ದುಬೈ: ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗವನ್ನೇ ಬಾರಿಸುತ್ತಲಿದೆ. ಈಗಾಗಲೇ ಸೋಂಕು ತಗುಲಿರುವ ಚೀನೀಯರ ಸಂಖ್ಯೆ 77 ಸಾವಿರ ದಾಟಿದ್ದು 2 ಸಾವಿರದ 500ಕ್ಕೂ ಹೆಚ್ಚು ಮಂದಿ ಕರೋನ ರೌದ್ರಾವತಾರಕ್ಕೆ ಬಲಿಯಾಗಿದ್ದಾರೆ.
ಇದೀಗ ಕೆಂಪು ನಾಡಿಗಷ್ಟೇ ಈ ಮಹಾಮಾರಿ ಕೊರೋನಾ ವೈರಸ್ ಸೀಮಿತವಾಗಿಲ್ಲ. ದಕ್ಷಿಣ ಕೊರಿಯಾ, ಇಟಲಿ ಸಹಿತ ಪಾಶ್ಚಿಮಾತ್ಯ ದೇಶಗಳಲ್ಲೂ ಕರೋನಾ ತಲ್ಲಣ ಸೃಷ್ಟಿಸಿದೆ. ಇರಾನ್, ಯುಇಎ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲೂ ಭಾರೀ ಪ್ರಮಾಣದಲ್ಲಿ ಈ ಚೀನೀ ಕಾಯಿಲೆ ಹಬ್ಬುತ್ತಿದ್ದು ಪ್ರಸಕ್ತ ಇದು ಜಾಗತಿಕ ಪಿಡುಗಾಗಿ ಭೀತಿ ಸೃಷ್ಟಿಸಿದೆ.
ಈ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ದಕ್ಷಿಣ ಕೊರಿಯಾದಲ್ಲಿ ಸಂಖ್ಯೆ 350 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇರಾನ್, ಇಟಲಿ ಹಾಗೂ ಅರಬ್ ದೇಶಗಳಲ್ಲೂ ಈ ರೋಗ ವೇಗದಲ್ಲಿ ಹಬ್ಬುತ್ತಿದ್ದು ಸಾವಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ಸೋಂಕಿತರ ಹಾಗೂ ವೈರಸ್ ಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿದೆ.