ದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ಭೀತಿಯ ಅಲೆ ಎಬ್ಬಿಸಿದ್ದು ಸೋಂಕಿತರ ಸಂಖ್ಯೆ ಹೆಚ್ಚತ್ತಲೇ ಇವೆ. ದೇಶದಲ್ಲಿ ಇದೀಗ ಸೋಂಕಿತರ ಸಂಖ್ಯೆ ಎರಡೂವರೆ ಸಾವಿರ ದಾಟಿದೆ.
ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸೋಂಕು ಹರಡುವ ಪ್ರಕ್ರಿಯೆ ಹತೋಟಿಯಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ ನಿತ್ಯವೂ ನೂರಾರು ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಡುತ್ತಿವೆ. ಇದರಲ್ಲಿ ದೆಹಲಿಯ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿ ವೈರಸ್ ಅಂಟಿಸಿಕೊಂಡವರೇ ಹೆಚ್ಚು ಮಂದಿ.
ಶುಕ್ರವಾರ ಒಂದೇ ದಿನದಲ್ಲಿ ಆಯಾ ರಾಜ್ಯಗಳಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಗಮನಿಸಿದರೆ ನಿಜಕ್ಕೂ ಆತಂಕ ಕಾಡುವಂತಿದೆ. ಅದರಲ್ಲೂ ಶುಕ್ರವಾರ ರಾತ್ರಿವರೆಗೆ 2,547ರಷ್ಟಿದ್ದ ಸೋಂಕಿತರ ಸಂಖ್ಯೆ ಶನಿವಾರ ಬೆಳಿಗ್ಗೆ ಹೊತ್ತಿಗೆ 2900 ದಾಟಿದೆ.
- ದೆಹಲಿಯಲ್ಲಿ 478 ಹೊಸ ಸೋಂಕು ಪ್ರಕರಣಗಳು
- ಉತ್ತರ ಪ್ರದೇಶದಲ್ಲಿ 40 ಹೊಸ ಸೋಂಕು ಪ್ರಕರಣಗಳು
- ತೆಲಂಗಾಣದಲ್ಲಿ 75 ಹೊಸ ಸೋಂಕು ಪ್ರಕರಣಗಳು
- ಅಸ್ಸಾಂನಲ್ಲೂ 4 ಹೊಸ ಸೋಂಕು ಪ್ರಕರಣಗಳು
- ತಮಿಳುನಾಡಿನಲ್ಲಿ 102 ಹೊಸ ಸೋಂಕು ಪ್ರಕರಣಗಳು
ಇದೇ ವೇಳೆ ಕೊರೋನಾ ಸೋಂಕಿನಿಂದ ಸಾವನ್ನಪುಯುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ 6 ಮಂದಿ ಸಾವನ್ನಪ್ಪಿದ್ದು, ಆ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.