‘ನಾಲ್ಕೂ ಸದನಗಳ ಸದಸ್ಯರಾಗಿದ್ದ ಡಿ.ಬಿ.ಚಂದ್ರೇಗೌಡ’; ನಾಯಕನ ಅಗಲಿಕೆಗೆ ರವಿ ಶೋಕ

ಬೆಂಗಳೂರು: ನನ್ನ ಆತ್ಮೀಯರೂ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತು ಹೀಗೆ ನಾಲ್ಕೂ ಸದನಗಳ ಸದಸ್ಯರಾಗಿದ್ದ ಚಿಕ್ಕಮಗಳೂರಿನ ನಾಯಕರು, ರಾಜ್ಯದ ಹಿರಿಯ ರಾಜಕಾರಣಿ, ವಿಧಾನಸಭೆಯ ಅಧ್ಯಕ್ಷರಾಗಿ, ರಾಜ್ಯದ ಸಚಿವರಾಗಿ ಅಪ್ರತಿಮ ಸೇವೆ ಸಲ್ಲಿಸಿದ ರಾಜಕೀಯ ಮುತ್ಸದ್ದಿ, ಉತ್ತಮ ಸಂಸದೀಯ ಪಟು ಡಿ. ಬಿ.ಚಂದ್ರೇಗೌಡರು ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಗಿದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಸಂಸ್ಕøತ ನಡವಳಿಕೆಯ ರಾಜಕಾರಣಿಯಾಗಿದ್ದ ಡಿ.ಬಿ.ಚಂದ್ರೇಗೌಡರ ಅಗಲಿಕೆಯ ರಾಜಕೀಯ ಕ್ಷೇತ್ರಕ್ಕೆ, ಚಿಕ್ಕಮಗಳೂರಿನ ಜನತೆಗೆ ತುಂಬಲಾರದ ನಷ್ಟ. ಇಹಕಾಯವನ್ನಗಲಿದ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಅಗಲಿಕೆಯ ದುಃಖ ಮತ್ತು ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಬಂಧು ಮಿತ್ರರಿಗೆ ಮತ್ತು ಅಭಿಮಾನಿ ವರ್ಗಕ್ಕೆ ನೀಡಲಿ ಎಂದು ರವಿ ಪ್ರಾರ್ಥಿಸಿದ್ದಾರೆ.

Related posts