ಕೊರೋನಾ ಸೋಂಕಿತರ ಸಂಖ್ಯೆ ಮೈಸೂರಿನಲ್ಲಿ 8 ವರ್ಷದ ಬಾಲಕಿ, ಬೆಂಗಳೂರಿನಲ್ಲಿ 11 ವರ್ಷದ ಬಾಲಕಿ ಸಹಿತ ಮತ್ತೆ 10 ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಳೆದ ರಾತ್ರಿಯಿಂದೀಚೆಗೆ ರಾಜ್ಯದಲ್ಲಿ ಮತ್ತೆ 10 ಮಂದಿಯಲ್ಲಿ ಕೊರೋನಾ ಸೋಂಕು ಸೃಡಪಟ್ಟಿದ್ದು, ಈ ಬೆಳವಣಿಕೆ ಆತಂಕವನ್ನು ಹೆಚ್ಚಿಸಿದೆ. ಇದರಲ್ಲಿ ದೆಹಲಿಯ ನಿಜಾಮುದ್ದಿನ್ ‘ನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಡಿದ್ದವರೆಂದು ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ ಐವರಲ್ಲಿ ಕೋವಿಡ್-15 ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಜ್ಯುಬಿಲಿಯೆಂಟ್ ಕಂಪನಿಯ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ವರೆಗಿನ ಮಾಹಿತಿಯಂತೆ ಮೈಸೂರಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 42ಕ್ಕೇರಿದೆ.
ಈ ನಡುವೆ ಮೈಸೂರಿನ ಪ್ರಕರಣಗಳಲ್ಲಿ 8 ಮಂದಿ ದೆಹಲಿಯ ನಿಜಾಮುದ್ದಿನಿನಲ್ಲಿನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಡಿದ್ದರೆಂದು ಹೇಳಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರ ಪರೀಕ್ಷೆ ಪಾಸಿಟಿವ್ ಎಂದು ಗೊತ್ತಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ 11 ವರ್ಷದ ಬಾಲಕಿ ಸೇರಿದಂತ್ರ್ ಇಬ್ಬರು ಕೊರೋನಾ ಸೋಂಕಿತರೆಂದು ದೃಢಪಟ್ಟಿದೆ. ಕಲಬುರ್ಗಿಯಲ್ಲೂ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೀಗ ಮತ್ತಷ್ಟು ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕಿತರನ್ನು ಪ್ರತ್ಯೇಕಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.