ಜಗತ್ತು ಈಗ ಯಮದೂತ ವೈರಾಸ್ ಕೊರೋನಾ ಕೈಯಲ್ಲಿದೆ. ವಿಶ್ವದ ಹಿರಿಯಣ್ಣನೇ ಕಂಗಾಲಾಗಿದ್ದಾನೆ. ಅಮೆರಿಕಾ, ಫ್ರಾನ್ಸ್, ಬ್ರಿಟನ್, ಇಟಲಿ ದೇಶಗಳಂತೂ ಅಕ್ಷರಶಃ ಸಾವಿನ ಮನೆಯಂತಾಗಿದೆ. ಎಲ್ಲೆಲ್ಲೂ ಸೂತಕದ ಛಾಯೆ ಆವರಿಸಿದೆ.
ವಾಷಿಂಗ್ಟನ್: ಚೀನೀ ಕೂಸಾಗಿರುವ ಕೋವಿಡ್-19 ವೈರಾಣು ಜಗತ್ತಿನೆಲ್ಲೆಡೆ ಈಗ ತಾಂಡವವಾಡುತ್ತಿದೆ. ಬಲಾಢ್ಯ ರಾಷ್ಟ್ರಗಳೇ ಈ ವೈರಾಣುವಿನ ನರ್ತನಕ್ಕೆ ನಲುಗಿದ್ದು ನಿತ್ಯವೂ ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ. ಅಮೆರಿಕಾ, ಫ್ರಾನ್ಸ್, ಬ್ರಿಟನ್, ಇಟೆಲಿ ದೇಶಗಳಂತೂ ಸ್ಮಾಶಾನದಂತಾಗಿದೆ. ಆ ದೇಶಗಳಲ್ಲಿ ಸೂತಕದ ಛಾಯೆ ಸರಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ.
ಮಂಗಳವಾರ ಒಂದೇ ದಿನ ಅಮೆರಿಕಾದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪಿದರೆ, ಫ್ರಾನ್ಸ್ ನಲ್ಲಿ 1417 ಮಂದಿ, ಬ್ರಿಟನ್’ನಲ್ಲಿ 789 ಮಂದಿ, ಸ್ಪೇನ್’ನಲ್ಲಿ 556 ಮಂದಿ, ಇಟಲಿಯಲ್ಲಿ ಮಂಗಳವಾರ 609 ಸಾವನ್ನಪ್ಪಿದ್ದಾರೆ.
- ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ನ್ಯೂಯಾರ್ಕ್’ನಲ್ಲಿ 731 ಮಂದಿ ಸಾವಿಗೀಡಾಗಿದ್ದು, ತನ್ನ ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಅಮೆರಿಕಾ ಆಡಳಿತದ ಮೂಲಗಳು ಹೇಳಿವೆ. ಅಮೆರಿಕಾದಲ್ಲಿ ಈ ವರೆಗೂ ಸುಮಾರು 12,393 ಮಂದಿಯನ್ನು ಕೊರೋನಾ ಬಲಿಪಡೆದಿದೆ.
- ಫ್ರಾನ್ಸ್ ನಲ್ಲಿ ಕೂಡಾ ಒಂದೇ ದಿನ 1417 ಮಂದಿ ಕೊರೋನಾ ಸೋಂಕಿನಿಂದ ಬಲಿಯಾಗಿದ್ದಾರೆ. ಅಲ್ಲಿ ಸಾವಿನ ಸಂಖ್ಯೆ 10,000 ದಾಟಿದೆ.
- ಆಂಗ್ಲರ ನಾಡಿನಲ್ಲೂ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು,ಮಂಗಳವಾರ ಒಂದೇ ದಿನ 789 ಮಂದಿ ಸಾವಿಗೀಡಾಗಿದ್ದಾರೆ. ಬ್ರಿಟನ್’ನಲ್ಲಿ ಈ ಸೋಂಕು ಒಟ್ಟು 6159 ಮಂದಿಯನ್ನು ಬಲಿತೆಗೆದುಕೊಂಡಿದೆ.
- ಸ್ಪೇನ್’ಕೂಡಾ ಈಗ ಸೂತಕ ಮನೆಯಾಗಿದೆ. ಮಂಗಳವಾರ ಒಂದೇ 556 ಮಂದಿ ಸಾವನ್ನಪ್ಪಿದ್ದು ಇದೀಗ ಆ ದೇಶ ಸ್ಮಶಾನಸದೃಶ ನಾಡಾಗಿ ಪರಿವರ್ತನೆಯಾಗಿದೆ. ಅಲ್ಲಿ ಈವರೆಗೂ ಸುಮಾರು 13,870 ಮಂದಿ ಮೃತಪಟ್ಟಿರುವ ಬಗ್ಗೆ ಅಂಕಿ ಅಂಶ ಸಿಕ್ಕಿದೆ.
- ಇಟಲಿಯಲ್ಲಿ ಮಂಗಳವಾರ 609 ಮಂದಿ ಕೊರೋನಾ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. .ಇದರೊಂದಿಗೆ ಅಲ್ಲಿ ಸಾವಿನ ಸಂಖ್ಯೆ 17,100 ದಾಟಿದೆ.
ಜಗತ್ತಿನಾದ್ಯಂತ ಕೊರೋನಾ ಸೋಂಕು ವಿಸ್ತಾರವಾಗುತ್ತಿದ್ದು ಸಾವಿನ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಒಂದು ಅಂಕಿ ಅಂಶ ಪ್ರಕಾರ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೋನಾ ಸೋಂಕಿನಿಂದ ನಲುಗಿದ್ದು ಜಗತ್ತಿನಾದ್ಯಂತ ಈ ವರೆಗೆ 82,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಇದನ್ನೂ ಓದಿ.. ಮುಂಬೈನಲ್ಲಿ ಸಮುದಾಯ ಹಂತ ತಲುಪಿದ ಕೊರೋನಾ; ಇದೀಗ ಆತಂಕದ ಕ್ಷಣ