ನಿಮ್ಮೂರಲ್ಲಿ ಬರೋಬ್ಬರಿ 36 ತಾಸು ಕರ್ಫ್ಯೂ ಜಾರಿ; ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದೆ. ಲಾಕ್’ಡೌನ್ 4ನೇ ಅವಧಿಯಲ್ಲಿ ಮಾರ್ಗಸೂಚಿ ಸಡಿಲಗೊಳಿಸಲಾಗಿದೆಯಾದರೂ ಕರ್ನಾಟಕದಲ್ಲಿ ಪ್ರತೀ ಭಾನುವಾರ ಮಾತ್ರ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಲಾಕ್’ಡೌನ್ ಮುಂದುವರಿದರೂ ಸೋಂಕಿನ ಸಂಖ್ಯೆ ಕಡಿಮೆಯಾಗಿಲ್ಲ. ಆರ್ಥಿಕತೆಗೆ ಚೇತರಿಕೆ ಬರಲೆಂಬ ಉದ್ದೇಶದಿಂದ ಮಾರ್ಗಸೂಚಿಯಲ್ಲಿ ಬದಲಾವಣೆ ತಂದು ಸಾಮಾಜಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಭಾನುವಾರ ಬಹುತೇಕ ಕಚೇರಿಗಳಿಗೆ ರಜೆ ಇರುವುದರಿಂದಾಗಿ ಅಂದು ಇಡೀ ದಿನ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಮೇ 31 ರವರೆಗೆ ಲಾಕ್’ಡೌನ್ ೪ನೇ ಅವಧಿಯ ಎಲ್ಲಾ ಭಾನುವಾರ ಈ ಕರ್ಫ್ಯೂ ಜಾರಿಯಲ್ಲಿರಲಿದೆ.

ಇದನ್ನೂ ಓದಿ.. ಲಾಕ್’ಡೌನ್ ಸಂದರ್ಭದಲ್ಲೂ ತಿರುಪತಿ ತಿಮ್ಮಪ್ಪನ ಮಹಿಮೆ 

ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಸಮಯದಲ್ಲಿ ಜನರು ಮನೆಯಿಂದ ಹೊರಗೆ ಬಾರದಂತೆ ತಡೆಯಲು ಪೊಲೀಸ್ ಇಲಾಖೆ ನಿಯಮ ರೂಪಿಸಿದೆ. ಈ ಸಂದರ್ಭದಲ್ಲಿ ಏನಿರುತ್ತೆ? ಏನಿರಲ್ಲ? ಎಂಬ ಪ್ರಶ್ನೆಗಳೂ ಜನರನ್ನು ಕಾಡಿದೆ.

  • ಬಿಎಂಟಿಸಿ, ಕೆಎಸ್ಸಾರ್ಟಿಸಿ ಸಹಿತ ಬಸ್ ಸಂಚಾರ ಇರಲ್ಲ
  • ಆಟೋ, ಟ್ಯಾಕ್ಸಿ ಕ್ಯಾಬ್ ಸಹಿತ ಸಾರ್ವಜನಿಕ ಸಂಚಾರ ಬಂದ್
  • ಬೇರೆ ಜಿಲ್ಲೆಗೆ ಹೋಗಲು, ಬೇರೆ ಜಿಲ್ಲೆಗಳನ್ನು ಬರಲು ಅವಕಾಶವಿಲ್ಲ
  • ಅಂಗಡಿ ಮುಂಗಟ್ಟುಗಳು ಬಂದ್ (ಅಗತ್ಯ ವಸ್ತುಗಳನ್ನ ಹೊರತು ಪಡಿಸಿ)
  • ಸಲೂನ್, ಬ್ಯೂಟಿ ಪಾರ್ಲರ್ ಕೂಡಾ ಬಂದ್
  • ಫ್ಯಾಕ್ಟರಿ, ಕಾರ್ಖಾನೆಗಳು, ಖಾಸಗಿ ಕಂಪನಿಗಳೂ ಬಂದ್
  • ಪಾರ್ಕ್ ಗಳಿಗೂ ಬೀಗ, ಜಾಗಿಂಗ್ ವಾಕಿಂಗ್ ಇಲ್ಲ
  • ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಸ್, ಫಾರ್ಮಸಿಗಳಿಗೆ ಅವಕಾಶ
  • ಡಾಕ್ಟರ್ಸ್, ನರ್ಸ್, ಆಂಬುಲೆನ್ಸ್, ಪತ್ರಕರ್ತರ ಓಡಾಟಕ್ಕೆ ಅವಕಾಶ
  • ಗರ್ಭಿಣಿಯರು ಹಾಗೂ ಆರೋಗ್ಯ ಸಮಸ್ಯೆ ಇದ್ದವರು ಆಸ್ಪತ್ರೆಗೆ ತೆರಳಬಹುದು.
  • ಹಣ್ಣು, ತರಕಾರಿ, ದಿನಸಿ, ಮಾಂಸದ ಅಂಗಡಿಗಳಿಗೆ ತೆ ಅವಕಾಶ
  • ಮದುವೆ ಸಮಾರಂಭಗಳಿಗೆ ಷರತ್ತುಬದ್ಧ ಅವಕಾಶ

ಇದನ್ನೂ ಓದಿ.. ಕೊರೋನಾ ವಯಸ್ಸಾದವರಷ್ಟೇ ಅಲ್ಲ ಯುವಜನರನ್ನೂ ಬಲಿಪಡೆಯುತ್ತೆ. ಹುಷಾರ್..

 

Related posts