ಕಣ್ಸನ್ನೆ ಬೆಡಗಿ ಗುಡ್ ಬೈ? ನಟಿಯನ್ನು ಕಾಡಿದವರು ಯಾರು ಗೊತ್ತಾ?

ಕಣ್ಸನ್ನೆ ಬೆಡಗಿ ಹಿಂಗ್ಯಾಕಾದಲೋ? ಮಿಲಿಯನ್ಸ್ ಫಾಲೋವರ್ಸನ್ನು ಹೊಂದಿದ್ದ ನಟಿ ಪ್ರಿಯಾ ವಾರಿಯರ್ ಇದೀಗ ತನ್ನ ಅಭಿಮಾನಿಗಳಿಗೆ ಶಾಕ್ ಕೊಟ್ತರಿದ್ದಾರೆ.

ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ ವಾರಿಯರ್ ಯಾಕೋ ಏನೂ ಸಂದಿಗ್ಧ ಸ್ಥಿತಿಯಲ್ಲಿದ್ದಾರಾ? ಮತ್ಯಾಕೆ ಈ ರೀತಿ ನಿಗೂಢ ನಡೆ ಅನುಸರಿಸಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಲೇ ಇದ್ದಾರೆ.

ಕಣ್ಸನ್ನೆ ಸೀನ್ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಜಗದ್ವಿಖ್ಯಾತಿಯಾಗಿದ್ದ ಪ್ರಿಯಾ ವಾರಿಯರ್ ‘ವಿಂಕ್ ಗರ್ಲ್’ ಎಂದೇ ಗುರುತಾಗಿದ್ದಾರೆ. ತಮ್ಮ 7.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಈ ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ನಿರ್ಗಮಿಸಿ ಭಾರೀ ಸುದ್ದಿಗೆ ಗ್ರಾಸವಾಗಿದ್ದಾರೆ.

ಆನ್‌ಲೈನ್ ನಿಂದನೆ ಮತ್ತು ಟ್ರೋಲ್‌ಗಳಿಂದ ಬೇಸತ್ತು ಅವರು ಇನ್‌ಸ್ಟಾಗ್ರಾಮ್’ನಿಂದ ನಿರ್ಗಮಿಸಿದ್ದಾರೆ ಎನ್ನಲಾಗಿದೆ. ಇನ್ಸ್ಟಾಗ್ರಾಮ್ ತೊರೆಯುವ ಹಠಾತ್ ನಿರ್ಧಾರ ಕೈಗೊಳ್ಳುವಂತಹಾ ನಿಂದನೆ ಯಾವುದು? ಅವರನ್ನು ಅಷ್ಟೊಂದು ಕಾಡಿದ ಶತ್ರು ಯಾರು? ಎಂಬ ಚರ್ಚೆಗಳೂ ಸಾಗಿವೆ. ಆದರೆ ಫೇಸ್ಬುಕ್ ಮತ್ತು ಟಿಕ್ ಟಾಕ್ ಖಾತೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ನಿರಾಶರಾಗುವ ಅಗತ್ಯವಿಲ್ಲ. ಅವರು ಮತ್ತೆ ಇನ್‌ಸ್ಟಾಗ್ರಾಮ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಿಯಾ ಆಪ್ತರು ಹೇಳಿಕೊಂಡಿದ್ದಾರೆ.

‘ಒರು ಅಡಾರ್ ಲವ್’ ಚಿತ್ರದಲ್ಲಿ, ಪ್ರಿಯಾ ತನ್ನ ಪ್ರೇಮಿಯತ್ತ ಕಣ್ಣು ಹೊಡೆಯುವ ದೃಶ್ಯ ಮನಮೋಹಕವಾಗಿತ್ತು. ಆ ಮೂಲಕ ಸಿನಿಮಾ ರಂಗದಲ್ಲಿ ಖ್ಯಾತಿಯ ಮೆಟ್ಟಿಲುಗಳನ್ನೇರುತ್ತಿರುವ ಪ್ರಿಯಾಗೆ ಬಾಲಿವುಡ್’ನ ‘ಶ್ರೀದೇವಿ ಬಂಗಲೋ’ ಹಾಗೂ ‘ಲವ್ ಹ್ಯಾಕರ್ಸ್’ನಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಾಯಕನಾಗಿರುವ ‘ವಿಷ್ಣುಪ್ರಿಯ’ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ.. ಶೋಭಾ ಕರಂದ್ಲಾಜೆ ವೀಡಿಯೊ ಟ್ವೀಟ್ ಸಂಚಲನ  

 

Related posts