ಡ್ರಾಗನ್ ಕುತಂತ್ರಿಗಳನ್ನು ಮೆಟ್ಟಿನಿಲ್ಲಲು ಭಾರತೀಯ ಮೂರೂ ಸೇನಾಪಡೆ ಸರ್ವಸನ್ನದ್ಧ

ದೆಹಲಿ: ಲಡಾಖ್ ಗಡಿಯಲ್ಲಿನ ಚೀನಾ ರಗಳೆ ಭಾರತವನ್ನು ಕೆರಳಿಸುವಂತೆ ಮಾಡಿದೆ. ಅದರಲ್ಲೂ 20 ಯೋಧರನ್ನು ಬಲಿತೆಗೆದುಕೊಂಡಿರುವ ಡ್ರಾಗನ್ ಕುತಂತ್ರಿಗಳನ್ನು ಮೆಟ್ಟಿನಿಲ್ಲಲು ಭಾರತೀಯ ಸೈನಿಕರು ಗಾಡಿಯಲ್ಲಿ ಸರ್ವಸನ್ನದ್ಧರಾಗಿದ್ದಾರೆ.

ಚೀನಾ ಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಭಾರತ ತನ್ನ ಮೂರೂ ಸೇನಾ ಪಡೆಗಳನ್ನು ಸಜ್ಜುಗೊಳಿಸಿದೆ. ಭೂಸೇನೆ, ವಾಯುಪಡೆ, ನೌಕಾಪಡೆಗಳು ಯೋಧರು ಸೂಕ್ಷ್ಮ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು ಚೀನಾದ ಸಮಾರಾ ತಂತ್ರಕ್ಕೆ ಎದಿರೇಟು ಕೊಡಲು ಸಜ್ಜಾಗಿವೆ.

ಮೂರು ಸೇನಾಪಡೆಗಳ ಮುಖ್ಯಸ್ಥರ ರಕ್ಷಣಾ ಸಚಿವ ರಾಜನಾಥ್ ಜೊತೆ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ಚೀನದ ಸೇನಾಪಡೆಗಳೊಂದಿಗಿನ ಕಾದಾಟದಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿದ್ದಾರೆ. ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಸೇನೆಯ ಮುಖ್ಯಸ್ಥರ ಜೊತೆ ಚರ್ಚಿಸಿದ್ದಾರೆ. ಸೂಕ್ತ ಎಚ್ಚರಿಕೆಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

Related posts