ದೆಹಲಿ: ಭಾರತದಲ್ಲಿ ಕಿಲ್ಲರ್ ಕೊರೋನಾ ಹಾವಳಿ ಮುಂದುವರಿದಿದ್ದು ನಿತ್ಯವೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದೀಗ ಜಗತ್ತಿನಲ್ಲಿ ಹೆಚ್ಚು ಕೊರೋನಾ ಸೋಂಕಿತ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿದೆ.
ಕೇವಲ 18 ದಿನಗಳಲ್ಲಿ 10 ರಿಂದ 4ನೇ ಸ್ಥಾನಕ್ಕೆ ಭಾರತ ಜಿಗಿದಿರುರುವುದು ಆತಂಕಕಾರಿ ಬೆಳವಣಿಗೆ.
ಭಾರತದಲ್ಲಿ ಈ ವರೆಗೂ ಒಟ್ಟಾರೆ ಸೋಂಕಿತರ ಸಂಖ್ಯೆ 2,93,754ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ 2,91,588 ಸೋಂಕಿತರನ್ನು ಹೊಂದಿರುವ ಬ್ರಿಟನ್ ದೇಶಕ್ಕಿಂತಲೂ ಹೆಚ್ಚು.
- 20 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕ ಮೊದಲ ಸ್ಥಾನದಲ್ಲಿದೆ.
- 7.72 ಲಕ್ಷ ಸೋಂಕಿತರನ್ನು ಹೊಂದಿರುವ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.
- 4.93 ಲಕ್ಷ ಸೋಂಕಿತರನ್ನು ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ.
- 2,93,754 ಸೋಂಕಿತರನ್ನು ಹೊಂದಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ.