ರಕರಣ: ಆಪ್ ಉಚ್ಚಾಟಿತ ನಾಯಕ ತಾಹಿರ್‌ ಹುಸೇನ್‌ ಬಂಧನ

ನವದೆಹಲಿ: ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಯ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿ ಸಿಬ್ಬಂದಿ ಅಂಕಿತ್‌ ಶರ್ಮಾರ ಹತ್ಯೆ ನಡೆದಿತ್ತು. ಈ ಘಟನೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ತಾಹಿರ್‌ ಹುಸೇನ್‌ ಹೆಸರು ಕೇಳಿಬಂದಿತ್ತು. ಇದೀಗ ತಾಹಿರ್‌ ಹುಸೇನ್‌ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

ದೆಹಲಿ ಹಿಂಸಾಚಾರದ ವೇಳೆ ಅಧಿಕಾರಿ ಅಂಕಿತ್ ಶರ್ಮಾ ಸಾವಿಗೆ ಸಂಬಂಧಿಸಿದಂತೆ ತಾಹಿರ್‌ ಹುಸೇನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆಯೇ, ಆಮ್ ಆದ್ಮಿ ಪಕ್ಷ ತಾಹಿರ್‌ ಹುಸೇನ್‌ರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಈ ಹಿನ್ನೆಲೆಯಲ್ಲಿ ತಾಹಿರ್‌ ಹುಸೇನ್‌ ತಲೆಮರೆಸಿಕೊಂಡಿದ್ದರು.
ಬಂಧನ ಭೀತಿಯಲ್ಲಿದ್ದ ತಾಹಿರ್‌ ಹುಸೇನ್‌ ಗುರುವಾರ ದೆಹಲಿಯ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಕೋರಿದರು. ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತು. ಇದೆ ಸಂದರ್ಭದಲ್ಲಿ ಪೊಲೀಸರು ತಾಹಿರ್‌ ಹುಸೇನ್‌ ಅವರನ್ನು ಬಂಧಿಸಿದ್ದಾರೆ.

Related posts