ಕರುನಾಡಲ್ಲಿ ಕೊರೋನಾ ರಣಕೇಕೆ; ಒಂದೇ ದಿನದಲ್ಲಿ 216 ಹೊಸ ಕೇಸ್

ಬೆಂಗಳೂರು: ಕರುನಾಡಲ್ಲಿ ಕೊರೋನಾ ರಣಕೇಕೆ ಮುಂದುವರಿದಿದ್ದು ಇದೀಗ ಮತ್ತಷ್ಟು ಜನರನ್ನು ಈ ವೈರಾಣು ಅಪ್ಪಿಕೊಂಡಿದೆ. ಲಾಕ್ಡೌನ್ ಜಾರಿಯಲ್ಲಿದ್ದರೂ ಸೋಂಕಿನ ವೇಗ ಹೆಚ್ಚಾಗಿದ್ದು ಇಂದು ಒಂದೇ ದಿನದಲ್ಲಿ 216 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆ ನಡುವೆ ವಿವಿಧ ಜಿಲ್ಲೆಗಳಲ್ಲಿನ ಕೊರೋನಾ ಸೋಂಕಿತರ ಪಟ್ಟಿ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ ಇಂಥದ್ದೊಂದು ಕಳವಳಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಮಧ್ಯಾಹ್ನದ ಹೆಲ್ತ್ ಬುಲೆಟಿನ್’ನಲ್ಲಿ 196 ಪಾಸಿಟಿವ್ ಕೇಸ್’ಗಳ ಅಂಕಿಅಂಶ ಒದಗಿಸಿದ್ದ ಆರೋಗ್ಯ ಇಲಾಖೆ ಸಂಜೆಯಾಗುವಷ್ಟರಲ್ಲಿ ಈ ಸಂಖ್ಯೆ 216 ಕ್ಕೆ ಏರಿಕೆಯಾಗುವುದನ್ನು ವಿವರಿಸಿದೆ.

  • ಯಾದಗಿರಿ – 72 ಹೊಸ ಕೇಸ್ 
  • ರಾಯಚೂರು – 40 ಹೊಸ ಕೇಸ್
  • ಮಂಡ್ಯ – 28 ಹೊಸ ಕೇಸ್ 
  • ಚಿಕ್ಕಬಳ್ಳಾಪುರ – 26 ಹೊಸ ಕೇಸ್
  • ಗದಗ್ – 15  ಹೊಸ ಕೇಸ್ 
  • ಧಾರವಾಡ – 5 ಹೊಸ ಕೇಸ್
  • ಬೆಂಗಳೂರು – 4 ಹೊಸ ಕೇಸ್
  • ಹಾಸನ – 4 ಹೊಸ ಕೇಸ್
  • ದಾವಣಗೆರೆ – 3 ಹೊಸ ಕೇಸ್ 
  • ಬೀದರ್ – 3 ಹೊಸ ಕೇಸ್ 
  • ದಕ್ಷಿಣಕನ್ನಡ – 3 ಹೊಸ ಕೇಸ್
  • ಉಡುಪಿ – 3 ಹೊಸ ಕೇಸ್
  • ಬಳ್ಳಾರಿ – 3 ಹೊಸ ಕೇಸ್
  • ಕೋಲಾರ – 3 ಹೊಸ ಕೇಸ್
  • ಉತ್ತರಕನ್ನಡ – 2 ಹೊಸ ಕೇಸ್
  • ಕಲಬುರಗಿ – 1 ಹೊಸ ಕೇಸ್
  • ಬೆಳಗಾವಿ – 1 ಹೊಸ ಕೇಸ್

ಇಂದು ವರದಿಯಾಗಿರುವ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಈವರೆಗಿನ ದಾಖಲೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1959 ಕ್ಕೆ ಏರಿಕೆಯಾಗಿದೆ. ಇದೆ ವೇಳೆ ರಾಜ್ಯದಲ್ಲಿ 1707 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿದ್ದು ಈ ಪೈಕಿ 13 ಮಂದಿ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ,ಮಾಹಿತಿ ನೀಡಿದೆ. ಈ ಪೈಕಿ ಬಹಳಷ್ಟು ಮಂದಿ ಸೋಂಕಿತರು ಮಹಾರಾಷ್ಟ್ರ ಪ್ರಯಾಣ ಹಿಸ್ಟರಿಯುಳ್ಳವರೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ.. ಕೊರೋನಾ ವೇಗ ಆತಂಕಕಾರಿ; ಇಟಲಿ, ಸ್ಪೇನ್ ದೇಶಗಳನ್ನು ಹಿಂದಿಕ್ಕಿತೇ ಭಾರತ?

 

Related posts