ರಾಜ್ಯದಲ್ಲಿ ಒಂದೇ ದಿನ 2228 ಕೊರೋನಾ ಕೇಸ್; ಬೆಂಗಳೂರಿನಲ್ಲಿ 1373 ಮಂದಿಯಲ್ಲಿ ಸೋಂಕು

ರಾಜ್ಯದಲ್ಲಿ ಕೊರೋನಾ ವೈರಾಣು ಸವಾರಿ ಶರವೇಗದಲ್ಲಿದೆ. ಇಂದು ಮತ್ತೆ ಪಾಸಿಟಿವ್ ಕೇಸ್’ಗಳು ಆತಂಕಕಾರಿ ಸಂಖ್ಯೆಯಲ್ಲಿದ್ದು ರಾಜ್ಯದಲ್ಲಿ 2228 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಜುಲೈ 8ರ ಸಂಜೆಯಿಂದ ಇಂದು ಸಂಜೆ ವರೆಗಿನ ಬೆಳವಣಿಗೆಗಳನ್ನಾಧರಿಸಿ ಈ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಬೆಂಗಳೂರು ನಗರವೊಂದರಲ್ಲೇ 1373 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದಾರೆ, ದಕ್ಷಿಣಕನ್ನಡದಲ್ಲಿ 167 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಲಬುರಗಿಯಲ್ಲಿ 85, ಧಾರವಾಡದಲ್ಲಿ 75, ಮೈಸೂರಿನಲ್ಲಿ 52 ಪಾಸಿಟಿವ್ ಪ್ರಕರಣಗಳು ಗೊತ್ತಾಗಿವೆ ಎಂದು ಹೆಲ್ತ್ ಬುಲೆಟಿನ್ ಮಾಹಿತಿ ಬಹಿರಂಗಪಡಿಸಿದೆ.

ಈ ನಡುವೆ ಒಂದೇ ದಿನದಲ್ಲಿ 17 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 486 ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಈ ಪ್ರಕಟಣೆ ಹೇಳಿದೆ.

Related posts