ಸಿಲಿಕಾನ್ ಸಿಟಿ ಬೆಂಗಳೂರಿನ ಬಹುನಿರೀಕ್ಷಿತ ಸಬರ್ಬನ್ ರೈಲು ಯೋಜನೆ

ದೆಹಲಿ: ಸಿಲಿಕಾನ್ ಸಿಟಿ ಬೆಂಗಳೂರಿನ ಬಹುನಿರೀಕ್ಷಿತ ಸಬರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಶೇ. 60ಷ್ಟು ಅನುದಾನ ಪ್ರಕಟಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಇದನ್ನು ಪ್ರಕಟಿಸಿದ್ಧಾರೆ. 18,600 ಕೋಟಿ ಮೊತ್ತದ ಸಬರ್ಬನ್ ರೈಲು ಯೋಜನೆಯ ಶೇ. 60 ವೆಚ್ಚವನ್ನು ಕೇಂದ್ರವೇ ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಹೊರವರ್ತುಲ ರಸ್ತೆಯಂತೆ ನಗರದ ಸುತ್ತಲೂ 148 ಕಿಮೀ ರೈಲು ಮಾರ್ಗ ನಿರ್ಮಾಣ ಮಾಡುವ ಯೋಜನೆ ಇದಾಗಿದೆ. 7 ರೈಲು ನಿಲ್ದಾಣಗಳನ್ನು ಹೊಂದಲಿರುವ, 148 ಕಿಮೀ ಮಾರ್ಗದಲ್ಲಿ 55 ಕಿಮೀಯಷ್ಟು ಮಾರ್ಗವು ಎಲಿವೇಟೆಡ್ ಆಗಿರಲಿದೆ.

ಸಬರ್ಬನ್ ರೈಲು ಯೋಜನೆಯಲ್ಲಿ ನಾಲ್ಕು ಪ್ರಮುಖ ಮಾರ್ಗಗಳಿವೆ:
1) ಬೈಯಪ್ಪನಹಳ್ಳಿ-ಬಾಣಸವಾಡಿ-ಯಶವಂತಪುರ – 25.1 ಕಿಮೀ
2) ಕೆಂಗೇರಿ-ಕಂಟೋನ್ಮೆಂಟ್-ವೈಟ್ಫೀಲ್ಡ್ – 35.52 ಕಿಮೀ3) ಮಾಗಡಿ ರಸ್ತೆ-ಯಶವಂತಪುರ-ಯಲಹಂಕ-ವಿಮಾನ ನಿಲ್ದಾಣ – 41.4 ಕಿಮೀ
4) ಹೆಲ್ಲಳಿಗೆ-ಬೈಯಪ್ಪನಹಳ್ಳಿ-ಯಲಹಂಕ-ರಾಜಾನುಕುಂಟೆ – 46.24 ಕಿಮೀ)

Related posts