ಕೊರೋನಾ ಹಿಂದೆ ಜಿಹಾದಿಯ ವಾಸನೆ..!! ಏನಿದು ಅನುಮಾನ..?

ದೇಶದಲ್ಲಿ ರೌದ್ರಾವತಾರ ತಾಳಿರುವ ಕೊರೋನಾ ಹಾವಳಿಯ ಹಿಂದೆ ಜಿಹಾದಿಯ ಕೈವಾಡವಿದೆಯೇ..?

ಇಂಥದ್ದೊಂದು ಅನುಮಾನವನ್ನು ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಹುಟ್ಟಿರುವ ಕೊರೋನಾ ಮಹಾಮಾರಿ ವೈರಾಣು ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿದೆ. ಈ ವೈರಸ್ ಭಾರತದಲ್ಲೂ ಕಬಂಧ ಬಾಹುವನ್ನು ಚಾಚುತ್ತಿದ್ದು ಇಡೀ ದೇಶವನ್ನು ತಲ್ಲಣಗೊಳಿಸಿದೆ. ಈ ಕೊರೋನಾ ಕಥೆಯ ಹಿಂದೆ ಜಿಹಾದಿಗಳ ಕೈವಾಡ ಇರಬಹುದೆಂಬ ಸಂಶಯವನ್ನು ಸಂಸದೆ ಶೋಭಾ ಕರಂದ್ಲಾಜೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ನಿಜಾಮುದ್ದೀನ್‌ನಲ್ಲಿನ ತಬ್ಲೀಗ್ ಸಭೆಯಲ್ಲಿ ಭಾಗವಹಿಸಿದ್ದವರು ಭಾರತಾದ್ಯಂತ ಕೊರೋನಾ ಸೋಂಕು ಹಬ್ಬಿಸುವ ದುಷ್ಕೃತ್ಯ ನಡೆಸಿದ್ದಾರೆ. ಇದರ ಹಿಂದೆ ಕೊರೋನಾ ಜಿಹಾದಿಯ ವಾಸನೆ ಬಡಿಯುತ್ತಿದೆ ಎಂದು ದೂರಿದ್ದಾರೆ.

ತಬ್ಲೀಗ್ ಸಭೆ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ನೆಲದ ಕಾನೂನನ್ನು ಪಾಲಿಸದವರ ಬಗ್ಗೆ ಅನುಮಾನಗಳು ಹುಟ್ಟುತ್ತವೆ. ಹಾಗಾಗಿ ಇದರ ಹಿಂದೆ ಷಡ್ಯಂತರ ಇದೆ ಎಂದರ್ಥ ಎಂದು ಹೇಳಿದ್ದಾರೆ.

ದೆಹಲಿಗೆ ತೆರಳಿದ್ದವರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಒಂದು ಸಮುದಾಯದವರಿಂದ ಇದಕ್ಕೆ ಅಡ್ಡಿಯಾಗುತ್ತಿದೆ. ಮತ್ತೊಂದೆಡೆ ಬೆಂಗಳೂರಿನ ಸಾಧಿಕ್ ಬಡಾವಣೆಯಂತಹಾ ಕೃತ್ಯಗಳು ನಡೆಯುತ್ತಿವೆ ಎಂಬಿತ್ಯಾದಿ ಬೆಳವಣಿಗೆಗಳತ್ತ ಬೊಟ್ಟು ಮಾಡಿದ ಅವರು, ಕೊರೋನಾ ವಿಚಾರದಲ್ಲಿ ಉಡಾಫೆ ಮಾಡಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಪಾದಿಸಿದರು.

Related posts