ಬೆಂಗಳೂರು: ಕೊರೋನಾ ವೈರಾಣು ಹಾವಳಿ ಹೆಚ್ಚುತ್ತಲೇ ಇದ್ದು ದೇಶದ ಜನ ಭಯಭೀತರಾಗಿದ್ದಾರೆ. ಅದರಲ್ಲೂ ಲಾಕ್ ಡೌನ್ ನಂತರ ವೈರಾಣು ಹರಡುವಿಕೆ ನಿಯಂತ್ರಣದಲ್ಲಿದೆಯಾದರೂ ಸೋಂಕು ಬೆಳಕಿಗೆ ಬರುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ.
ಕೊರೋನಾ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಸಹಾಯವಾಣಿಗಳ ಮೂಲಕ ಜನರ ಆತಂಕ ದೂರ ಮಾಡುವ ಪ್ರಯತ್ನ ರಾಜ್ಯ ಸರ್ಕಾರದಿಂದ ನಡೆದಿದೆ.
ಇದೆ ವೇಳೆ ರಾಜ್ಯದಲ್ಲಿ ಕೋವಿಡ್-19 ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ವೆಬ್ಸೈಟನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
https://covid19.karnataka.gov.in/kn/ ವಿಳಾಸದ ವೆಬ್’ಸೈಟ್’ನಲ್ಲಿ ಪ್ರಸ್ತುತ ದೃಢಪಟ್ಟಿರುವ ಸೋಂಕಿತರ ಸಂಖ್ಯೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ, ಗುಣಮುಖರಾದವರೆಷ್ಟು, ಮುತರಾದವರ ಸಂಖ್ಯೆ ಇತ್ಯಾದಿ ಸ್ಪಷ್ಟ ಮಾಹಿತಿಗಳು ಸಿಗಲಿವೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ‘ರಾಜ್ಯದಲ್ಲಿ #ಕೋವಿಡ್19 ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ವೆಬ್ಸೈಟ್ ಬಿಡುಗಡೆಯಾಗಿದೆ. ಇದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದ್ದು ಪ್ರತಿದಿನ, ಪ್ರತಿಕ್ಷಣ #ಕೊರೊನ ಸೋಂಕು ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿರುತ್ತವೆ’ ಎಂದು ತಿಳಿಸಿದ್ದಾರೆ.