ಚೀನಾದಲ್ಲಿ ಹುಟ್ಟಿರುವ ಕೊರೋನಾ ವೈರಸ್ ಇದೀಗ ಜಾಗತಿಕ ಪಿಡುಗು. ಈ ಸೋಂಕಿನ ಸಂಗತಿಯನ್ನೇ ಅಸ್ತ್ರವಾಗಿಸಿ ಮೋದಿ ವಿರುದ್ದ ಪಿತೂರಿ ನಡೆಯಿತೇ? ವಕ್ಫ್ ಬೋರ್ಡ್ ಅಧ್ಯಕ್ಷರೊಬ್ಬರ ಮಾತಿನ ಹಿಂದಿನ ಮರ್ಮವೇನು? –
ದೆಹಲಿ: ಮಾರಕ ಕೊರೋನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಟಾರ್ಗೆಟ್ ಆದರೇ? ಇಂಥದ್ದೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ ಮುಸ್ಲಿಂ ಧಾರ್ಮಿಕ ಮುಖಂಡರ ಹೇಳಿಕೆಗಳು.
ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಿದ್ದಾಗಲೂ ದೆಹಲಿಯ ನಿಜಾಮುದ್ದೀನ್’ನಲ್ಲಿ ನಡೆದ ಧಾರ್ಮಿಕ ಸಭೆ ಇದೀಗ ವಿವಾದದ ಕೇಂದ್ರಬಿಂದು. ಆ ತಬ್ಲಿಘಿ ಜಮಾತ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಮುಸ್ಲಿಂ ನಾಯಕರೇ ಆಕ್ರೋಶ ಹೊರಹಾಕುತ್ತಿದ್ದಾರೆ.
ಮುಸ್ಲಿಂ ಧಾರ್ಮಿಕ ಕಾರ್ಯಕ್ರಮದ ಹೆಸರಲ್ಲಿ ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಿತೂರಿ ನಡೆದಿದೆ ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಬೋರ್ಡ್ ಅಧ್ಯಕ್ಷರು ಮಾಡಿರುವ ಆರೋಪ ಭಾರೀ ಚರ್ಚೆಗೂ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ.. ನಾಡಿನ ದೊರೆಯ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ..
ವಕ್ಫ್ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಈ ಬಗ್ಗೆ ಆಕ್ರೋಶದ ನುಡಿಗಳನ್ನು ಹೊರಹಾಕಿದ್ದಾರೆ. ದೇಶ ಹಾಗೂ ಪ್ರಧಾನಿ ಮೋದಿ ವಿರುದ್ಧ ಪಿತೂರಿ ನಡೆಸಲಾಗಿದೆ. ಕೊರೋನಾ ವೈರಸ್ ಹರಡುವುದರ ಮೂಲಕ ದೇಶದ ಮೇಲೆ ದಾಳಿಗೆ ತಬ್ಲಿಘಿ ಜಮಾತ್ ಯೋಜನೆ ರೂಪಿಸಿರಬಹುದು, ಈ ಮೂಲಕ ಒಂದು ಲಕ್ಷ ಜನರನ್ನು ಕೊಲ್ಲಲು ಜಮಾತ್ ನವರು ಸಂಚು ರೂಪಿಸಿದ್ದರು ಎಂದು ವಾಸೀಮ್ ರಿಜ್ವಿ ಕಿಡಿ ಕಾರಿದ್ದಾರೆ.
ನಿಜಾಮುದ್ದೀನ್ ಮರ್ಕಜ್ ನಲ್ಲಿ ಧಾರ್ಮಿಕ ಸಭೆ ಆಯೋಜಿಸಿದ್ದವರ ವಿರುದ್ಧ ಕಾನೂನು ಕ್ರಮ ಜರುಗಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.