ಟೋಕಿಯೋ: ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ರೂಪಾಂತರಿತ ಕೊರೋನಾ ವೈರಸ್ ಜಪಾನ್’ನಲ್ಲೂ ತಲ್ಲಣ ಉಂಟು ಮಾಡಿದೆ. ಬ್ರಿಟನ್ ನಲ್ಲಿ ಕಾಣಿಸಿಕೊಂಡ ಈ ಮಹಾಮಾರಿ ವೈರಾಣು ಜಪಾನಿಗೂ ಕಾಲಿಟ್ಟಿದೆ.ಡಿಸೆಂಬರ್ 18ರಿಂದ 21ರವರೆಗೆ ಬ್ರಿಟನ್’ನಿಂದ ಜಪಾನ್’ಗೆ ಬಂದ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಪಾನ್ ಆರೋಗ್ಯ ಸಚಿವ ನೊರಿಹಿಸಾ ತಮುರಾ, ಸೋಂಕು ದೃಢಪಟ್ಟವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಸಂಪರ್ಕದ ಮಾಹಿತಿ ಪಡೆಯಲಾಗುತ್ತಿದೆ ಎಂದಿದ್ದಾರೆ.
ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಪ್ರಮುಖವಾಗಿ ವಿಮಾನ ನಿಲ್ದಾಣಗಳಲ್ಲಿ ಸೋಂಕು ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.