ದೊಡ್ಡಬಳ್ಳಾಪುರ: ಸಾಲ ಬಾಧೆ ತಾಳಲಾರದೆ ವ್ಯಕ್ತಿಯೊಬ್ಬರು ನೇರಳೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂರುವ ಘಟನೆ ತಾಲ್ಲೂಕಿನ ರಘುನಾಥಪುರ ಬಳಿ ನಡೆದಿದೆ.
ಮೃತಪಟ್ಟವರನ್ನು ರಘುನಾಥಪುರ ನಿವಾಸಿ ಗಂಗರಾಜು (40) ಎಂದು ಗುರುತಿಸಲಾಗಿದೆ. ಗಂಗರಾಜು ರಘುನಾಥಪುರ ಬಳಿಯ ಇಂಡೇನಾ ಇಂಡಿಯಾ ಪ್ರ್ಯವೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಸುಮಾರು 10 ವರ್ಷಗಳಿಂದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ವರ್ಷದ ಹಿಂದೆ ಕೆಲಸ ಕಳೆದುಕೊಂಡಿದ್ದ ವಿಜಯ್ ಗೌಡ ಅವರು ಸಂಕಷ್ಟ ಪರಿಸ್ಥಿತಿಯಲ್ಲಿದ್ದರು ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.
ಕೆಲಸ ಕಳೆದುಕೊಂಡ ಮೃತ ಗಂಗರಾಜ ಕೆಲಸ ಸಿಗದೆ ತನ್ನ ಸ್ವಂತ ಮನೆಯನ್ನು ಮಾರಿಕೊಂಡು, ಪತ್ನಿಯ ತವರು ನೆಲಮಂಗಲ ತಾಲ್ಲೂಕಿನ ತ್ಯಾಗದಹಳ್ಳಿಯಲ್ಲಿ ವಾಸವಿದ್ದರು, ಸಂಸಾರದ ನಿರ್ವಹಣೆಗಾಗಿ ಪರದಾಡುತ್ತಿದ್ದ ಅತಿಯಾದ ಸಾಲ ಮಾಡಿಕೊಂಡಿದ್ದು ಸಾಲ ಭಾದೆ ತಾಳಲಾರದೆ ಸೋಮವಾರ ಬೆಳಿನ ಜಾವ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
