ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್‌; ಓಟಿನ ಆಸೆಗಾಗಿ ದೇಶದ ಸುರಕ್ಷತೆ ಜೊತೆ ಆಟವಾಡಬೇಡಿ’ ಎಂದ ರವಿ

ಬೆಂಗಳೂರು: ಬಾಂಗ್ಲಾದೇಶಿಗಳಿಗೆ 1,500 ರೂ.ಗೆ ಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಬಗ್ಗೆ ಕಾಂಗ್ರೆಸ್ ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದೆ.

ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, “ಅಕ್ರಮ ವಲಸಿಗರು ರಾಜ್ಯಕ್ಕೆ ಮಾರಕವಾಗಬಹುದು ಎಂಬುದನ್ನು ಕಾಂಗ್ರೆಸ್ ಅರಿಯದಿರುವುದು ದುರಾದೃಷ್ಟಕರ. ನಿಮ್ಮ ಓಟಿನ ಆಸೆಗಾಗಿ ದೇಶದ ಆಂತರಿಕ ಸುರಕ್ಷತೆಯೊಂದಿಗೆ ಆಟವಾಡಬೇಡಿ” ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Related posts