ದೊಡ್ಡಬಳ್ಳಾಪುರ: ಲಿಂಗನಹಳ್ಳಿ ಡೇರಿ ಬಿಜೆಪಿ, ಜೆಡಿಎಸ್ ಬೆಂಬಲಿಗರ ತೆಕ್ಕೆಗೆ

ದೊಡ್ಡಬಳ್ಳಾಪುರ: ಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಡೇರಿಯೂ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರ ಪಾಲಾಗಿದೆ. 13 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಲಿಗರು ನಾಲ್ಕು ಜನ ಆಯ್ಕೆಯಾಗಿದ್ದಾರೆ.

ಉಳಿಕೆ 8 ಮಂದಿ ಜೆಡಿಎಸ್, ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದು, ಮೈತ್ರಿ ಸಾಧಿಸಿ ಅಧಿಕಾರಕ್ಕೇರಿದ್ದಾರೆ. ಮೂರು ಸ್ಥಾನಗಳಿಗೆ ಸಮ ಬಲದ ಮತದಾನ ಆಗಿ ಲಾಟರಿ ಮುಖಾಂತರ ಆಯ್ಕೆ ಮಾಡಲಾಯಿತು, ಇದರಲ್ಲಿ ಒಬ್ಬರು ಕಾಂಗ್ರೆಸ್ ಬೆಂಬಲಿಗರಾದರೆ, ಇಬ್ಬರು ಬಿಜೆಪಿ, ಜೆಡಿಎಸ್‌ನವರು ಆಯ್ಕೆಯಾಗಿದ್ದಾರೆ.

ಚುನಾವಣೆ ಅಧಿಕಾರಿ ರಾಮಾಂಜಿನಪ್ಪ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, 25 ಮಂದಿ ಸ್ಪರ್ಧಿಸಿದ್ದರು. ಮುನೇಗೌಡ ಎಂ. ಸಂಜೀವ ಮೂರ್ತಿ ಎಸ್, ನಂಜಾಮರಿಯಪ್ಪ ಎಲ್.ಕೆ. ಪುಟ್ಟಮೂರ್ತಿ ಆರ್., ಮೂರ್ತಿ ಕೆ.ಎನ್., ಶ್ರೀನಿವಾಸ್ ಮೂರ್ತಿ ಎಲ್.ಎನ್., ಆಂಜಿನಪ್ಪ ಹೆಚ್., ಅಂಬಿಕಾ, ಶಶಿಕಲಾ, ಶಾಮಸುಂದರ್ ಎನ್., ರಾಜಣ್ಣ ಎಲ್.ಆರ್., ಮುನಿರಾಜು, ರಾಜಣ್ಣ ಟಿ ಸೇರಿದಂತೆ 13 ಮಂದಿಯನ್ನು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ದೊಡ್ಡಬಳ್ಳಾಪುರದ ಲಿಂಗನಹಳ್ಳಿ ಹಾಲು ಉತ್ಪಾದಕ ಸಹಕಾರಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಗ್ರಾಮಸ್ಥರು, ಮುಖಂಡರು ಅಭಿನಂದಿಸಿದರು.

Related posts