ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು: 2 ಲಕ್ಷ ತಲುಪುವ ಆತಂಕ

ದೆಹಲಿ: ಭಾರತದಲ್ಲಿ ಕೊರೋನಾ ಹಾವಳಿಗೆ ಅಂಕುಶ ಹಾಕಲಾಗುತ್ತಿಲ್ಲ. ದಿನೇ ದಿನೇ ಸೋಂಕು ವ್ಯಾಪಿಸುತ್ತಿದ್ದು, ಶನಿವಾರ ಒಂದೇ ದಿನ ದಾಖಲೆ ಪ್ರಮಾಣದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಷ್ಟೇ ಅಲ್ಲ 193 ಮಂದಿಯನ್ನು ಈ ಕಿಲ್ಲರ್ ಕೊರೋನಾ ಬಲಿತೆಗೆದುಕೊಂಡಿದೆ.

ಮಹಾರಾಷ್ಟ್ರ, ಗುಜರಾತ್ ಸಹಿತ ಕೊರೋನಾ ಪೀಡಿತ ರಾಜ್ಯಗಳಲ್ಲಿ ಈಗಿನ್ನೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸೋಂಕಿಗೂ ಈ ರಾಜ್ಯಗಳಿಂದ ಜನ ವಲಸೆ ಹೋಗಿರುವುದೇ ಕಾರಣ ಎನ್ನಲಾಗಿದೆ.
ಆರೋಗ್ಯ ಇಲಾಖೆ ಪ್ರಕಾರ ಶನಿವಾರ ಒಂದೇ ದಿನ ದೇಶದಲ್ಲಿ 8,380 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,82,143ಕ್ಕೆ ಏರಿಕೆಯಾಗಿದೆ.

Related posts