‘ಹಮ್ ಮೋದಿ ಕೊ ಮಾರೆಂಗೇ’.. ಮಗುವಿನ ಘೋಷಣೆಯ ಹಿಂದಿರುವವರು ಯಾರು?

ದೆಹಲಿ: ಮೋದಿ ವಿಚಾರಧಾರೆಗಳನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕೆಂದಿಲ್ಲ. ಆದರೆ ಸಾಮಾಜಿಕ ಹಿತಾಸಕ್ತಿಗೆ ವಿರುದ್ಧವಾಗಿ ಮೋದಿ ಅಥವಾ ಅವರ ಜೊತೆಗಿರುವವರನ್ನು ಗೇಲಿ ಮಾಡುವುದು ಸರಿಯಲ್ಲ. ಅದರಲ್ಲೂ ಪ್ರಧಾನಿಯನ್ನು ಕೊಲ್ಲುವುದಾಗಿ ಹೇಳೋದು ಎಷ್ಟು ಸರಿ?

ಇಲ್ಲೊಬ್ಬ ಪುಟ್ಟ ಬಾಲಕ ‘ಹಮ್ ಮೋದಿ ಕೊ ಮಾರೆಂಗೇ’ ಎಂದು ಘೋಷಣೆ ಕೂಗಿದ್ದಾನೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏನಿದು ಅಚ್ಚರಿಯ ವೀಡಿಯೋ?

ಕೊರೋನಾದಿಂದ ಗುಣಮುಖರಾದವರು ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆಯೇ ಅವರಿಗೆ ಸ್ವತಂತ್ರರಾದ ಅನುಭವ ಸಾಮಾನ್ಯ. ಚಕ್ರವ್ಯೂಹದಿಂದ ಮುಕ್ತಿ ಸಿಕ್ಕಿದ ಆ ಕ್ಷಣ ಆ ಮಂದಿ ಸಂಭ್ರಮಿಸುವ ರೀತಿಯೇ ವಿಭಿನ್ನ. ಅಂಥದ್ದೇ ಸನ್ನಿವೇಶಕ್ಕೆ ಇಂದೋರ್’ನ ಮೆಡಿಕಲ್ ಕಾಲೇಜ್ ಇತ್ತೀಚಿಗೆ ಸಾಕ್ಷಿಯಾಗಿತ್ತು.

ಮೇ 13 ರಂದು ಇಂದೋರ್’ನ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಹೊರಬಂದ ಕುಟುಂಬ ಸಂತಸದಿಂದ ಕ್ಯಾಮೆರಾಕ್ಕೆ ಫೋಸ್ ಕೊಡುತ್ತಾ ಸಂಭ್ರಮಿಸಿತ್ತು. ಅದಾಗಲೇ ಆ ಗುಂಪಿನಲ್ಲಿದ್ದ 6 ವರ್ಷದ ಮಗುವೊಂದು ‘ನಾವು ಮೋದಿಯನ್ನು ಕೊಲ್ಲುತ್ತೇವೆ’ ಎಂದು ಘೋಷಣೆ ಕೂಗಿದ್ದಾನೆನ್ನಲಾಗಿದೆ. ಈ ವೀಡಿಯೊವನ್ನು ಬಿಜೆಪಿ ನಾಯಕರೊಬ್ಬರು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಬಿಜೆಪಿ ನಾಯಕ ಇದನ್ನು ಪೋಸ್ಟ್ ಮಾಡಿದ್ದೇ ತಡ ಮಾಡಿದ್ದು, ಇದು ಈಗ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ಸನ್ನಿವೇಶದ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘೋಷಣೆ ಕೂಗಲು ಆ ಮಗುವಿಗೆ ಪ್ರೇರಣೆಯಾದವರು ಯಾರು ಎಂಬ ಪ್ರಶ್ನೆಗಳೂ ಕೇಳಿಬಂದಿವೆ.

ಇದನ್ನೂ ಓದಿ.. ದರ್ಶನ್ ಸಿನಿಮಾ ಹಿಟ್ ಆಗುತ್ತವೆ.. ರಹಸ್ಯ ಏನು ಗೊತ್ತೇ..? ‘ಅಧಿಪತಿ’ ಅರ್ಥದ ಹಿಂದಿದೆ ರಹಸ್ಯ 

 

Related posts