ದೊಡ್ಡಬಳ್ಳಾಪುರ: ಮರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಕ್ಕನ್ನು ರಕ್ಷಿಸಲು ಮುಂದಾದ ಯುವಕ, ವಿದ್ಯುತ್ ಶಾಕ್ ಒಳಗಾಗಿ ಸಾವನಪ್ಪಿರುವ ಘಟನೆ ನಗರದ ಜಿ.ರಾಮೇಗೌಡ ವೃತ್ತದ ಸಮೀಪದ ಹಾಲಿನ ಶಿಥಲೀಕರಣ ಘಟಕದ ಬಳಿ ಸಂಭವಿಸಿದೆ.
ಶಾಂತಿನಗರ ನಿವಾಸಿ ರೋಷನ್(20 ವರ್ಷ) ಮೃತ ಯುವಕ ಎಂದು ಗುರುತಿಸಲಾಗಿದೆ. ಗ್ಯಾರೇಜಿನಲ್ಲಿ ಸಾಕಿದ್ದ ಬೆಕ್ಕಿನ ಕೊರಳಿಗೆ ಅಳವಡಿಸಿದ್ದ ಚೈನ್ ಮರಕ್ಕೆ ಸಿಕ್ಕಿಕೊಂಡಿದ್ದರಿಂದ ಬೆಕ್ಕು ಮರದ ಮೇಲೆಯೇ ಕುಳಿತು ಚಿರಾಡುತ್ತಿತ್ತು. ಇದನ್ನು ಗಮನಿಸಿದ ರೋಷನ್, ಬೆಕ್ಕನ್ನು ರಕ್ಷಿಸಲು ಮರ ಏರಿದ್ದಾನೆ.
ಈ ವೇಳೆ ಮರದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ತಗುಲಿ ಯುವಕ ಮರದಲ್ಲೇ ಜೀವ ಬಿಟ್ಟಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..