ಕಿಡ್ನಿ ಮನುಷ್ಯನ ಪ್ರಮುಖ ಅಂಗ. ಕಡ್ನಿ ಆರೋಗ್ಯ ಕಾಪಾಡಿದಲ್ಲಿ ಆಯುಷ್ಯ ಹೆಚ್ಚಿದಂತೆ ಎಂಬನಂಬಿಕೆ ಇದೆ. ಕಿಡ್ನಿ ಆರೋಗ್ಯ ಕಾಪಾಡಲು ಉತ್ತಮ ಆಹಾರ ಪದ್ದತಿಯೂ ಮುಖ್ಯ. ಎಣ್ಣೆಯ ಬಳಕೆಗೂ ಪ್ರಮುಖ್ಯತೆ ನೀಡಬೇಕು.
ಹಾಗಾದರೆ ಒಳ್ಳೆಯ ಎಣ್ಣೆ ಯಾವುದು ಎಂದರೆ ಹೇಗೆ ನಿರ್ಧರಿಸಲಿ? ಈ ಪ್ರಶ್ನೆಗೆ ಸಮಾಧಾನದ ಉತ್ತರ – ಆಲಿವ್ ಎಣ್ಣೆ ಒಳ್ಳೆಯ ಆಯ್ಕೆ. ಅದರಿಂದ ಹೃದಯ ಆರೋಗ್ಯವನ್ನು ಉತ್ತಮಗೊಳಿಸಬಹುದು. ಇದಲ್ಲದೆ, ಅದರಲ್ಲಿ ಅಪರ್ಯಾಪ್ತ ಕೊಬ್ಬುಗಳು ಮತ್ತು ವಿಟಮಿನ್-ಇ ಹಾಗೂ ಒಲೀಕ್ ಆಮ್ಲದ ಹೇರಳವಿದ್ದರಿಂದ ಅದು ನಮ್ಮ ಕಿಡ್ನಿಯ ಸಂರಕ್ಷಣೆಗೆ ಸಹಾಯಕವಾಗಿದೆ. ಆದ್ದರಿಂದ ಆಲಿವ್ ಎಣ್ಣೆಯನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉಪಯುಕ್ತವಾಗಿದೆ