ಬೆಂಗಳೂರು: ದೇಶಾದ್ಯಂತ ಸವಾರಿ ಮುಂದುವರಿಸಿರುವ ಕೊರೋನಾ ವೈರಾಣು ಕರ್ನಾಟಕದಲ್ಲಿ ನಿತ್ಯವೂ ಆತಂಕದ ಸುದ್ದಿಯನ್ನೇ ಕೊಡುತ್ತಿದೆ. ಇದೀಗ ಮತ್ತೆ 54 ಹೊಸ ಪಾಸಿಟಿವ್ ಕೇಸ್’ಗಳು ವರದಿಯಾಗಿವೆ.
ಶನಿವಾರ ಸಂಜೆಯಿಂದ ಇಂದು ಮಧ್ಯಾಹ್ನವರೆಗೆ ಮತ್ತೆ 54 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ.
ಈ ಹೆಲ್ತ್ ಬುಲೆಟಿನ್’ನಲ್ಲಿ ಹೇಳಿದಂತೆ 36 ಪುರುಷರು ಹಾಗೂ 18 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಂಡ್ಯ ಜಿಲ್ಲೆಯೊಂದರಲ್ಲೇ 22 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕಲಬುರಗಿಯಲ್ಲಿ 10 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ವರದಿ ಮುಂದಿದೆ.
- ಮಂಡ್ಯ – 22 ಹೊಸ ಕೇಸ್
- ಕಲಬುರಗಿಯಲ್ಲಿ – 10 ಹೊಸ ಕೇಸ್
- ಹಾಸನ – 6 ಹೊಸ ಕೇಸ್
- ಧಾರವಾಡ – 4 ಹೊಸ ಕೇಸ್
- ಯಾದಗಿರಿ- 3 ಹೊಸ ಕೇಸ್
- ಶಿವಮೊಗ್ಗ – 2 ಹೊಸ ಕೇಸ್
- ಕೋಲಾರ – 3 ಹೊಸ ಕೇಸ್
- ದಕ್ಷಿಣ ಕನ್ನಡ – 2 ಹೊಸ ಕೇಸ್
- ಉಡುಪಿ – 1 ಹೊಸ ಕೇಸ್
- ವಿಜಯಪುರ – 1 ಹೊಸ ಕೇಸ್
ಕೋವಿಡ್19: ಮಧ್ಯಾಹ್ನದ ವರದಿ
ಒಟ್ಟು ಪ್ರಕರಣಗಳು: 1146
ಮೃತಪಟ್ಟವರು: 37
ಗುಣಮುಖರಾದವರು: 497
ಹೊಸ ಪ್ರಕರಣಗಳು: 541/2 pic.twitter.com/qjMA8BenzC
— B Sriramulu (Modi Ka Parivar) (@sriramulubjp) May 17, 2020
ರಾಜ್ಯದಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡವರಲ್ಲಿ 10 ಮಕ್ಕಳೂ ಸೇರಿದ್ದಾರೆಂದು ಹೆಲ್ತ್ ಬುಲೆಟಿನ್ ಮಾಹಿತಿ ಬಹಿರಂಗಪಡಿಸಿದೆ.