ದೆಹಲಿ: ಕೊರೋನಾ ವೈರಾಣು ಹಾವಳಿ ಗುಜರಾತ್ ಮಾದರಿಯೇ? ಇಂಥದ್ದೊಂದು ಅನುಮಾನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟ್ ಮುನ್ನುಡಿ ಬರೆದಿದೆ. ಗುಜರಾತ್ ರಾಜ್ಯದಲ್ಲಿ ಕೋವಿಡ್-19 ಸಾವಿನ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದ್ದು, ಗುಜರಾತ್ ಮಾದರಿ ಬಹಿರಂಗವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೆ ಮುನ್ನ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಗುಜರಾತ್ ರಾಜ್ಯದ ಅಭಿವೃದ್ಧಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ಬಹುತೇಕ ರಾಜ್ಯಗಳಲ್ಲಿ ‘ಗುಜರಾತ್ ಮಾದರಿ’ ಎಂಬ ಮಂತ್ರ ಪಠಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಯ ಈ ಮಂತ್ರವನ್ನೇ ರಾಹುಲ್ ಗಾಂಧೀ ಇದೀಗ ಕೊರೋನಾ ವಿಚಾರವನ್ನು ಮುಂದಿಟ್ಟು ಟ್ವೀಟ್ ಮಾಡಿರಬಹುದೆಂದು ಹೇಳಲಾಗುತ್ತಿದೆ. ಇದೀಗ ಈ ಟ್ವೀಟ್ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
Covid19 mortality rate:
Gujarat: 6.25%
Maharashtra: 3.73%
Rajasthan: 2.32%
Punjab: 2.17%
Puducherry: 1.98%
Jharkhand: 0.5%
Chhattisgarh: 0.35%Gujarat Model exposed.https://t.co/ObbYi7oOoD
— Rahul Gandhi (@RahulGandhi) June 16, 2020
ಇದನ್ನೂ ಓದಿ.. ಮೇಲ್ಮನೆ ಚುನಾವಣೆಗೆ ರಾಜ್ಯ ಬಿಜೆಪಿಯ 12 ಮಂದಿಯ ಪಟ್ಟಿ ಸಿದ್ದ