ಬೆಂಗಳೂರು: ವಿದ್ಯುತ್ ಕ್ಷೇತ್ರದಲ್ಲಿ ರಾಜ್ಯದ ಹೀನಾಯ ಸ್ಥಿತಿ ಬಗ್ಗೆ ಪ್ರತಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತ ಪರಿಸ್ಥಿತಿಯತ್ತ ಬೊಟ್ಟು ಮಾಡಿದ ವಿಜಯೇಂದ್ರ, ರಾಜ್ಯದ ವಿವಿಧ ಇಲಾಖೆಗಳ ಕಚೇರಿಗಳಿಂದ ₹6 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಇದ್ದು, ಅದರ ವಸೂಲಿಗೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಸ್ವತಃ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ ಎಂದು ಗಮನಸೆಳೆದರು.
ರಾಜ್ಯದ ಯಾವ ಇಲಾಖೆಗಳಲ್ಲೂ ವಿದ್ಯುತ್ ಬಿಲ್ ಪಾವತಿಸುವಷ್ಟೂ ಹಣ ಇಲ್ಲದೆ ಇರುವ ದಾರುಣ ಪರಿಸ್ಥಿತಿಗೆ ತಲುಪಿರುವುದಕ್ಕೆ ಯಾರು ಹೊಣೆಗಾರರು ಎನ್ನುವುದನ್ನು ಮುಖ್ಯಮಂತ್ರಿಗಳೇ ತಿಳಿಸಬೇಕಿದೆ ಎಂದು ವಿಜಯೇಂದ್ರ ಹೇಳಿದರು.
ರಾಜ್ಯದ ವಿವಿಧ ಇಲಾಖೆಗಳ ಕಚೇರಿಗಳಿಂದ ₹6 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಇದ್ದು, ಅದರ ವಸೂಲಿಗೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಸ್ವತಃ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಅರ್ಥಾತ್ ರಾಜ್ಯದ ಯಾವ ಇಲಾಖೆಗಳಲ್ಲೂ ವಿದ್ಯುತ್ ಬಿಲ್ ಪಾವತಿಸುವಷ್ಟೂ ಹಣ ಇಲ್ಲದೆ ಇರುವ ದಾರುಣ… pic.twitter.com/zpbraJajHa— Office of BY Vijayendra (@OfficeofBYV) February 19, 2025