ಎತ್ತ ಸಾಗುತಿದೆ ಕೊರೋನಾ? ಕರ್ನಾಟಕದಲ್ಲಿ ಒಂದೇ ದಿನ 99 ಕೇಸ್; ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆ

ಬೆಂಗಳೂರು: ದೇಶಾದ್ಯಂತ ಕೊರೋನಾ ಹಾವಳಿ ಹೆಚ್ಚಾಗಿದೆ. ಕರ್ನಾಟಕದಲ್ಲಂತೂ ಕೋವಿಡ್-19 ಅಟ್ಟಹಾಸ ಮುಂದುವರಿದಿದ್ದು ಇಂದು ದಾಖಲೆ ಎಂಬಂತೆ 99 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇಂದು ಮತ್ತೊಮ್ಮೆ ಭಾರೀ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿ ಆತಂಕ ಸೃಷ್ಟಿಯಾಗಿದೆ.

ಇದನ್ನೂ ಓದಿ.. ರಾಜ್ಯದ ಜನತೆಗೆ ಗುಡ್ ನ್ಯೂಸ್

ಭಾನುವಾರ ಸಂಜೆ ನಂತರ ಇಂದು ಸಂಜೆ 5 ಗಂಟೆವರೆಗಿನ ಕೊರೋನಾ ಬೆಳವಣಿಗೆ ಕುರಿತು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಸೋಂಕಿತರ ಒಟ್ಟು ಸಂಖ್ಯೆಯನ್ನು ಬಹಿರಂಗಪಡಿಸಿದೆ. ಬೆಂಗಳೂರು ನಗರವೊಂದರಲ್ಲೇ 24 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮಂಡ್ಯದಲ್ಲಿ 17 ಹಾಗೂ ಕಲಬುರಗಿಯಲ್ಲಿ 10 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿರುವ ಸಂಗತಿಯನ್ನು ಹೆಲ್ತ್ ಬುಲೆಟಿನ್’ನಲ್ಲಿ ಉಲ್ಲೇಖಿಸಲಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೇಸ್?

  • ಬೆಂಗಳೂರು ನಗರ – 24 ಹೊಸ ಕೇಸ್
  • ಮಂಡ್ಯ – 17 ಹೊಸ ಕೇಸ್
  • ಕಲಬುರಗಿ – 10 ಹೊಸ ಕೇಸ್
  • ಉತ್ತರಕನ್ನಡ – 9 ಹೊಸ ಕೇಸ್
  • ರಾಯಚೂರು – 6 ಹೊಸ ಕೇಸ್
  • ವಿಜಯಪುರ – 5 ಹೊಸ ಕೇಸ್
  • ಗದಗ್ – 5 ಹೊಸ ಕೇಸ್
  • ಯಾದಗಿರಿ – 5 ಹೊಸ ಕೇಸ್
  • ಕೊಪ್ಪಳ – 3 ಹೊಸ ಕೇಸ್
  • ಹಾಸನ – 4 ಹೊಸ ಕೇಸ್
  • ಬೆಳಗಾವಿ – 2 ಹೊಸ ಕೇಸ್
  • ದಕ್ಷಿಣಕನ್ನಡ – 2 ಹೊಸ ಕೇಸ್
  • ದಾವಣಗೆರೆ – 1 ಹೊಸ ಕೇಸ್
  • ಮೈಸೂರು – 1 ಹೊಸ ಕೇಸ್
  • ಬೀದರ್ – 1 ಹೊಸ ಕೇಸ್
  • ಬಳ್ಳಾರಿ – 1 ಹೊಸ ಕೇಸ್
  • ಉಡುಪಿ – 1 ಹೊಸ ಕೇಸ್
  • ಕೊಡಗು – 1 ಹೊಸ ಕೇಸ್

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಒಟ್ಟು ಸೋಂಕಿತರ ಪೈಕಿ 530 ಮಂದಿ ಚಿಕಿತ್ಸೆ ಪಡೆದು ಗುಣಮುಖರಾದರೆ, 37 ಮಂದಿ ಸಾವನ್ನಪ್ಪಿದ್ದಾರೆಂಬ ಅಂಕಿ-ಅಂಶಗಳನ್ನು ಅರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಮೂಲಕ ಬಹಿರಂಗಪಡಿಸಿದೆ.

ಇದನ್ನೂ ಓದಿ.. ಶೋಭಾ ಕರಂದ್ಲಾಜೆ ವೀಡಿಯೊ ಟ್ವೀಟ್ ಸಂಚಲನ 

 

Related posts